ವಿಶ್ವಕಪ್ ವಿಜೇತ ತಂಡಕ್ಕೆ ಸಿಗಲಿದೆ ಇಷ್ಟೊಂದು ಹಣ! ರನ್ನರ್ ಅಪ್ ತಂಡಕ್ಕೂ ಸಿಗಲಿದೆ ಭಾರೀ ಬಹುಮಾನ

ಭಾರತ ದೇಶದ ಪ್ರತಿಷ್ಟಿತ ದೇಶಿಯ ಪ್ರಾಂಚೈಸಿ ಕ್ರಿಕೆಟ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಿನ್ನೆ ತಾನೇ ತೆರೆ ಕಂಡಿದೆ. ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿದೆ.ನಾಲ್ಕನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ರೋಫಿಯನ್ನ ತಮ್ಮದಾಗಿಸಿಕೊಂಡಿದ್ದಾಗಿದೆ. ಇದೀಗ ಭಾರತದ ಕ್ರಿಕೆಟ್ ಪ್ರೇಮಿಗಳ ದೃಷ್ಟಿ ನೆಟ್ಟಿರುವುದು ಮುಂಬರುವ ದಿನಗಳಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಮೇಲೆ.ಈ ವಿಶ್ವಕಪ್ ಕ್ರಿಕೆಟ್ ಗೆ ಭಾರತೀಯ ಕ್ರಿಕೆಟ್ ತಂಡ ಸಕಲ ತಯಾರಿಯನ್ನು ಮಾಡುತ್ತಿದೆ.ಈ ಬಾರಿ ಜರುಗಲಿರುವ ಟಿ-ಟ್ವೆಂಟಿ ವಿಶ್ವಕಪ್ ಕಪ್ ವಿಜಯ ಸಾಧಿಸಲಿರುವ ತಂಡಕ್ಕೆ ಭಾರಿ ಮೊತ್ತದ ಬಹುಮಾನ ಸಿಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಕೇವಲ ವಿಜೇತ ತಂಡಕ್ಕೆ ಮಾತ್ರ ಅಲ್ಲದೆ ಅಂತಿಮ ಪಂದ್ಯದಲ್ಲಿ ಹಣಾ ಹಣಿ ಸೆಣಸಾಡಿ ಅಂತಿಮ ಘಟ್ಟದಲ್ಲಿ ಪೈಪೋಟಿ ನೀಡಿ ರನ್ನರ್ ಅಪ್ ಸ್ಥಾನ ಪಡೆಯುವ ತಂಡಕ್ಕೂ ಕೂಡ ಈ ಬಾರಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಬಹುಮಾನದ ಮೊತ್ತ ಸಿಗಲಿದೆ ಎಂದು ಐಸಿಸಿ ಘೋಷಣೆ ಮಾಡಿದೆ. 2021 ರ ಟಿ-ಟ್ವೆಂಟಿ ವಿಶ್ವಕಪ್ ಕ್ರಿಕೆಟ್ ನಲ್ಲಿ ವಿಜೇತ ರಾಗುವ ತಂಡಕ್ಕೆ ಬರೋಬ್ಬರಿ 1.6 ಮಿಲಿಯನ್ ಡಾಲರ್ ಬಹುಮಾನದ ಮೊತ್ತ ಸಿಗಲಿದೆ. ರನ್ನರ್ ಅಪ್ ಸ್ಥಾನ ಪಡೆದ ತಂಡಕ್ಕೆ 800 ಸಾವಿರ ಡಾಲರ್ ಬಹುಮಾನದ ಮೊತ್ತ ನೀಡಲಾಗುತ್ತದೆ,ಅಷ್ಟೇ ಅಲ್ಲದೆ ಸೆಮಿ ಫೈನಲ್ ತಲುಪುವ ತಂಡಗಳಿಗೆ ಸುಮಾರು ನಾಲ್ಕು ಲಕ್ಷ ಡಾಲರ್ ಹಣವನ್ನು ಕೊಡುಗೆಯಾಗಿ ನೀಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ಅಕ್ಟೋಬರ್ ತಿಂಗಳ 17 ರಿಂದ ಪುರುಷರ ವಿಭಾಗದ ಟಿ ಟ್ವೆಂಟಿ ವಿಶ್ವಕಪ್ ಪ್ರಾರಂಭವಾಗಲಿದೆ. ಇನ್ನು ಈ ಟಿ ಟ್ವೆಂಟಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಸ್ಪರ್ಧಿಸುವ ಎಲ್ಲಾ ಹದಿನಾರು ತಂಡಗಳಿಗೂ ಕೂಡ ಗೌರವಪೂರ್ವಕವಾಗಿ 5.6 ಮಿಲಿಯನ್ ಡಾಲರ್ ಹಣವನ್ನು ನೀಡಲಾಗುವುದು ಎಂದು ಸಹ ತಿಳಿದು ಬಂದಿದೆ.ಒಟ್ಟಾರೆಯಾಗಿ 2021 ರ ಟಿ ಟ್ವೆಂಟಿ ವಿಶ್ವಕಪ್ ಕ್ರಿಕೆಟ್ ಭಾರಿ ಕುತೂಹಲ ಮೂಡಿಸಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: