ವಿವಾಹಕ್ಕೂ ಮುನ್ನ ರೋಹಿತ್ ಪತ್ನಿ ರಿತಿಕಾ ಜೊತೆ ಡೇಟಿಂಗ್ ಮಾಡಿದ ವಿರಾಟ್ ಕೊಹ್ಲಿ

ಇದೇ ರಿತಿಕಾ ಇಂದು ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಸ್ಟಾರ್ ಆಟಗಾರನ ಪತ್ನಿ ಎಂಬುದು ಆಶ್ಚರ್ಯಕರ ಸುದ್ದಿಯಾಗಿದೆ. ಹೌದು ಬಹುತೇಕರಿಗೆ ಮದುವೆಗೂ ಮುಂಚೆ ಪ್ರೀತಿ,ಪ್ರೇಮ ಸಂಬಂಧಗಳು ಏರ್ಪಟ್ಟಿರುತ್ತವೆ. ಕೆಲವರ ಪ್ರೀತಿ ಯಶಸ್ವಿಯಾಗಿ ಮದುವೆ ಆಗುತ್ತಾರೆ.ಆದರೆ ಕೆಲವರಿಗೆ ಮನೆಯ ವಿರೋಧವೋ ಅಥವಾ ಪರಸ್ಪರ ಮನಸ್ತಾಪವಾಗಿ ತಮ್ಮ ಪ್ರೀತಿಯನ್ನು ಅರ್ಧಕ್ಕೆ ಮೊಟಕುಗೊಳಿಸುವಂತಹ ನಿರ್ಧಾರ ಕೈ ಗೊಳ್ಳುತ್ತಾರೆ.ಇನ್ನು ಇದಕ್ಕೆ ಈ ಸಿನಿಮಾ ಮತ್ತು ಕ್ರಿಕೆಟ್ ಸೆಲೆಬ್ರಿಟಿಗಳು ಹೊರತಾಗಿಲ್ಲ.ಇವರಿಗೆ ಇದು ಸರ್ವೇ ಸಾಮಾನ್ಯ ಎಂಬಂತಾಗಿದೆ.ಅಂತೆಯೇ ಭಾರತ ತಂಡದ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ಕೂಡ ಮದುವೆಗೂ ಮುನ್ನ ಡೇಟಿಂಗ್ ಮಾಡಿದ್ದರಂತೆ.ಈ ಸುದ್ದಿ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಖ್ಯಾತ ಆಟಗಾರ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಅವರೊಂದಿಗೆ ಸಿನಿಮಾ ಡೇಟಿಂಗ್ ಮಾಡಿದ್ದರಂತೆ.ರಿತಿಕಾ ಸಿಕ್ಸರ್ ಸಿಂಗ್ ಆಗಿದ್ದ ಯುವರಾಜ್ ಸಿಂಗ್ ಅವರ ಬಳಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಈ ಸಂಧರ್ಭದಲ್ಲಿ ರಿತಿಕಾ ಅವರಿಗೆ ವಿರಾಟ್ ಕೊಹ್ಲಿ ಅವರ ಪರಿಚಯವಾಗಿದೆ.ತದ ನಂತರ ಸ್ನೇಹ ಬೆಳೆದು ಒಟ್ಟಿಗೆ ಸಿನಿಮಾ ಕೂಡ ನೋಡಿದ್ದರಂತೆ.ಆದರೆ ವಿರಾಟ್ ಕೊಹ್ಲಿ ಅವರಿಗೆ ಒಂದಷ್ಟು ಹುಡುಗಿಯರ ಸ್ನೇಹವಿದ್ದ ಕಾರಣ ರಿತಿಕಾ ವಿರಾಟ್ ಕೊಹ್ಲಿ ಅವರೊಂದಿಗಿನ ಸ್ನೇಹದಿಂದ ಹೊರ ಬಂದರಂತೆ.

ಇದಾದ ಬಳಿಕ ರೋಹಿತ್ ಶರ್ಮಾ ಅವರ ಮ್ಯಾನೇಜರ್ ಆದ ರಿತಿಕಾ ಅವರೊಂದಿಗೆ ಒಡನಾಟ ಹೆಚ್ಚಾಗಿ ಪರಸ್ಪರ ಪ್ರೀತಿಯಾಗಿ 2015 ರಲ್ಲಿ ಮದುವೆ ಯಾಗಿ ಇದೀಗ ಮುದ್ದಾದ ಹೆಣ್ಣು ಮಗುವಿಗೆ ತಂದೆಯಾಗಿ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ.ಅದರಂತೆ ಇತ್ತ ವಿರಾಟ್ ಕೊಹ್ಲಿ ಕೂಡ ಬಾಲಿವುಡ್ ಖ್ಯಾತ ನಟಿಯಾದ ಅನುಷ್ಕಾ ಶರ್ಮಾ ಅವರನ್ನು ಪ್ರೀತಿಸಿ 2017 ರಲ್ಲಿ ಮದುವೆ ಆಗಿದ್ದಾರೆ.ಇವರಿಗೂ ಕೂಡ ಒಂದು ಮಗುವಾಗಿದ್ದು ತಮ್ಮ ತುಂಬು ಕುಟುಂಬದೊಂದಿಗೆ ಸಂತೋಷದ ಜೀವನವನ್ನು ಕಟ್ಟಿಕೊಂಡಿದ್ದಾರೆ.ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ಲೈಕ್ ಮಾಡಿ.

Leave a Reply

%d bloggers like this: