‘ವಾರ್ನರ್’ ಆರ್ ಸಿಬಿ ತಂಡಕ್ಕೆ ಬರುವುದನ್ನು ಖಚಿತ ಪಡಿಸಿದ ವಿರಾಟ್ ಕೊಹ್ಲಿ..

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15 ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಸೇರಲಿದ್ದಾರ ಎಂಬ ಪ್ರಶ್ನೆಯೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಈಗಾಗಲೇ ವಿವಿಧ ಪ್ರಾಂಚೈಸಿ ತಂಡಗಳು 15 ನೇ ಆವೃತ್ತಿಗೆ ತಮ್ಮ ನೆಚ್ಚಿನ ಉತ್ತಮ ಸಾಮರ್ಥ್ಯವುಳ್ಳ ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಉಳಿದ ಆಟಗಾರರನ್ನು ಕೂಡ ಬಿಡ್ಡಿಂಗ್ ನಲ್ಲಿ ಯಾವೆಲ್ಲಾ ತಂಡಗಳು ಯಾವ ಆಟಗಾರರನ್ನು ಖರೀದಿ ಮಾಡಿಕೊಳ್ಳಲಿದೆ ಎಂಬುದು ಕೂಡ ಇದೀಗ ಕುತೂಹಲಕಾರಿಯಾಗಿದೆ. ಇದರ ನಡುವೆ ಆಸ್ಟ್ರೇಲಿಯಾದ ದೇಶದ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರನ್ನ ಆರ್ ಸಿ ಬಿ ತಂಡ ಖರೀದಿ ಮಾಡುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ತಿಳಿಯುವ ಮುನ್ನ ಡೇವಿಡ್ ವಾರ್ನರ್ ಅವರ ಬಗ್ಗೆ ತಿಳಿಯುವುದಾದರೆ ಇವರ ಪೂರ್ಣ ಹೆಸರು ಡೇವಿಡ್ ಆಂಡ್ರ್ಯೂ ವಾರ್ನರ್.

ಆಸ್ಟ್ರೇಲಿಯಾ ದೇಶದಎಡಗೈ ಆರಂಭಿಕ ಆಟಗಾರ. ದೇಶಿಯ ಕ್ರಿಕೆಟ್ ಆದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಟವಾಡುತ್ತಿದ್ದರು. 14 ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಡೇವಿಡ್ ವಾರ್ನರ್ ಅವರು ಉತ್ತಮ ಪ್ರದರ್ಶನ ತೋರದ ಕಾರಣ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇವರನ್ನು ಮುಂದಿನ ಸೀಸನ್ ಗೆ ರಿಟೈನ್ ಮಾಡಿಕೊಂಡಿಲ್ಲ. ಹೀಗಾಗಿ ಇವರು ಆಕ್ಷನ್ ನಲ್ಲಿ ಭಾಗವಹಿಸಲಿದ್ದಾರೆ. ಇತ್ತೀಚೆಗೆ ನಟ ಡೇವಿಡ್ ವಾರ್ನರ್ ಅವರು ಆರ್ಸಿಬಿ ತಂಡಕ್ಕೆ ಸೇರಲಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗುವುದಕ್ಕೆ ಪ್ರಮುಖ ಕಾರಣ ಅಂದರೆ ಡೇವಿಡ್ ವಾರ್ನರ್ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾದಲ್ಲಿ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಮುಖವನ್ನ ಮಾರ್ಪ್ ಮಾಡಿ ತಮ್ಮ ಮುಖವನ್ನ ಬಳಸಿ ರೀಲ್ಸ್ ಮಾಡಿದ್ದರು.

ಇದನ್ನ ನೋಡಿದ ವಿರಾಟ್ ಕೊಹ್ಲಿ ಅವರು ಡೇವಿಡ್ ವಾರ್ನರ್ ಅವರಿಗೆ ಹಾಯ್ ಸಹೋದ್ಯೋಗಿ ನೀವು ಚೆನ್ನಾಗಿದ್ದೀರಾ ಎಂದು ಪ್ರತಿಕ್ರಿಯೆ ನೀಡಿದ್ದರು. ಇದರಲ್ಲಿ ವಿರಾಟ್ ಕೊಹ್ಲಿ ಕಲಿಗ್ ಸಹೋದ್ಯೋಗಿ ಎಂಬ ಪದ ಬಳಸಿದ್ದ ಕಾರಣ ಬಹುಶಃ ಡೇವಿಡ್ ವಾರ್ನರ್ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದಲ್ಲಿ ಆಟವಾಡಲಿದ್ದಾರೆ ಎಂದು ಊಹೆ ಮಾಡಿದ್ದಾರೆ. ಇನ್ನು ಡೇವಿಡ್ ವಾರ್ನರ್ ಅವರು ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೇ ಹಾಡಿನಲ್ಲಿ ಪುನೀತ್ ಅವರು ಕಾಣಿಸಿಕೊಂಡ ರೀತಿಯಾಗಿ ತಮ್ಮ ಮುಖವನ್ನು ಮಾರ್ಫ್ ಮಾಡಿ ಅಪ್ಪು ಅವರಿಗೆ ಗೌರವ ನಮನ ಸಲ್ಲಿಸಿದ್ದರು. ಜೊತೆಗೆ ಇದನ್ನ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದರು. ಈ ವೀಡಿಯೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.