ಯಶ್ ಅವರ ಸಿನಿಮಾ ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು, ಎಲ್ಲೆಲ್ಲೂ ಯಶ್ ಅವರದ್ದೆ ಸುದ್ದಿ

ಕೆಜಿಎಫ್2 ಚಿತ್ರದ ಅಭೂತಪೂರ್ವ ಯಶಸ್ಸಿನ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಳೆಯ ಸಿನಿಮಾಗಳಿಗೆ ಪರಭಾಷೆಗಳ ಡಬ್ಬಿಂಗ್ ಗಾಗಿ ಇದೀಗ ಭಾರಿ ಬೇಡಿಕೆ ಉಂಟಾಗಿದೆ. ಹೌದು ಇದೀಗ ಯಶ್ ಅವರನ್ನ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಂತ ಕರೆಯೋದಕ್ಕಿಂತ ಹೆಚ್ಚಾಗಿ ನ್ಯಾಶನಲ್ ಸ್ಟಾರ್ ರಾಕಿ ಭಾಯ್ ಅಂತಾನೇ ಕರೆಯಬೇಕಾಗಿದೆ. ಯಾಕಂದ್ರೇ ಕೆಜಿಎಫ್ ಚಿತ್ರದ ನಂತರ ಯಶ್ ಅವರ ಹವಾ ಅಷ್ಟರ ಮಟ್ಟಿಗೆ ಸೃಷ್ಟಿಯಾಗಿದ್ದು, ವರ್ಲ್ಡ್ ವೈಡ್ ರಾಕಿ ಬಾಯ್ ಅಂತಾನೇ ಅಪಾರ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ ಭರ್ಜರಿ ಯಶಸ್ಸು ಕಂಡ ಪರಭಾಷೆ ಚಿತ್ರರಂಗದ ಒಂದಷ್ಟು ನಿರ್ಮಾಪಕರು ಇದೀಗ ನಟ ಯಶ್ ಅವರು ನಟಿಸಿದ ಸಿನಿಮಾಗಳನ್ನ ತಮ್ಮ ಭಾಷೆಗೆ ಡಬ್ ಮಾಡಲು ಮುಂದೆ ಬರುತ್ತಿದ್ದಾರೆ.

ಕೆಲವು ತಿಂಗಳ ಹಿಂದೆಯಷ್ಟೇ ಯಶ್ ಅವರ ನಟನೆಯ ಲಕ್ಕಿ ಸಿನಿಮಾ ಪರಭಾಷೆಗಳಿಗೆ ಡಬ್ ಆಗಿತ್ತು. ಇದೀಗ ಯಶ್ ನಟನೆಯ ಮತ್ತೊಂದು ಚಿತ್ರ ರೀಮೇಕ್ ಆಗಲು ಸಜ್ಜಾಗಿದೆ. ಹೌದು ನಟ ಯಶ್ ಅವರಿಗೆ ಸ್ಟಾರ್ ಢಮ್ ಹೆಚ್ಚಾಗಲು ಮತ್ತು ಅವರ ವೃತ್ತಿ ಜೀವನಕ್ಕೆ ಬ್ರೇಕ್ ನೀಡಿದ ಚಿತ್ರಗಳಲ್ಲಿ ಪವನ್ ಒಡೆಯರ್ ನಿರ್ದೇಶನದ ಗೂಗ್ಲಿ ಚಿತ್ರ ಕೂಡಾ ಒಂದು. ಕಾಲೇಜ್ ಲವರ್ ಬಾಯ್, ಬಿಝೆನೆಸ್ ಮ್ಯಾನ್ ಆಗಿ ಒಂದಷ್ಟು ಲವ್, ಕಾಮಿಡಿ, ಎಮೋಶನಲ್ ಡ್ರಾಮಾ ಕಥಾ ಹಂದರ ಹೊಂದಿದ್ದ ಗೂಗ್ಲಿ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. 2013ರಲ್ಲಿ ತೆರೆ ಕಂಡ ಈ ಗೂಗ್ಲಿ ಚಿತ್ರ ಯುವ ಮನಸ್ಸುಗಳಿಗೆ ಭಾರಿ ಇಷ್ಟವಾಗಿತ್ತು. ಈ ಚಿತ್ರದಲ್ಲಿ ಯಶ್ ಅವರಿಗೆ ಜೋಡಿಯಾಗಿ ಕೃತಿ ಖರಬಂಧ ನಟಿಸಿದ್ದರು. ಗೂಗ್ಲಿ ಸಿನಿಮಾವನ್ನು ಜಯಣ್ಣ ಅವರು ನಿರ್ಮಾಣ ಮಾಡಿದ್ದರು.

ಈ ಗೂಗ್ಲಿ ಚಿತ್ರ ರಿಲೀಸ್ ಆಗಿ ಒಂಭತ್ತು ವರ್ಷಗಳು ಕಳೆದಿವೆ. ಇದೀಗ ಈ ಸಿನಿಮಾವನ್ನು ರೀಮೇಕ್ ಮಾಡಲು ಮಹೇಶ್ ದಾನಣ್ಣನವರ್ ಎನ್ನುವವರು ಜಯಣ್ಣ ಅವರ ಬಳಿ ಮಾತುಕತೆ ಒಪ್ಪಂದ ನಡೆಸಿದ್ದಾರಂತೆ. ಈ ಗೂಗ್ಲಿ ಚಿತ್ರ ಹಿಂದಿ, ಗುಜರಾತಿ, ಮರಾಠಿ, ಪಂಜಾಬಿ ಸೇರಿದಂತೆ ಒಂದಷ್ಟು ಭಾಷೆಗಳಲ್ಲಿ ರೀಮೇಕ್ ಮಾಡಿ ಬಿಡುಗಡೆ ಮಾಡಲು ಯೋಜನೆ ಹಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಈ ಬಗ್ಗೆ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಪವನ್ ಒಡೆಯರ್ ಅವರು ಗೂಗ್ಲಿ ಚಿತ್ರ ಪರಭಾಷೆಗಳಿಗೆ ರೀಮೇಕ್ ಆಗುತ್ತಿರುವ ವಿಷಯ ನನಗೆ ತಿಳಿದಿಲ್ಲ. ಈ ಬಗ್ಗೆ ಜಯಣ್ಣ ಅವರು ಕೂಡ ಮಾಹಿತಿ ನೀಡಿಲ್ಲ. ನಾನೂ ಕೂಡ ಸೋಶಿಯಲ್ ಮೀಡಿಯಾ ಮುಖಾಂತರೇ ತಿಳಿದುಕೊಂಡೆ. ಆದರೂ ಕೂಡ ಗೂಗ್ಲಿ ಚಿತ್ರ ರಿಲೀಸ್ ಆಗಿ 9ವರ್ಷಗಳು ಕಳೆದರು ಕೂಡ ಜನ ಈ ಗೂಗ್ಲಿ ಚಿತ್ರವನ್ನು ಇಷ್ಟಪಡುತ್ತಿರುವುದನ್ನ ನೋಡಿದ್ರೆ ನನಗೆ ತುಂಬ ಖುಷಿ ಆಗುತ್ತದೆ ಎಂದು ತಿಳಿಸಿದ್ದಾರೆ.