ಯಶ್ ಹಾಗೂ ಕೆಜಿಎಫ್ ಚಿತ್ರದ ಬಗ್ಗೆ ಹೀಗೆ ಹೇಳಿದ್ರು ಬಾಲಿವುಡ್ ಸುಪ್ರಸಿದ್ಧ ನಿರ್ದೇಶಕರು

ಇನ್ನೊಂದೆರಡ್ ಸಿನಿಮಾ ಸೂಪರ್ ಹಿಟ್ ಆಗ್ಬಿಟ್ರೇ ರಾಕಿಂಗ್ ಸ್ಟಾರ್ ಯಶ್ ಅವರನ್ನ ಉತ್ತರ ಭಾರತದಲ್ಲಿ ಇರೋ ಮೂಲೆ ಮೂಲೆ ಹಳ್ಳಿಯ ಜನ ಕೂಡ ಗುರುತಿಸುತ್ತಾರೆ ಎಂದು ಬಾಲಿವುಡ್ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಮರ್ಷಿಯಲ್ ಹೀರೋಗಳ ಬಗ್ಗೆ ಹೆಚ್ಚು ಮಾತನಾಡದ ಅವರ ಹೀರೋಯಿಸಂ ಒಪ್ಪಿಕೊಳ್ಳದ ಅನುರಾಗ್ ಕಶ್ಯಪ್ ಅವರು ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಹೆಸರನ್ನ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಪ್ರಸ್ತಾಪ ಮಾಡಿದ್ದಾರೆ. ಹೌದು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಗಲಾಟಾ ಪ್ಲಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಅಂತಹ ಖಾನ್ ಗಳ ಮೇಲೆ ಜನರ ವ್ಯಾಮೋಹ ಹೋಗುತ್ತಿದೆ. ಈಗಾಗಲೇ ಕೆಜಿಎಫ್ ಚಿತ್ರ ಬಂದ ನಂತರ ನಮ್ಮ ಉತ್ತರ ಭಾರತದ ಹಳ್ಳಿಗಳಲ್ಲಿಯೂ ಕೂಡ ರಾಕಿಬಾಯ್ ಹೆಸರು ಕೇಳಿ ಬರುತ್ತಿದೆ.

ಈಗಾಗಲೇ ಕೆಜಿಎಫ್2 ಸಿನಿಮಾ ವರ್ಲ್ಢ್ ವೈಡ್ ಅಪಾರ ಜನಪ್ರಿಯತೆ ಪಡೆದಿದ್ದು, ರಾಕಿ ಬಾಯ್ ಯಾರೆಂದು ಎಲ್ಲರಿಗೂ ತಿಳಿದಿದೆ. ಅದೇ ರೀತಿಯಾಗಿ ಇನ್ನೊಂದೆರಡ್ ಸಿನಿಮಾ ಹಿಟ್ ಆದ್ರೇ ಯಶ್ ಅವರ ಹೆಸರು ಉತ್ತರ ಭಾರತದ ಹಳ್ಳಿಗಳಲ್ಲಿಯೂ ಕೂಡ ರಾರಾಜಿಸಲಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಪುಷ್ಪಾ ಚಿತ್ರದ ಪುಷ್ಪಾರಾಜ್ ಪಾತ್ರದ ನಟ ಅಲ್ಲು ಅರ್ಜುನ್ ಅವರ ಹೆಸರು ಕೂಡ ಕೇಳಿ ಬರುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಉತ್ತರ ಭಾರತದ ಜನರಿಗೆ ದಕ್ಷಿಣ ಭಾರತದ ನಟರು ಪರಿಚಯವಾಗಿದ್ದಾರೆ. ಹೀಗೆ ದಕ್ಷಿಣ ಭಾಗದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ರೆ ದಕ್ಷಿಣ ಭಾರತದ ನಟರು ಉತ್ತರ ಭಾರತ ಚಿತ್ರರಂಗವನ್ನು ಆಳುವುದರಲ್ಲಿ ನೋ ಡೌಟ್ ಎಂದು ಹೇಳಿದ್ದಾರೆ. ಈ ಹಿಂದೆ ಅನುರಾಗ್ ಕಶ್ಯಪ್ ಅವರು ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ರಾಜ್.ಬಿ.ಶೆಟ್ಟಿ ಅವರಿಗೆ ಫಿಧಾ ಆಗಿದ್ದರು. ಅಷ್ಟೇ ಅಲ್ಲದೇ ಗರುಡ ಗಮನ ವೃಷಭ ವಾಹನ ಚಿತ್ರದ ಬಗ್ಗೆ ಬರೆದು ನಟ, ನಿರ್ದೇಶಕ ರಾಜ್.ಬಿ.ಶೆಟ್ಟಿ ಅವರ ಕೆಲಸ ಕಂಡು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ ಯಶ್ ಅವರನ್ನ ಹೊಗಳಿದ್ದಾರೆ. ಕೆಜಿಎಫ್ ಚಿತ್ರ ಆದ ನಂತರ ರಾಕಿಂಗ್ ಸ್ಟಾರ್ ಯಶ್ ರಾಕಿಬಾಯ್ ಆಗಿ ಎಲ್ಲೆಡೆ ಅಬ್ಬರಿಸುತ್ತಿದ್ದಾರೆ. ಅದೇ ರೀತಿಯಾಗಿ ಹಿರಿಯ ಸಿನಿಮಾ ವಿಮರ್ಶಕ ಭಾರದ್ವಜ ರಂಗನ್ ಅವರು ಚೆನ್ನೈನಲ್ಲಿ ಕೆಜಿಎಫ್2 ಚಿತ್ರ ನೋಡುವಾಗ ಟೈಟಲ್ ಕಾರ್ಡ್ ನಲ್ಲಿ ಯಶ್ ಅವರ ಹೆಸರು ಬರುತ್ತಿದ್ದಂತೆ ಅಲ್ಲಿನ ಫ್ಯಾನ್ಸ್ ಕ್ರೇಜ಼್ ಕಂಡು ಬೆರಗಾಗಿದ್ದರಂತೆ. ಯಾಕಂದ್ರೆ ತಮಿಳುನಾಡಿನಲ್ಲಿ ವಿಜಯ್ ಅವರ ಸಿನಿಮಾಗಳಿಗೆ ಅಭಿಮಾನಿಗಳು ಸ್ಕ್ರೀನ್ ಮುಂದೆ ಹೋಗಿ ಕುಣಿದು , ಕುಪ್ಪಳಿಸಿ, ಶಿಳ್ಳೆ ಹಾಕುತ್ತಾರೆ. ಅವರನ್ನ ಹೊರತು ಪಡಿಸಿ ಇನ್ಯಾವ ನಟರಿಗೂ ಆ ರೀತಿಯ ಕ್ರೇಜ಼್ ಇರುವುದಿಲ್ಲವಂತೆ. ಹಾಗಿದ್ದ ಸಂಧರ್ಭದಲ್ಲಿ ಕನ್ನಡದ ನಟ ಯಶ್ ಅವರಿಗೆ ತಮಿಳಿನಲ್ಲಿ ಇರೋ ಫ್ಯಾನ್ಸ್ ಬೇಸ್ ಕಂಡು ಸಿನಿಮಾ ವಿಮರ್ಶಕರು ಕೂಡ ಬಹಳ ಅಚ್ಚರಿ ವ್ಯಕ್ತಪಡಿಸಿದರು ಎಂದು ಅನುಭವ ಹಂಚಿಕೊಂಡಿದ್ದಾರೆ.