ಯಶ್ ರನ್ನು ಮದುವೆ ಆಗ್ತೀನಿ ಎಂದ ಹುಡುಗಿ, ಅದಕ್ಕೆ ರಾಧಿಕಾ ಪಂಡಿತ್ ಕೊಟ್ಟ ಉತ್ತರ ಇದು

ಚಂದನವನದ ಯಶಸ್ವಿ ಜೋಡಿಗಳಲ್ಲಿ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಂಪತಿ ಕೂಡ ಒಂದಾಗಿದೆ.ಒಟ್ಟೊಟ್ಟಿಗೆ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ನಟನಾ ವೃತ್ತಿ ಬದುಕು ಮತ್ತು ದಾಂಪತ್ಯ ಬದುಕಿನಲ್ಲಿ ಯಶಸ್ವಿಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕಿರಾತಕ,ಗೂಗ್ಲಿ,ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ನಂತರ ಫೀಮೆಲ್ ಫ್ಯಾನ್ ಫಾಲೋವರ್ಸ್ ಅಪಾರ ಪ್ರಮಾಣದಲ್ಲಿ ಹೆಚ್ಚಾಯಿತು. ಅದರಲ್ಲಿಯೂ ಈ ಕೆಜಿಎಫ್ ಸಿನಿಮಾದ ನಂತರ ಯಶ್ ಅವರ ಕ್ರೇಜ಼್ ದುಪ್ಪಟಾಯಿತು.ಮಾಸ್ ಅಂಡ್ ಕ್ಲಾಸ್ ಹೀರೋ ಆಗಿ ಯಶ್ ಕನ್ನಡ ಮಾತ್ರ ಅಲ್ಲದೆ ತಮಿಳು ತೆಲುಗು ಮ,ಮಲೆಯಾಳಂ ಚಿತ್ರರಂಗದಲ್ಲಿಯೂ ಕೂಡ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇದೀಗ ಕೆಜಿಎಫ್ 2 ಚಿತ್ರದ ಟೀಸರ್,ಟ್ರೇಲರ್ ನಿಂದಾಗಿ ಕೇವಲ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ವಿಶ್ವ ಮಟ್ದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾರೆ.ನಟಿ ರಾಧಿಕಾ ಪಂಡಿತ್ ಕೂಡ ತನ್ನ ಪ್ರತಿಭೆಯ ಮೂಲಕ ಉತ್ತಮ ಹೆಸರು ಗಳಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರಾಧಿಕಾ ಪಂಡಿತ್ ಹಲವು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.ನಟನೆ,ಪ್ರಶಸ್ತಿ ಹೊರತು ಪಡಿಸಿ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಎರಡು ಮುದ್ದಾದ ಮಕ್ಕಳೊಂದಿಗೆ ಆದರ್ಶ ಬದುಕನ್ನು ನಡೆಸುತ್ತಿದ್ದಾರೆ.ತಮ್ಮ ಅಭಿಮಾನಿಗಳಿಗೆ ಮಾದರಿಯಾಗುವಂತೆ ಜೀವನ ನಡೆಸುತ್ತಿದ್ದಾರೆ.ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರೀಯರಾಗಿರುವ ಈ ದಂಪತಿಗಳು ತಮ್ಮ ಮಕ್ಕಳ ಬೆಳವಣಿಗೆಯ ಬಗ್ಗೆ ಆಗಾಗ ಒಂದಷ್ಟು ವೀಡಿಯೋಗಳ ಅಪ್ಡೇಟ್ಸ್ ನೀಡುತ್ತಾ ಇರುತ್ತಾರೆ.ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗೆ ಕೋವಿಡ್ ಸಂಕಷ್ಟ ಸಂಧರ್ಭದಲ್ಲಿ ಕನ್ನಡ ಸಿನಿ ಕಾರ್ಮಿಕರು,ಕಲಾವಿದರು ತಂತ್ರಜ್ಞರು ಸೇರಿದಂತೆ ಬರೋಬ್ಬರಿ ಮೂರು ಸಾವಿರ ಜನರಿಗೆ ತಲಾ ಐದು ಸಾವಿರ ರೂ.ಗಳನ್ನು ನೇರವಾಗಿ ಅವರ ಖಾತೆಗಳಿಗೆ ತಲುಪಿಸಿದ್ದರು.ಸೌಂದರ್ಯದಲ್ಲಿ ಶ್ರೀಮಂತರಾಗಿರುವಂತೆ ರಾಕಿಂಗ್ ಸ್ಟಾರ್ ಯಶ್ ಹೃದಯ ಶ್ರೀಮಂತಿಕೆ,ಮಾನವೀಯತೆಯಲ್ಲಿಯೂ ಕೂಡ ಶ್ರೀಮಂತರೇ.

ಕೇವಲ ತಮ್ಮ ನಟನೆ ಮಾತ್ರ ಅಲ್ಲದೆ ತಮ್ಮ ಸಾಮಾಜಿಕ ಕಾಳಜಿ,ಸಮಾಜ ಮುಖಿ ಕಾರ್ಯಗಳ ಮೂಲಕ ಕರುನಾಡಿನಾದ್ಯಂತ ಮನೆ ಮನಗಳಲ್ಲಿ ಸ್ಥಾನ ಪಡೆದಿದ್ದಾರೆ.ಸಾಮಾನ್ಯವಾಗಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳು ಕೆಲವೊಮ್ಮೆ ಒತ್ತಾಯ ಪೂರ್ವಕವಾಗಿ ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುತ್ತದೆ.ಹೀಗೆ ಖಾಸಗಿ ಕಾರ್ಯವೊಂದರಲ್ಲಿ ಭಾಗವಹಿಸಿದ್ದಾಗ ಮಹಿಳಾ ಅಭಿಮಾನಿಯೊಬ್ಬರು ರಾಧಿಕಾ ಪಂಡಿತ್ ಅವರಿಗೆ ನಾನು ಯಶ್ ಅವರನ್ನು ಮದುವೆ ಆಗಬಹುದೇ ಎಂದು ಪ್ರಶ್ನೆ ಕೇಳಿದ್ದಾರೆ.ಇದಕ್ಕೆ ರಾಧಿಕಾ ಪಂಡಿತ್ ಎಂದಿನಂತೆ ತಮ್ಮ ನಗುಮುಖದಲ್ಲಿಯೇ ಯಶ್ ಅವರು ಒಪ್ಪಿದರೆ ನೀವು ಖಂಡಿತವಾಗಿಯೂ ಮದುವೆ ಆಗಬಹುದು ಎಂದು ಹಾಸ್ಯವಾಗಿ ಉತ್ತರಿಸಿದ್ದಾರೆ.