ಯಶ್ ಎದುರು ಬಂದಿದ್ದರೆ ನಿಜವಾಗಿಯೂ ನಾನು ಕೆಜಿಎಫ್2 ಸಿನಿಮಾದ ಎದುರು ಧೂಳಿಪಟ ಆಗಿ ಬಿಡುತ್ತಿದ್ದೆವು, ಅಮಿರ್ ಖಾನ್

ಕೆಜಿಎಫ್2 ಸಿನಿಮಾದ ಬಗ್ಗೆ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಶಾಕಿಂಗ್ ಹೇಳಿಕೆಯೊಂದನ್ನ ಮುಕ್ತವಾಗಿ ಹೇಳಿದ್ದಾರೆ. ಈ ಹೇಳಿಕೆ ಅಮೀರ್ ಖಾನ್ ಅವರಿಗೆ ಯಾವುದೇ ರೀತಿಯ ಹಿಂಜರಿಕೆ ಮುಖಭಂಗ ಆಗದೇ ಹೋದರು ಬಾಲಿವುಡ್ ನ ಅನೇಕ ಸ್ಟಾರ್ ನಟರಿಗೆ ಭಾರಿ ಮುಖಭಂಗ ಆದಂತಾಗಿದೆ. ಹೌದು ನಟ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಸಿನಿಮಾ ನಮ್ಮ ಕನ್ನಡದ ಕೆಜಿಎಫ್2 ಚಿತ್ರ ರಿಲೀಸ್ ಆಗುವ ದಿನದ ಸಮೀಪವೇ ರಿಲೀಸ್ ಆಗುವ ತಯಾರಿ ನಡೆಸಿತ್ತು. ಆದರೆ ಕೆಜಿಎಫ್ ಚಿತ್ರದ ಮೊದಲ ಭಾಗ ಸೃಷ್ಟಿಸಿದ ಸಂಚಲನದಿಂದ ಆಡೀ ಭಾರತೀಯ ಚಿತ್ರರಂಗವೇ ಕೆಜಿಎಫ್2 ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿತ್ತು. ಅದರಲ್ಲಿಯೂ ಕೆಜಿಎಫ್2 ಸಿನಿಮಾದ ಟೀಸರ್ ಒಂದೇ ದಿನದಲ್ಲೇ ಕೋಟಿಗಟ್ಟಲೇ ವೀಕ್ಷಣೆ ಪಡೆದು ವಿಶ್ವದ ಮಟ್ಟದಲ್ಲಿ ಸದ್ದು ಮಾಡಿ ದಾಖಲೆ ನಿರ್ಮಾಣ ಮಾಡಿತು. ಈ ಒಂದು ಮುನ್ಸೂಚನೆ ನಮ್ಮ ಕನ್ನಡದ ಕೆಜಿಎಫ್2 ಸಿನಿಮಾದ ಹವಾ ಯಾವ ಮಟ್ಟಿಗೆ ಇರಲಿದೆ ಅನ್ನೋದನ್ನ ಸೂಚಿಸಿತ್ತು.

ಇದನ್ನ ಮನಗಂಡಂತಹ ಅಮೀರ್ ಖಾನ್ ಅವರು ತಮ್ಮ ಲಾಲ್ ಸಿಂಗ್ ಛಡ್ಡಾ ಚಿತ್ರದ ರಿಲೀಸ್ ಡೇಟ್ ಅನ್ನ ಮುಂದೂಡಿಕೆ ಮಾಡಿಕೊಂಡರು. ಇದು ಲಾಲ್ ಸಿಂಗ್ ಛಡ್ಡಾ ಚಿತ್ರದ ಕೆಲವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಳ್ಳಲು ಸಹಾಯಕಾರಿಯಾಯಿತು. ಇತ್ತೀಚೆಗೆ ಇದೇ ವಿಚಾರವಾಗಿ ನಟ ಅಮೀರ್ ಖಾನ್ ಅವರು ನಾವು ಕೆಜಿಎಫ್2 ಚಿತ್ರದ ಎದುರು ನಮ್ಮ ಲಾಲ್ ಸಿಂಗ್ ಛಡ್ಡಾ ಸಿನಿಮಾವನ್ನ ರಿಲೀಸ್ ಮಾಡದೇ ನಾವು ಬದುಕಿದೆವು‌. ನಮ್ಮ ಸಿನಿಮಾವನ್ನ ನಾವು ಸೋಲಿಂದ ತಪ್ಪಿಸಿಕೊಳ್ಳುವಂತೆ ಮಾಡಿಕೊಂಡೆವು. ಒಂದು ವೇಳೆ ನಾವು ರಾಕಿಬಾಯ್ ಎದುರು ಬಂದಿದ್ದರೆ ನಿಜವಾಗಿಯೂ ನಾನು ಕೆಜಿಎಫ್2 ಸಿನಿಮಾದ ಎದುರು ಧೂಳಿಪಟ ಆಗಿ ಬಿಡುತ್ತಿದ್ದೆವು ಎಂದು ಅಮೀರ್ ಖಾನ್ ಅವರು ಮುಕ್ತವಾಗಿಯೇ ತಾವು ಕೆಜಿಎಫ್2 ಸಿನಿಮಾಗೆ ಎದುರಿದ್ದು ನಿಜ ಅಂತ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ನಿರೀಕ್ಷೆಯಂತೆ ಕೆಜಿಎಫ್2 ಎದುರು ತೆರೆಕಂಡ ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ ಅವರ ಬೀಸ್ಟ್ ಸಿನಿಮಾ ಹೇಳ ಹೆಸರಿಲ್ಲದಂತೆ ಮಕಾಡೆ ಮಲಗಿತು. ಅದರಂತೆ ಕೆಜಿಎಫ್ ಪಾರ್ಟ್ ಒನ್ ರಿಲೀಸ್ ಆದಾಗ ಕೂಡ ತಮಿಳಿನ ಖ್ಯಾತ ಸ್ಟಾರ್ ನಟ ಧನುಷ್ ಅವರ ಮಾರಿ2 ಚಿತ್ರ ಮತ್ತು ಶಾರುಖ್ ಖಾನ್ ಅವರ ಜೀ಼ರೋ ಸಿನಿಮಾ ಕೂಡ ಸೋಲನ್ನ ಅನುಭವಿಸಿದ್ದವು. ಅದರಂತೆ ಕೆಜಿಎಫ್2 ಚಿತ್ರ ರಿಲೀಸ್ ಟೈಮಿಗೆ ವಿಜಯ್ ಅವರ ಬೀಸ್ಟ್ ಮತ್ತು ಹಿಂದಿಯ ಬಹುತೇಕ ಸಿನಿಮಾಗಳು ಸೋಲನ್ನ ಕಂಡವು. ಇದನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡು ಅಮೀರ್ ಖಾನ್ ಅವರು ಯಶ್ ಅವರ ಕೆಜಿಎಫ್2 ಚಿತ್ರದ ಎದುರಿಗೆ ಪೈಪೋಟಿ ನಿಲ್ಲದೆ ತಮ್ಮ ಲಾಲ್ ಸಿಂಗ್ ಛಡ್ಡಾ ಚಿತ್ರವನ್ನ ಎಚ್ಚರಿಕೆಯಿಂದ ಮುಂದೂಡಿ ಜಾಣ್ಮೆ ನಡೆ ಪ್ರದರ್ಶಿಸಿದರು. ಇನ್ನು ಅಮೀರ್ ಖಾನ್ ಅಭಿನಯದ ಈ ಲಾಲ್ ಸಿಂಗ್ ಛಡ್ಡಾ ಸಿನಿಮಾ ಹಾಲಿವುಡ್ನ ಕ್ಲಾಸಿಕ್ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿದ್ದು ಇದೇ ಆಗಸ್ಟ್ 11ರಂದು ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ.

Leave a Reply

%d bloggers like this: