ಜಗತ್ತಿನಲ್ಲೇ ಅತೀ ಶ್ರೀಮಂತ ಹಳ್ಳಿ ಭಾರತದಲ್ಲೇ ಇದೆ, ಹಳ್ಳಿಯ ಪ್ರತಿಯೊಬ್ಬನು BMW, Audi ನಲ್ಲಿ ಓಡಾಡುತ್ತಾನೆ

ಹಳ್ಳಿ ಅಂದಾಕ್ಷಣ ತಕ್ಷಣ ನಮ್ಮ ಕಲ್ಪನೆಗೆ ಬರುವುದು, ಹೆಂಚಿನ ಮನೆಗಳು ಮಣ್ಣಿನ ರಸ್ತೆಗಳು,ಯುವಕರಿಲ್ಲದ ವೃದ್ದರ ಆಶ್ರಮಗಳಂತಹ ದೃಶ್ಯ ಸನ್ನಿವೇಶಗಳು.ಆದರೆ ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಇದಕ್ಕೆ ತದ್ವಿರುದ್ದವಾದಂತಹ ಸನ್ನಿವೇಶಗಳು ಸೃಷ್ಟಿಯಾಗಿವೆ.ಜೊತೆಗೆ ನಗರದಂತೆ ಹಳ್ಳಿಯ ಕಡೆಗೆ ಕೂಡ ಆಧುನಿಕ ಬದುಕು ಬೀಸಿದೆ.ತಂತ್ರಜ್ಞಾನ ದೂರವಾಣಿ ಉಡುಗೆ-ತೊಡುಗೆಗಳ ಹೊಸ ಹೊಸ ವಿಭಿನ್ನ ಸಂಸ್ಕೃತಿ ಕೂಡ ಪರಿಚಯವಾಗಿದೆ.ಅದರಂತೆ ಇಲ್ಲೊಂದು ಹಳ್ಳಿಯಲ್ಲಿ ನಾವು ನೀವು ಊಹೆ ಮಾಡಲಾದಷ್ಟು ಮಟ್ಟಿಗೆ ಸಂಪೂರ್ಣ ಡಿಜಿಟಲ್ ಆಗಿದೆ. ಈ ಗ್ರಾಮದಲ್ಲಿ ಮಣ್ಣಿನ ರಸ್ತೆಯಿಲ್ಲ,ಎತ್ತಿನಗಾಡಿಗಳು ಕಣ್ಣಿಗೆ ಕಾಣುವುದಿಲ್ಲ.ಇಲ್ಲಿನ ಜನರ ಆರ್ಥಿಕ ಪರಿಸ್ಥಿತಿ ಅತ್ಯುತ್ತಮ ಮಟ್ಟದಲ್ಲಿದ್ದು,ಇದೊಂದು ರೀತಿಯ ಯಾವುದೋ ಶ್ರೀಮಂತ ರಾಷ್ಟ್ರ ಎಂಬಂತೆ ಕಾಣುತ್ತದೆ.

ಇಲ್ಲಿನವರ ಬಳಿ ದುಬಾರಿ ಐಷಾರಾಮಿ ಕಾರ್ ಗಳಾದ ಬಿಎಂಡಬ್ಲ್ಯೂ,ಬೆಂಝ್,ಆಡಿ ಅಂತಹ ಕಾರ್ ಗಳಿವೆ.ಹಾಗಂತ ಈ ಗ್ರಾಮ ಯಾವುದೋ ಹೊರ ದೇಶದಲ್ಲಿ ಇಲ್ಲ.ಇದು ಇರುವುದು ಗುಜರಾತ್ ರಾಜ್ಯದಲ್ಲಿರುವ ಧರ್ಮಜ ಎಂಬ ಹಳ್ಳಿಯ ಆಧುನಿಕ ಬದುಕು. ಇಲ್ಲಿನ ಗ್ರಾಮಸ್ಥರು ತೀರಾ ಹಳ್ಳಿಯರು ಅಲ್ಲ,ನಗರ ಪ್ರದೇಶದ ಜನರು ಅಲ್ಲ ನಗರ ಮತ್ತು ಗ್ರಾಮೀಣ ಎರಡು ರೀತಿರ ಜೀವನ ಶೈಲಿಯನ್ನ ಅಳವಡಿಸಿಕೊಂಡಿದ್ದಾರೆ.ಈ ಧರ್ಮಜ ಎಂಬ ಗ್ರಾಮ ದೇಶದಲ್ಲಿಯೇ ಅತ್ಯಂತ ಶ್ರೀಮಂತವಾದ ಹಳ್ಳಿ ಎಂಬ ಖ್ಯಾತಿ ಪಡೆದಿದೆ. ಈ ಗ್ರಾಮ ಇಷ್ಟೊಂದು ಅಭಿವೃದ್ದಿ ಮತ್ತು ಶ್ರೀ ಮಂತಿಕೆಯಿಂದ ಇರಲು ಯಾವುದೇ ಸರ್ಕಾರ ಕಾರಣವಲ್ಲ.

ಇಲ್ಲಿನ ಜನರು ಹೆಚ್ಚು ವಿದೇಶದಲ್ಲಿ ದುಡಿದು ತಮ್ಮ ಗ್ರಾಮಕ್ಕೆ ಬಂದು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಂಡಿದ್ದಾರೆ.ತಮ್ಮ ಕುಟುಂಬದವರಿಗೆ ನೆರವು ನೀಡಿ ಅವರಿಗೂ ಕೂಡ ಆರ್ಥಿಕವಾಗಿ ಸಬಲರಾಗಲು ಸಹಾಯ ಮಾಡಿದ್ದಾರೆ.ಮಕ್ಕಳು ಉತ್ತಮವಾಗಿ ಓದಿ ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು,ನೆಲೆ ಕಂಡು ಕೊಂಡು ಊರಲ್ಲಿರುವ ತಮ್ಮ ತಂದೆ-ತಾಯಿಗಳಿಗೆ ಪ್ರತಿ ತಿಂಗಳು ತಪ್ಪದೆ ಹಣ ಕಳಿಸುತ್ತಾರೆ.ಇಲ್ಲಿನ ತಂತ್ರಜ್ಞಾನ ಯಾವ ಮಟ್ಟಿಗೆ ಇದೆ ಅಂದರೆ ಈ ಹಳ್ಳಿಯ ಹೆಸರಿನ ಜಾಲತಾಣ ಕೂಡ ಇದೆ.

ಧರ್ಮಜ ಗ್ರಾಮದ ಗ್ರಾಮಸ್ಥರೇ ತಿಳಿಸುವಂತೆ ಬ್ರಿಟನ್ ನಲ್ಲಿ 1500 ಕುಟುಂಬ,ಕೆನಡಾದಲ್ಲಿ 200 ಕುಟುಂಬ,ಅಮೇರಿಕಾದಲ್ಲಿ 300 ಕುಟುಂಬ ಸೇರಿದಂತೆ ವಿದೇಶದಲ್ಲಿ ಬರೋಬ್ಬರಿ 1500 ಕ್ಕೂ ಹೆಚ್ಚು ಕುಟುಂಬಗಳು ಹೊರ ದೇಶದಲ್ಲಿ ವಾಸಿಸುತ್ತಿದ್ದಾವೆ.ತಮ್ಮ ಗ್ರಾಮದ ಯಾವ ಯಾವ ಕುಟುಂಬಗಳು ವಿದೇಶದಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಸವಿವರಗಳನ್ನು ಸಂಪೂರ್ಣವಾಗಿ ಡೈರಿಯೊಂದರಲ್ಲಿ ಬರೆದು ಬರೆದಿಟ್ಟಿರುತ್ತಾರೆ.ಇಲ್ಲಿ ವಿದೇಶದಲ್ಲಿರುವಂತೆ ಅತ್ಯಾಧುನಿಕ ಆಸ್ಪತ್ರೆಗಳು,ಐಫೈ ರೆಸ್ಟೋರೆಂಟ್ ಗಳು,ಬ್ಯಾಂಕುಗಳು,ಎಟಿಎಂಗಳು ಸೇರಿದಂತೆ ಎಲ್ಲಾ ರೀತಿಯ ಸೇವಾ ವಲಯಗಳು ಕೂಡ ಈ ಗ್ರಾಮದಲ್ಲಿವೆ.

ಇನ್ನು ಊರಿನ ಜನರು ತಮ್ಮ ಬ್ಯಾಂಕುಗಳಲ್ಲಿ ಕೋಟಿ ಗಟ್ಟಲೇ ಹಣ ಇಟ್ಟಿರುವುದು ಎಲ್ಲರನ್ನ ಅಚ್ಚರಿಗೊಳಿಸುತ್ತದೆ. ಪ್ರತಿ ವರ್ಷ ಜನವರಿ 12 ರಂದು ಇಲ್ಲಿನ ಗ್ರಾಮಸ್ಥರು ಧರ್ಮಜ ಡೇ ಎಂದು ಆಚರಿಸುತ್ತಾರೆ.ಆ ವಿಶೇಷವಾದ ದಿನ ಹೊರ ದೇಶದಲ್ಲಿರುವ ಎಲ್ಲಾ ಕುಟುಂಬಗಳು ಒಟ್ಟಿಗೆ ಸೇರಿ ತಮ್ಮ ಯುವ ಪೀಳಿಗೆಗೆ ತಮ್ಮ ಊರಿನ ಐತಿಹ್ಯ ಅಲ್ಲಿನ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಮಾಹಿತಿ ನೀಡಿ,ಅಂದು ಹಬ್ಬದಂತೆ ಎಲ್ಲರು ಸಂಭ್ರಮಿಸುತ್ತಾರೆ. ಉಪಯುಕ್ತವಾದ ಮಾಹಿತಿ ಇದು ದಯವಿಟ್ಟು ಎಲ್ಲರಿಗು ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: