ವಿಶ್ವದ ಅತೀ ದುಬಾರಿ ಕಾರು ಖರೀದಿಸಿದ ವಿಶ್ವದ ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ! ಬೆಲೆ ಎಷ್ಟು ಗೊತ್ತಾ? ನೋಡಿ ಒಮ್ಮೆ

ವಿಶ್ವದ ಆಗರ್ಭ ಶ್ರೀಮಂತರಲ್ಲಿ ಮುಂದಿನ ಸಾಲಿನಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳ ಪೈಕಿ ಪ್ರಮುಖ ಉದ್ಯಮಿ ಆಗಿರುವ ರಿಲಯನ್ಸ್ ಸಂಸ್ಥೆಯ ಸಂಸ್ಥಾಪಕ ಆಗಿರುವ ಮುಖೇಶ್ ಅಂಬಾನಿ ಅವರು ಇಡೀ ಜಗತ್ತಿನ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರ್ ವೊಂದನ್ನ ಖರೀದಿ ಮಾಡಿ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಹೌದು ಮುಖೇಶ್ ಅಂಬಾನಿ ಅವರು ಸದ್ಯದ ಮಟ್ಟಿಗೆ ವಾಣಿಜ್ಯ ಉದ್ಯಮದಲ್ಲಿ ಯಶಸ್ವಿ ವ್ಯಕ್ತಿಯಾಗಿ ಹೆಸರು ಮಾಡಿದ್ದಾರೆ. ತಮ್ಮ್ಮದೇಯಾದ ಸ್ವಂತ ಕಂಪನಿಗಳ ಜೊತೆ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವ ಮೂಲಕ ಅಪಾರ ಆದಾಯ ಗಳಿಸುತ್ತಿದ್ದಾರೆ. ರಿಟೇಲ್ ಕ್ಷೇತ್ರ, ಪೆಟ್ರೋಲಿಯಂ ಮತ್ತು ಇನ್ನಿತರ ಬಹು ರಾಷ್ಟ್ರೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮುಖೇಶ್ ಅಂಬಾನಿ ಅವರು ಕೆಲವು ವರ್ಷಗಳ ಹಿಂದೆ ರಿಲಯನ್ಸ್ ಜಿಯೋ ಸಂಸ್ಥೆಯನ್ನ ಹುಟ್ಟುಹಾಕಿ ಟೆಲಿಕಾಂ ಕ್ಷೇತ್ರಕ್ಕೂ ಕಾಲಿಟ್ಟು ಇಡೀ ಟೆಲಿಕಾಂ ಕ್ಷೇತ್ರದಲ್ಲಿಯೇ ಹೊಸದೊಂದು ಸಂಚಲನ ಸೃಷ್ಟಿ ಮಾಡಿಬಿಟ್ಟರು. ಇವರ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆಯು ಟೆಲಿಕಾಂ ಕ್ಷೇತ್ರದಲ್ಲಿ ದಶಕ ದಶಕಗಳಿಂದ ಜನಪ್ರಿಯವಾಗಿದ್ದ ಭಾರ್ತಿ ಏರ್ಟೆಲ್ ಸಂಸ್ಥೆಗೆ ಪ್ರಬಲ ಪೈಪೋಟಿ ಮಾಡಿ ಇದೀಗ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.

ಹೀಗೆ ಒಂದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳದೇ ವಿವಿಧ ರೀತಿಯ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಿ ಜಗತ್ತಿನ ಅತ್ಯಂತ ಜನಪ್ರಿಯ ಉದ್ಯಮಿಯಾಗಿ ವಾಣಿಜ್ಯ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿ ಅವರು ಈಗಾಗಲೇ ರಿಟೇಲ್, ಪೆಟ್ರೋಲಿಯಂ ಸೇರಿದಂತೆ ವಿವಿಧ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೆ ಬಿಡುಗಡೆಯಾದ ಬ್ಲೂಮ್ ಬರ್ಗ್ ಬಿಲಿಯೇನರ್ಸ್ ಸೂಚಿಯಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅಗ್ರ ಹದಿನೈದು ಜನರ ಹೆಸರಿನ ಸಾಲಿನಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ . ಈ ಬ್ಲೂಮ್ ಬರ್ಗ್ ಬಿಲಿಯೇನರ್ಸ್ ಇಂಡೆಕ್ಸ್ ನಲ್ಲಿ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಬರೋಬ್ಬರಿ 95.4 ಬಿಲಿಯನ್ ಡಾಲರ್ ನಷ್ಟು ಮೌಲ್ಯ ಹೊಂದಿದೆ ಎಂದು ಪ್ರಕಟಿಸಿದೆ. ಇನ್ನು ಮುಖೇಶ್ ಅಂಬಾನಿ ಅವರು ಇಷ್ಟೆಲ್ಲಾ ಆದಾಯದ ಮೂಲಗಳನ್ನ ಹೊಂದಿದ್ದರು ಕೂಡ ಕಳೆದ ಕೆಲವು ವರ್ಷಗಳ ಹಿಂದೀಚೆಗೆ ರಿಯಲ್ ಎಸ್ಟೇಟ್ ಕ್ಷೇತ್ರದತ್ತಲೂ ಮುಖ ಮಾಡಿದರು.

ಅದದಂತೆ ಮುಖೇಶ್ ಅಂಬಾನಿಯವರು ಬ್ರಿಟನ್ ದೇಶದ ಪ್ರತಿಷ್ಟಿತ ಸ್ಟೋಕ್ ಪಾರ್ಕ್ ಲಿಮಿಟೆಡ್ ಅನ್ನು ಭಾರಿ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದರು‌. ಇದರ ಜೊತೆಗೆ ಇದೀಗ ನ್ಯೂಯಾರ್ಕ್ ನ ಪ್ರೀಮಿಯರ್ ವಿಲಾಸಿ ಐಷಾರಾಮಿ ಹೋಟೆಲ್ ವೊಂದನ್ನ ಖರೀದಿ ಮಾಡಿದರು. ಈ ಪ್ರತಿಷ್ಟಿತ ಹೋಟೆಲ್ ವೊಂದನ್ನ ಬರೋಬ್ಬರಿ 728 ಕೋಟಿ ಗೆ ಖರೀದಿ ಮಾಡಿ ಭಾರಿ ಸುದ್ದಿಯಾಗಿದ್ದರು. ಇದೀಗ ಮುಖೇಶ್ ಅಂಬಾನಿ ಅವರು ಮತ್ತೇ ಸುದ್ದಿಯ ಮುನ್ನೆಲೆಗೆ ಬಂದಿರುವುದು ಜಗತ್ತಿನ ಅತ್ಯಂತ ದುಬಾರಿ ಐಷಾರಾಮಿ ಕಾರ್ ಅಂತಾನೇ ಹೆಸರಾಗಿರುವ ರೋಲ್ಸ್ ರಾಯ್ ಹ್ಯಾಚ್ ಬ್ಯಾಕ್ ಕಾರನ್ನ ಬರೋಬ್ಬರಿ ಹದಿನಾಲ್ಕು ಕೋಟಿಗೆ ಖರೀದಿ ಮಾಡಿದ್ದಾರೆ. ಈಗಾಗಲೇ ಅನೇಕ ಐಷಾರಾಮಿ ಅಡ್ವಾನ್ಸ್ಡ್ ಕಾರ್ ವೊಂದಿರುವ ಅಂಬಾನಿ ಅವರ ಕಾರ್ ಗ್ಯಾರೇಜ್ ಗೆ ಈಗ ಈ ಒಂದು ರೋಲ್ಸ್ ರಾಯ್ ಹ್ಯಾಚ್ ಬ್ಯಾಕ್ ಕಾರ್ ಕೂಡ ಸೇರ್ಪಡೆಗೊಂಡಿದೆ.

Leave a Reply

%d bloggers like this: