ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ಕರ್ನಾಟಕದಲ್ಲೇ ಇದೆ, ಯಾವ ಜಿಲ್ಲೆಯಲ್ಲಿದೆ ಗೊತ್ತಾ?

ಭಾರತ ದೇಶ ವೈವಿಧ್ಯಮಯವಾದ ದೇಶ. ಕಲೆ,ಸಂಸ್ಕೃತಿ ಆಚರಣೆ ಹಬ್ಬ ಹರಿದಿನಗಳು ಧಾರ್ಮಿಕ ನಂಬಿಕೆಗಳು ಹೀಗೆ ಪ್ರತಿಯೊಂದು ವಿಷಯಗಳಲ್ಲಿಯೂ ಒಂದಲ್ಲ ಒಂದು ವೈಶಿಷ್ಟ್ಯಗಳನ್ನ ಹೊಂದಿದೆ‌. ಕರ್ನಾಟಕದಲ್ಲಿಯೂ ಕೂಡ ಅದಕ್ಕೆ ಹೊರತಾಗಿಲ್ಲ.ಅದಕ್ಕೆ ಸಾಕ್ಷಿಯಾಗಿ ಇಡೀ ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಪಂಚಲೋಹದ ನಾಡ ದೇವತೆ ಚಾಮುಂಡೇಶ್ವರಿ ಪ್ರತಿಮೆ ಕರ್ನಾಟಕದಲ್ಲಿರುವುದು ನಿಜಕ್ಕೂ ಕೂಡ ಹೆಮ್ಮೆಯ ಸಂಗತಿಯಾಗಿದೆ. ಈ ಪಂಚಲೋಹದ ಚಾಮುಂಡೇಶ್ವರಿ ದೇವಿ ವಿಗ್ರಹ ಮನಮೋಹಕವಾಗಿದ್ದು,ವಿಶ್ವದಾದ್ಯಂತ ಅಪಾರ ಗಮನ ಸೆಳೆದಿದೆ.ಈ ಪಂಚಲೋಹದ ಪ್ರತಿಮೆ ಇರುವುದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ ಎಂಬ ಗ್ರಾಮದಲ್ಲಿದೆ.ಇಲ್ಲಿರುವಂತಹ ಅರವತ್ತು ಅಡಿಯ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ಬರೋಬ್ಬದಿ 35 ಸಾವಿರ ಕೆ.ಜಿ ತೂಕ ಇರುವ 18 ಭುಜಗಳನ್ನೊಂದಿದೆ.

ಈ ವೈವಿಧ್ಯಮಯವಾದ ವಿಗ್ರಹವನ್ನು ನಿರ್ಮಿಸಿದವವರು ಪಠಾಣ್ ಎಂಬುವವರು.ಇವರು ಬೆಂಗಳೂರಿನವರಾಗಿದ್ದಾರೆ.ಇವರು ಈ ಪಂಚಲೋಹದ ವಿಗ್ರಹವನ್ನು ನಿರ್ಮಿಸಲು ಮೂರು ವರ್ಷಗಳ ಅವಧಿ ತೆಗೆದುಕೊಂಡಿರುತ್ತಾರೆ. ಈ ವಿಗ್ರಹದ ವಿಶೇಷತೆಯನ್ನು ತಿಳಿಯುವುದಾದರೆ ಚಾಮುಂಡೇಶ್ವರಿ ತಾಯಿ ಪದಕವು ಮೈಸೂರು ರಾಜ್ಯ ಲಾಂಛನ ಗಂಡಬೇರುಂಡ ವಿನ್ಯಾಸವನ್ನೊಂದಿದೆ.ಇನ್ನು ತಾಯಿಯ ಹದಿನೆಂಟು ಕೈಗಳಲ್ಲಿ 18 ಆಯುಧಗಳಿವೆ. ಈ ಹದಿನೆಂಟು ಆಯುಧಗಳು ಹದಿನೆಂಟು ಶಕ್ತಿಯನ್ನು ನಿರೂಪಿಸುತ್ತದೆಯಂತೆ. ಈ ನಾಡದೇವತೆಯ ವಿಶೇಷತೆ ವಿಗ್ರಹ ಅಂದರೆ ಶ್ರವಣ ಬೆಳಗೊಳದ ಗೊಮ್ಮಟೇಶ್ವರನ ವಿಗ್ರಹಕ್ಕಿಂತ ಎತ್ತರವಾಗಿದೆಯಂತೆ.ದೇಶದ ವಿವಿಧ ಭಾಗಗಳಲ್ಲಿರುವ ಪ್ರತಿಮೆಗಳು ಸಿಮೆಂಟ್ ನಿಂದ ನಿರ್ಮಿತವಾಗಿರುವಂತಹ ಪ್ರತಿಮೆಗಳನ್ನು ಕಾಣಬಹುದಾಗಿರುತ್ತದೆ.

ಆದರೆ ಚಿನ್ನ,ಬೆಳ್ಳಿ,ತಾಮ್ರ,ಕಂಚು ಸೇರಿ ಪಂಚಲೋಹಗಳಿಂದ ತಯಾರಿಸಿರುವಂತಹ ಅತೀ ಎತ್ತರದ ಏಕೈಕ ಪಂಚಲೋಹದ ಪ್ರತಿಮೆಯಾಗಿದೆ.ಆರಂಭದ ದಿನಗಳಲ್ಲಿ ಈ ಪಂಚಲೋಹ ನಿರ್ಮಾಣ ಮಾಡಲು ಮಣ್ಣಿನಿಂದ ಆಕಾರ ವಿನ್ಯಾಸವನ್ನು ರೂಪಿಸಲಾಗಿತ್ತಂತೆ.ತದ ನಂತರ ಇದಕ್ಕೆ ಫೈಬರ್ ಉಪಯೋಗಿಸಿಕೊಂಡು ಮೂರು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆಯಂತೆ. ಈ ಸ್ಥಳದ ವಿಶೇಷತೆ ಅಂದರೆ ಅರಸೀಕರೆಯಲ್ಲಿ ಬಸವಣ್ಣನನ್ನು ನಡೆದಾಡುವ ದೇವರು ಎಂದು ನಂಬಿದಂತೆ ಈ ವೈಶಿಷ್ಯ ಪೂರ್ಣ ಚಾಮುಂಡೇಶ್ವರಿ ದೇವತೆಯ ಬಗ್ಗೆ ಅಪಾರ ಭಕ್ತಿ ಹೊಂದಿದ್ದಾರಂತೆ.ತಾಯಿಯ ಮಹಿಮೆಯನ್ನ ಅರಿತು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರಂತೆ. ಅಂತೆಯೇ ತನ್ನ ನಂಬಿ ಬರುವ ಭಕ್ತರ ಕೋರಿಕೆಯನ್ನ ತಾಯಿ ಈಡೇರಿಸುತ್ತಾಳೆ ಎಂಬ ಪ್ರತೀತಿಯಿದೆ.

Leave a Reply

%d bloggers like this: