ಯಾವ ರಾಜಕಾರಣಿಗಳಿಗಿಂತ ಕಮ್ಮಿ ಇಲ್ಲ ದರ್ಶನ್ ಅವರ ಆಸ್ತಿ ಒಟ್ಟು ಆಸ್ತಿ ಎಷ್ಟು ಗೊತ್ತಾ

ದಕ್ಷಿಣ ಭಾರತದ ಸೂಪರ್ ಸ್ಟಾರ್ ದರ್ಶನ್ ಯಾರಿಗೆ ತಾನೇ ಗೊತ್ತಿಲ್ಲ? ದರ್ಶನ್ ರ ಅಭಿಮಾನಿ ಅಲ್ಲದವರು ಕೂಡ ದರ್ಶನ್ ರ ವೈಯಕ್ತಿಯ ಸಮಾಚಾರ ತಿಳಿದುಕೊಳ್ಳುವ ಆಸಕ್ತಿ ಹೊಂದಿರುತ್ತಾರೆ.ದರ್ಶನ್ ಎಷ್ಟು ಆಸ್ತಿ ಗಳಿಸಿದ್ದಾರೆಂಬುದು ಬಹಳ ಜನರಿಗೆ ಗೊತ್ತಿಲ್ಲ.ಆ ವಿಷಯ ತಿಳಿಯೋಣ ಬನ್ನಿ.ಭಾರೀ ಶ್ರಮವಹಿಸಿ ಚಿತ್ರರಂಗಕ್ಕೆ ಬಂದ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರುವಾಸಿಯಾದರು.ಆಮೇಲೆ ದರ್ಶನ್ ಹಿಂತಿರುಗಿ ನೋಡಿದ್ದೇ ಇಲ್ಲ.ಮದುವೆಯಾದ ತಕ್ಷಣ ದರ್ಶನ್ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಮನೆ ಮಾಡಿದರು.ಮೈಸೂರಿನಲ್ಲಿ ಒಂದು ಫಾರ್ಮ್ ಹೌಸ್ ಸಹ ಹೊಂದಿದ್ದಾರೆ.
ದರ್ಶನ್ ಅವರಿಗೆ ಒಂದು ವಿಶಿಷ್ಟ ಅಭಿರುಚಿ ಇದೆ. ನಮ್ಮ ಚಿತ್ರರಂಗದಲ್ಲಿ ಯಾರ ಬಳಿಯೂ ಇಲ್ಲದಂತಹ ದುಬಾರಿ ಕಾರುಗಳ ಒಡೆಯ ದರ್ಶನ್.ದರ್ಶನ್ ಗೆ ಫೋಟೋಗ್ರಫಿ ಕೂಡ ಒಂದು ಹವ್ಯಾಸ.ಮೃಗಾಲಯಗಳಿಗೆ ಹೋಗಿ ಪ್ರಾಣಿಗಳ ಫೋಟೋ ತೆಗೆಯುವ ಸಲುವಾಗಿ ಅವರು ವಿಶಿಷ್ಟ ಕ್ಯಾಮೆರಗಳನ್ನು ಹೊಂದಿದ್ದಾರೆ.ಅದರಲ್ಲೇ ಅವರು ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಾರೆ. ದರ್ಶನ್ ತಮ್ಮ ಫಾರ್ಮ್ ಹೌಸಿನಲ್ಲಿ ಅನೇಕ ದುಬಾರಿ ಕಾರುಗಳನ್ನು ಇರಿಸಿದ್ದಾರೆ.ಆದ್ರಲ್ಲಿ ಬಹಳ ದುಬಾರಿಯಾದ ಲ್ಯಾಮ್ಬೋರ್ಗಿನಿ ಕೂಡ ಒಂದು.

ಕೆಲವು ಮೂಲಗಳ ಮಾಹಿತಿಯಂತೆ ಒಂದು ಸಿನಿಮಾಕ್ಕೆ ದರ್ಶನ್ ಈಗ ಪಡೆಯುವ ಸಂಭಾವನೆ ಬರೋಬ್ಬರಿ 12 ಕೋಟಿಯಂತೆ.ಇವರ ಒಟ್ಟು ಆಸ್ತಿ ಮೊತ್ತ ಬರೋಬ್ಬರಿ 150 ಕೋಟಿಯಷ್ಟಂತೆ. ಈ ವಿಷಯದ ಬಗ್ಗೆ ದರ್ಶನ್ ಎಲ್ಲೂ ಬಹಿರಂಗ ಹೇಳಿಕೆ ಕೊಟ್ಟಿಲ್ಲವಾದರೂ ಅವರ ಆಪ್ತ ಮೂಲಗಳ ಊಹೆಯಿದು.ಒಟ್ನಲ್ಲಿ ದರ್ಶನ್ ಅವರ ಆಸ್ತಿ ಯಾವ ರಾಜಕಾರಣಿಗಿಂತ
ಕಮ್ಮಿ ಏನಿಲ್ಲ ಬಿಡಿ.