ವಿಶ್ವದಲ್ಲೆ ಅತೀ ದುಬಾರಿ ಮಾವಿನ ಹಣ್ಣು ಬೆಳೆದ ರೈತ! ಒಂದು ಕೆಜಿ ಬೆಲೆ ಎಷ್ಟು ಗೊತ್ತಾ?

ವ್ಯವಸಾಯ ನೀ ಸಾಯ ನಾ ಸಾಯ ಮನೆಮಂದಿಯೆಲ್ಲಾ ಎಂಬ ಮಾತು ದಶಕ ದಶಕಗಳಿಂದಲೂ ಹಿರಿಯರ ಅನುಭವದ ನುಡಿಗಳಾಗಿ ಬಳುವಳಿಯಾಗಿ ಬಂದಿದೆ.ಇದರರ್ಥ ಕೃಷಿ ನಂಬಿ ಬದುಕುವುದು ತುಂಬ ಕಷ್ಟಕರ ಎಂಬು ನೋವಿನ ನುಡಿಗಳವು.ಆದರೆ ಕೃಷಿಯಿಂದ ಕೋಟ್ಯಾಧಿಪತಿಗಳಾಗಿರುವವರ ಉದಾಹರಣೆಗಳು ಕೂಡ ನಮ್ಮ ಮುಂದಿವೆ.ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂಬಂತೆ ಜೊತೆಗೆ ಅದೃಷ್ಟ ಎಂಬುದು ಕೈ ಹಿಡಿದರೆ ರೈತನ ಬದುಕು ನಿಜಕ್ಕೂ ಸುಂದರ ಬದುಕಾಗಿರುತ್ತದೆ. ಅಂತೆಯೇ ಮಧ್ಯ ಪ್ರದೇಶದ ರೈತ ಕುಟುಂಬಕ್ಕೆ ನಿಜಕ್ಕೂ ಕೂಡ ಅದೃಷ್ಟ ಅನ್ನೋದು ರೈಲಿನಲ್ಲಿ ಪ್ರಯಾಣಿಸಬೇಕಾದರೆ ದಕ್ಕಿದೆ.ಹೌದು ಮಧ್ಯಪ್ರದೇಶದ ಸಂಕಲ್ಪ್ ಎಂಬ ರೈತ ತನ್ನ ಕುಟುಂಬದ ಜೊತೆಗೆ ರೈಲಿನಲ್ಲಿ ಚೆನ್ನೈಗೆ ಹೋಗುತ್ತಿರುತ್ತಾನೆ.ಸಂಕಲ್ಪ್ ಕುಟುಂಬ ಕುಳಿತಿದ್ದ ಅದೇ ಭೋಗಿಯಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಇವರಿಗೆ ಪರಿಚಯವಾಗುತ್ತಾನೆ.ಪ್ರಯಾಣ ಮುಂದುವರಿಯುತ್ತಾ ಪರಸ್ಪರ ಮಾತನಾಡಿ ಕೊಂಚ ಒಡನಾಟ ಬೆಳೆಯುತ್ತದೆ.

ಇನ್ನೇನೋ ಆ ವಯಸ್ಸಾದ ವ್ಯಕ್ತಿ ಇಳಿಯುವ ಸ್ಥಳ ಸನಿಹವಾಗುತ್ತಿದ್ದಂತೆ ತನ್ನ ಬಳಿ ಇದ್ದ ಮಾವಿನ ಸಸಿಯನ್ನ ಸಂಕಲ್ಪ್ ಅವರಿಗೆ ನೀಡಿ,ನೀನು ಈ ಗಿಡವನ್ನು ನಿಮ್ಮ ಜಾಗದಲ್ಲಿ ನೆಟ್ಟು ಜಾಗರೂಕತೆಯಿಂದ ಕಾಪಾಡಿಕೊಳ್ಳಿ ಎಂದು ಹೇಳಿ ರೈಲಿನಿಂದ ಇಳಿದು ಹೊರಟು ಹೋಗುತ್ತಾರೆ.ಇತ್ತ ತಮ್ಮ ಪ್ರಯಾಣದ ಉದ್ದೇಶ ಈಡೇರಿಸಿಕೊಂಡು ತಮ್ಮ ಊರಿಗೆ ಬಂದ ಸಂಕಲ್ಪ ಆ ಅಜ್ಜ ಕೊಟ್ಟಿದ್ದ ಆ ಗಿಡವನ್ನು ಯಾವುದೇ ವಿಶೇಷ ಆಸಕ್ತಿ ಇಲ್ಲದ ರೀತಿಯಲ್ಲಿಯೇ ತಮ್ಮ ಹೊಲದಲ್ಲಿ ನೆಡುತ್ತಾನೆ.ಇದು ಮಾವಿನ ಗಿಡ ಆಗಿರುತ್ತದೆ.ಈ ಮಾವಿನ ಗಿಡ ಕಾಲಾನು ನಂತರ ಬೆಳೆಯುತ್ತಾ ಇತರೆ ಮಾವಿನ ಗಿಡಕ್ಕಿಂತ ಕೊಂಚ ಭಿನ್ನವಾಗಿ ಕಾಣಲು ಶುರುವಾಗುತ್ತದೆ.ಇದನ್ನ ಗಮನಿಸಿದ ರೈತ ಸಂಕಲ್ಪ್ ಹತ್ತಿರದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಭೇಟಿ ಮಾಡಿ ಸಲಹೆ ಕೇಳುತ್ತಾರೆ. ಪರೀಕ್ಷೆ ಮಾಡಿದ ಅಧಿಕಾರಿಗಳು ಇದು ಸಾಮಾನ್ಯ ಮಾವಿನ ತಳಿಯಲ್ಲ.ಇದು ಮಿಯಾ ಜಾಕಿ ಎಂಬ ಜಾತಿಗೆ ಸೇರಿದ ವಿಶೇಷ ದುಬಾರಿ ಬೆಲೆ ಮಾವಿನ ಗಿಡ.ಈ ಮಾವಿನ ಹಣ್ಣುಗಳಿಗೆ ಹೊರ ದೇಶಗಳಲ್ಲಿ ಅದರಲ್ಲಿಯೂ ಜಪಾನ್ ದೇಶದಲ್ಲಿ ಭಾರಿ ಬೇಡಿಕೆಯಿದೆ.ಕೇವಲ ಒಂದು ಕೆ.ಜಿ.ಮಾವಿನ ಹಣ್ಣಿಗೆ ಬರೋಬ್ಬರಿ ಮೂರು ಲಕ್ಷ ರೂ.ಗಳ ಬೆಲೆ ಎಂಬುದನ್ನು ತಿಳಿಸುತ್ತಾರೆ.

ಇದರಿಂದ ಸಂಕಲ್ಪ್ ಅವರಿಗೆ ಸಂತಸದ ಜೊತೆಗೆ ಕೊಂಚ ಭಯವೂ ಕೂಡ ಆಗುತ್ತದೆ.ಖುಷಿ ಆಗುವುದು ತಾನು ನೆಟ್ಟಿದ್ದ ಮಾವಿನ ಗಿಡದಲ್ಲಿ ಏಳು ಮಾವಿನ ಹಣ್ಣು ಬಿಟ್ಟವೆ.ಒಂದು ಹಣ್ಣಿಗೆ ಮೂರು ಲಕ್ಷ ರೂ.ಆದರೆ ಏಳು ಹಣ್ಣಿಗೆ ಇಪ್ಪೊತ್ತೊಂದು ಲಕ್ಷ ರೂ.ಆಗುತ್ತದೆ.ಇನ್ನೊಂದೆಗಡೆ ಆತಂಕವಾಗಿ ಕಾಡಿದ್ದು ಇದನ್ನು ಕಳ್ಳಕಾಕರಿಂದ ಕಾಪಾಡುವುದೇಗೆ ಎಂಬುದು.ಹಾಗಾಗಿ ಈ ದುಬಾರಿ ಬೆಲೆಯ ಮಾವಿನ ಹಣ್ಣುಗಳ ರಕ್ಷಣೆಗಾಗಿ ಆರು ಶ್ವಾನ ದಳ ಮತ್ತು ನಾಲ್ಕು ಜನ ಅಂಗರಕ್ಷಕರನ್ನು ನೇಮಿಸಿಕೊಂಡಿದ್ದಾರೆ ರೈತ ಸಂಕಲ್ಪ್.ಒಂದೊಂದು ಹಣ್ಣು ಸರಿ ಸುಮಾರು 900 ಗ್ರಾಂ ಯಿಂದ 1 ಕೆಜಿ ವರೆಗೆ ತೂಕವಿರುತ್ತದೆ.ಈ ವಿಶೇಷ ದುಬಾರಿ ಮಾವಿನ ಹಣ್ಣಿನ ವಿಚಾರ ತಿಳಿದ ಸ್ಥಳೀಯ ವ್ಯಾಪಾರಸ್ಥರು ಒಂದು ಹಣ್ಣಿಗೆ ಇಪ್ಪತ್ತರಿಂದ ಮೂವತ್ತು ಸಾವಿರ ನೀಡುವುದಾಗಿ ಅಮೀಷ ತೋರಿಸುತ್ತಿದ್ದಾರೆ.ಆದರೆ ಈ ಎಲ್ಲಾ ಆಮಿಷಗಳನ್ನ ನಯವಾಗಿ ತಿರಸ್ಕರಿಸಿದ ಸಂಕಲ್ಪ್ ಅವುಗಳನ್ನು ಬೇಡಿಕೆಯಿರುವ ಸ್ಥಳದಲ್ಲಿ ಮಾರಾಟ ಮಾಡಲು ನಿರ್ಧರಿಸಿ,ಅದಕ್ಕೆ ಸೂಕ್ತವಾದ ಕಾವಲಿಗಾಗಿ ಬಾಡಿಗಾರ್ಡ್ ನೇಮಿಸಿದ್ದಾರೆ.ಕೇವಲ ಏಳು ಮಾವಿನ ಹಣ್ಣುಗಳಿಗಾಗಿ ಬಾಡಿಗಾರ್ಡ್ಸ್ ನೇಮಕ ಮಾಡಿದ ಕಾರಣ ಈ ಸುದ್ದಿ ದೇಶದೆಲ್ಲೆಡೆ ಭಾರಿ ವೈರಲ್ ಆಗಿದೆ.

Leave a Reply

%d bloggers like this: