ಯಥರ್ವ ಹಾಗೂ ಐರಾ ಯಶ್ ಅವರ ರಾಖಿ ಹಬ್ಬ ಹೀಗಿತ್ತು ನೋಡಿ

ನಿನ್ನೆ ತಾನೇ ದೇಶಾದ್ಯಂತ ರಕ್ಷಾ ಬಂಧನದ ಹಬ್ಬ ಆಚರಣೆ ಮಾಡಲಾಗಿದೆ. ಸೋದರತ್ವದ ಈ ಭಾಂಧವ್ಯ ಎಷ್ಟು ಪವಿತ್ರವಾದದ್ದು, ಅದರ ಮಹತ್ವ ಏನೆಂಬುದನ್ನ ಈ ರಕ್ಷಾ ಬಂಧನ ವ್ಯಕ್ತಪಡಿಸುತ್ತದೆ. ಅಣ್ಣನಿಗೆ ಅಥವ ತಮ್ಮನಿಗೆ ಕೇವಲ ರಾಖಿ ಕಟ್ಟುವುದು ರಕ್ಷಾ ಬಂಧನ ಅನಿಸಿಕೊಳ್ಳುವುದಿಲ್ಲ. ಆದರೆ ಅದೊಂದು ಭಾವಗಳ ಭಾಂಧವ್ಯದ ಪ್ರೀತಿಯ ಪ್ರತೀಕ ಅನ್ನೋದು ಒಂದು ಮಾತು. ತನ್ನ ಒಡ ಹುಟ್ಟಿದವಳಿಗೆ, ತಾನು ಕುಡಿದ ಎದೆ ಹಾಲನ್ನ ಬೆನ್ನ ಹಿಂದೆ ಬಿದ್ದ ಆ ಸೋದರ ಅಥವಾ ಸೋದರಿ ಅದೇ ತಾಯಿಯ ಎದೆ ಹಾಲನ್ನ ಕುಡಿದು ನೀ ನಡೆದಂತೆ ನಾನು. ನೀ ನುಡಿದಂತೆ ನಾನು. ನಿನ್ನ ಮಾರ್ಗದಲ್ಲಿ ನಿನ್ನಂತೆ ಮಾರ್ಗದರ್ಶನದಲ್ಲಿ ನನ್ನ ಈ ಜೀವನದ ಬಂಡಿ ಸಾಗಲಿ ಎಂದು ಅನೇಕಾನೇಕ ಭಾವಗಳು ಈ ರಕ್ಷಾಬಂಧನದಲ್ಲಿ ಅಡಗಿದೆ.

ಅದರಂತೆ ದೇಶಾದ್ಯಂತ ಮೊನ್ನೆ ಗುರುವಾರ ಆಗಸ್ಟ್ 11ರಂದು ರಕ್ಷಾಬಂಧನದ ಹಬ್ಬದಂದು ಸೋದರ ಸೋದರಿಯರು ರಾಖಿ ಕಟ್ಟಿ ತನ್ನ ಅಣ್ಣ, ತಮ್ಮಂದಿರಿಗೆ ಆರತಿ ಬೆಳಗಿ ಆಶೀರ್ವಾದ ಪಡೆದಿದ್ದಾರೆ. ಅದಕ್ಕೆ ಪ್ರತಿಯಾಗಿ ತನ್ನ ಸೋದರನ ಪ್ರೀತಿ ಪಡೆದು ಉಡುಗೊರೆಯನ್ನ ಕೂಡ ಪಡೆದಿದ್ದಾರೆ. ಅಂತೆಯೇ ಚಂದನವನದ ಯಶಸ್ವಿ ತಾರಾ ಜೋಡಿಗಳಲ್ಲಿ ಒಂದಾದ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಕೂಡ ಅಣ್ಣ ತಂಗಿಯರ ಭಾಂಧವ್ಯದ ಮಹತ್ವವನ್ನು ತಮ್ಮ ಮಕ್ಕಳಿಗೆ ತಿಳಿಸಿಕೊಟ್ಟು ರಕ್ಷಾಬಂಧನ ಆಚರಿಸಿದ್ಧಾರೆ. ಯಶ್ ಮತ್ತು ರಾಧಿಕಾ ಅವರ ಪುತ್ರಿ ಐರಾ ತನ್ನ ಸೋದರ ಯಥರ್ವ್ ನಿಗೆ ರಾಖಿ ಕಟ್ಟಿ ಆರತಿ ಬೆಳಗಿದ್ದಾರೆ.

ತದ ನಂತರ ಸಿಹಿ ತಿನ್ನಿಸಿ ಸೋದರನನ್ನ ಪ್ರೀತಿಯಿಂದ ಅಪ್ಪುಗೆ ಮಾಡಿಕೊಂಡಿದ್ದಾರೆ. ಈ ಪೋಟೋಗಳನ್ನ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಅದರ ಜೊತೆಗೆ ರಾಖಿ ಹಬ್ಬವು ಸಹೋದರ ಸಹೋದರಿಯರ ಸುಂದರ ಬಂಧವಾಗಿದೆ. ಅವರು ಒಟ್ಟಿಗೆ ನಗುತ್ತಾರೆ. ಒಟ್ಟಿಗೆ ಅಳುತ್ತಾರೆ. ಜಗಳ ಆಡುತ್ತಾರೆ. ಪರಸ್ಪರ ಆಡುತ್ತಾರೆ. ಅವರಿಬ್ಬರು ಹತ್ತಿರವಾಗಿದ್ದರೆ ಅಷ್ಟೇ ಸಾಕು. ಎಲ್ಲಾ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ರಾಧಿಕಾ ಪಂಡಿತ್ ಅವರ ಈ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ. ಅದರ ಜೊತೆಗೆ ಯಶ್ ಅವರಿಗೆ ಅವರ ತಂಗಿ ರಾಖಿ ಕಟ್ಟುತ್ತಿರುವ ಫೋಟೋಗಳು ಕೂಡ ವೈರಲ್ ಆಗಿದೆ.

Leave a Reply

%d bloggers like this: