ಯಶಸ್ವಿ 500 ಸಂಚಿಕೆಗಳನ್ನು ಪೂರೈಸಿದ ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿ

ಕನ್ನಡ ಕಿರುತೆತೆಯಲ್ಲಿ ಮತ್ತೊಂದು ಧಾರಾವಾಹಿ ನಾಡಿನ ಜನ ಮನ ಗೆದ್ದು ಯಶಸ್ವಿಯಾಗಿ ಐನೂರು ಸಂಚಿಕೆಗಳನ್ನ ಪೂರೈಸುವತ್ತ ದಾಪುಗಾಲು ಇಡುತ್ತಿದೆ. ಹೌದು ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ವಾಹಿನಿ ಅಂದರೆ ಅದು ಕಲರ್ಸ್ ಕನ್ನಡ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದರೆ ಈ ವಾಹಿನಿಯಲ್ಲಿ ಬರುವ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು ಎಲ್ಲಾ ಭಾಗದ ಜನರಿಗೆ ಕನೆಕ್ಟ್ ಆಗುವಂತಹ ಕಂಟೆಂಟ್ ಹೊಂದಿರುತ್ತವೆ. ಇತ್ತ ದಕ್ಷಿಣ ಕರ್ನಾಟಕದ ವೀಕ್ಷಕರು ಇಷ್ಪಪಡುವಂತಹ ಧಾರಾವಾಹಿಗಳ ಜೊತೆಗೆ ಉತ್ತರ ಕರ್ನಾಟಕದ ವೀಕ್ಷಕರು ಕೂಡ ಮೆಚ್ಚುವಂತಹ ಕಥೆಯ ಎಳೆಯನ್ನಿಟ್ಟುಕೊಂಡು ಧಾರಾವಾಹಿಯೊಂದು ಕಳೆದ ಎರಡು ವರ್ಷಗಳ ಹಿಂದೆ ಕಲರ್ಸ್ ಕನ್ನಡದಲ್ಲಿ ಆರಂಭವಾಯಿತು. ಆ ಧಾರಾವಾಹಿ ಎಲ್ಲರ ಮನ ಗೆಲ್ಲಲು ವಿಶೇಷವಾಗಿ ಉತ್ತರ ಕರ್ನಾಟಕ ಭಾಷೆಯ ಸೊಗಡು ಕೂಡ ಕಾರಣ ಆಯಿತು ಎಂದು ಹೇಳಿದರೆ ತಪ್ಪಾಗಲಾರದು. ಆ ಧಾರಾವಾಹಿ ಬೇರಾವುದು ಅಲ್ಲ.

ಅದೇ ಗಿಣಿರಾಮ ಧಾರಾವಾಹಿ. ಗಿಣಿರಾಮ ಧಾರಾವಾಹಿ ಸದ್ಯಕ್ಕೆ ಕಲರ್ಸ್ ಕನ್ನಡದಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಪಡೆದುಕೊಂಡು ಅಪಾರ ಜನಪ್ರಿಯತೆ ಗಳಿಸಿರುವ ಧಾರಾವಾಹಿಯಾಗಿ ಹೊರ ಹೊಮ್ಮಿದೆ. ಅದರಲ್ಲಿಯೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಪ್ರತಿಯೊಂದು ಧಾರಾವಾಹಿ ಕೂಡ ತಾಮುಂದು ನಾಮುಂದು ಎಂಬಂತೆ ಪೈಪೋಟಿಯೊಂದಿಗೆ ಪ್ರಸಾರವಾಗುತ್ತಿವೆ. ಕಥೆ, ಮೇಕಿಂಗ್, ಕಲಾವಿದರ ಆಯ್ಕೆ ಹೀಗೇ ಪ್ರತಿಯೊಂದರಲ್ಲಿಯೂ ಕೂಡ ಇತ್ತೀಚೆಗೆನ ಎಲ್ಲಾ ಧಾರಾವಾಹಿಗಳು ಉತ್ತಮವಾಗಿ ಮೂಡಿ ಬರುತ್ತಿವೆ. ಇಂತಹ ತೀವ್ರವಾದ ಪೈಪೋಟಿಯ ನಡುವೆ ಗಿಣಿರಾಮ ಧಾರಾವಾಹಿ ಕನ್ನಡನಾಡಿನ ಮನೆ ಮನಗಳಲ್ಲಿ ಹೆಸರು ಮಾಡಿದೆ. ಈ ಗಿಣಿರಾಮ ಧಾರಾವಾಹಿ ಇದೀಗ ಐನೂರು ಸಂಚಿಕೆಯನ್ನು ಪೂರೈಸುವ ಹೊಸ್ತಿಲಲ್ಲಿ ನಿಂತಿದೆ.

2020 ಆಗಸ್ಟ್ ನಲ್ಲಿ ಆರಂಭವಾದ ಈ ಗಿಣಿರಾಮ ಧಾರಾವಾಹಿ ಆರಂಭದ ದಿನಗಳಲ್ಲಿ ಟೇಕಾಫ್ ಆಗಲು ಕೊಂಚ ಸಮಯ ಪಡೆದರು ಕೂಡ ತದ ನಂತರ ವೀಕ್ಷಕರ ಮನಸ್ಸನ್ನ ಗೆದ್ದಿದೆ. ಈಗ ಈ ಗಿಣಿರಾಮ ಧಾರಾವಾಹಿ ಕಲರ್ಸ್ ಕನ್ನಡದ ಟಾಪ್ ಒನ್ ಧಾರಾವಾಹಿಯಾಗಿದೆ. ಈ ಗಿಣಿರಾಮ ಧಾರಾವಾಹಿ ಮೂಲತಃ ಮರಾಠಿ ಧಾರಾವಾಹಿಯ ರೀಮೇಕ್ ಆಗಿದೆ. ಇನ್ನು ಗಿಣಿರಾಮ ಧಾರಾವಾಹಿಯ ಪ್ರಧಾನ ಪಾತ್ರದಲ್ಲಿ ನಟ ಋತ್ವಿಕ್ ಮಠದ್ ಅವರು ಶಿವರಾಮ್ ಪಾತ್ರದಲ್ಲಿ ಮತ್ತು ನಟಿ ನಯನಾ ನಾಗರಾಜ್ ಅವರು ಮಹತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರಿಬ್ಬರ ಜೋಡಿಗೆ ವೀಕ್ಷಕರು ಫಿಧಾ ಆಗಿದ್ದಾರೆ. ಈ ಗಿಣಿರಾಮ ಧಾರಾವಾಹಿಗೆ ಪ್ರೀತಮ್ ಶೆಟ್ಟಿ ನಿರ್ದೇಶನ ಮಾಡಿದ್ದು, ಮಂಜು ಗಂಗಾವತಿ ಅವರು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಾರೆಯಾಗಿ ಗಿಣಿರಾಮ ಧಾರಾವಾಹಿ ಐನೂರು ಸಂಚಿಕೆಗಳ ಹೊಸ್ತಿಲಲ್ಲಿ ನಿಂತಿರೋದಕ್ಕೆ ಇಡೀ ಧಾರಾವಾಹಿ ತಂಡ ಸಂತಸದಲ್ಲಿದ್ದು, ಸಂಭ್ರಮಾಚರಣೆ ಮಾಡಲು ತಯಾರಿ ನಡೆಸುತ್ತಿದೆ.

Leave a Reply

%d bloggers like this: