ಯಾವ ಕನ್ನಡ ಚಿತ್ರವೂ ಬಿಡುಗಡೆ ಆಗದ ದೇಶದಲ್ಲಿ ಬಿಡುಗಡೆ ಆಗುತ್ತಿದೆ ಕಾಂತಾರ ಚಿತ್ರ

ದೇಶದ ಗಡಿದಾಟಿ ಮುನ್ನುಗ್ಗುತ್ತಿರುವ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ! ಸೆಪ್ಟೆಂಬರ್ 30 ರಂದು ಕನ್ನಡ ಭಾಷೆಯೊಂದರಲ್ಲಿ ಮಾತ್ರ ಕಾಂತಾರ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಯ್ತು. ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆಯ ಈ ಕಾಂತಾರ ಸಿನಿಮಾದಲ್ಲಿ ಕರಾವಳಿ ಭಾಗದ ಜನರ ಸಂಸ್ಕೃತಿ ಸಂಪ್ರದಾಯ ಅವರ ನಂಬಿಕೆಯ ಆಚರಣೆಯನ್ನ ಬಹಳ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಕಾಂತಾರ ಸಿನಿಮಾ ಸಾಮಾನ್ಯ ಕಥೆಯನ್ನೊಂದಿದ್ದರು ಕೂಡಾ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಪಂಜುರ್ಲಿ ದೈವ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಿಷಬ್ ಶೆಟ್ಟಿ ಅವರ ಅಮೋಘ ನಟನೆ ಸಿನಿ ಪ್ರೇಕ್ಷಕರು ಫಿಧಾ ಆಗುವಂತೆ ಮಾಡಿದೆ. ಕಾಂತಾರ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲದೇ ವರ್ಲ್ಡ್ ವೈಡ್ ಸಖತ್ ಸೌಂಡ್ ಮಾಡುತ್ತಿದೆ.

ಹೌದು ಕಾಂತಾರಾ ಸಿನಿಮಾದ ಹಾಡು ಮತ್ತು ಟ್ರೇಲರ್ ಮೂಲಕವೇ ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ ಈ ಚಿತ್ರ ಈ ಪರಿಯಾಗಿ ದಾಖಲೆ ಮಾಡುತ್ತೆ ಎಂದು ಸ್ವತಃ ಚಿತ್ರತಂಡವೇ ಊಹೆ ಮಾಡಿರಲಿಲ್ಲ. ಸದ್ಯಕ್ಕೆ ಎಲ್ಲಾ ಕಡೆ ಕಾಂತಾರ ಸಿನಿಮಾದ ಕಲೆಕ್ಷನದ್ದೇ ಮಾತು. ಯಾಕಂದ್ರೆ ಈ ಸಿನಿಮಾ ಮಾಡುತ್ತಿರುವ ಕಮಾಲ್ ಅಷ್ಟಿಷ್ಟಲ್ಲ. ಸ್ವತಃ ಸಿನಿಮಾ ತಂಡವೇ ನಿರೀಕ್ಷೆ ಮಾಡದಂತಹ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರತಂಡ ಫುಲ್ ಖುಷ್ ಆಗಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಕಾಂತಾರ ಸಿನಿಮಾ ಕಳೆದ ಸೆಪ್ಟೆಂಬರ್ 30ರಂದು ಕನ್ನಡ ಭಾಷೆಯೊಂದರಲ್ಲೇ ವರ್ಲ್ಡ್ ವೈಡ್ ರಿಲೀಸ್ ಆಗಿ ನೂರು ಕೋಟಿ ಕ್ಲಬ್ ಸೇರಿದೆ. ಅದಷ್ಟೇ ಅಲ್ಲದೆ ಕಾಂತಾರ ಸಿನಿಮಾದ ಬಗ್ಗೆ ಕೇಳಿಬಂದ ರಿಯಾಕ್ಷನ್ ಕಂಡು ಕಳೆದ ವಾರವಷ್ಟೇ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ಕೂಡ ರಿಲೀಸ್ ಮಾಡಲಾಗಿದೆ.

8

ಈ ಎಲ್ಲಾ ಭಾಷೆಗಳಲ್ಲಿಯೂ ಕೂಡ ಕಾಂತಾರ ಸಿನಿಮಾ ಕಮಾಲ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಮತ್ತೊಂದು ದಾಖಲೆ ಮಾಡಲು ಹೊರಟಿದೆ. ಅದೇನಪ್ಪಾ ಅಂದರೆ ಕನ್ನಡದ ಕಾಂತಾರ ಸಿನಿಮಾ ಇದೀಗ ಅಕ್ಟೋಬರ್ 22ರಂದು ಇಂಡೋನೇಷ್ಯಾದ ಎರಡು ಪ್ರದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಈ ವಿಚಾರವನ್ನ ಸ್ವತಃ ಕಾಂತಾರ ಚಿತ್ರದ ನಿರ್ಮಾಣ ಸಂಸ್ಥೆ ಆಗಿರುವ ಹೊಂಬಾಳೆ ಫಿಲಂಸ್ ಅವರೇ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ತಿಳಿಸಿದ್ದಾರೆ. ಕೇವಲ ಇಂಡೋನೆಷ್ಯಾ ಮಾತ್ರ ಅಲ್ಲದೆ ವಿಯೇಟ್ನಾಂ ನಲ್ಲಿಯೂ ಸಹ ಕಾಂತಾರ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸುದ್ದಿಯೂ ಸಹ ಕೇಳಿ ಬಂದಿದೆ. ಒಟ್ಟಾರೆಯಾಗಿ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ದೇಶದ ಗಡಿಯಾಚೆಯೂ ಕೂಡ ಸದ್ದು ಮಾಡುವ ಮೂಲಕ ಕೆಜಿಎಫ್ ನಂತರ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಸಿನಿಮಾ ಕೀರ್ತಿ ತರುತ್ತಿದೆ ಅಂದರೆ ತಪ್ಪಾಗಲಾರದು.

Leave a Reply

%d bloggers like this: