ವಿಮಾನ ಮೇಲೆ ಹೋದ ತಕ್ಷಣ ಪೈಲಟ್ ನಿದ್ರೆ ಮಾಡುತ್ತಾರಂತೆ! ಈಗಲೂ 100% ಜನರಿಗೆ ಗೊತ್ತಿಲ್ಲ

ಸಾಮಾನ್ಯವಾಗಿ ನಾವು ಊಹಿಸಲಾರದಷ್ಟು ವಿಚಾರ ಸಂಗತಿಗಳು ಪ್ರತಿ ನಿತ್ಯ ನಮ್ಮ ಜೊತೆಯಲ್ಲಿಯೇ ನಡೆಯುತ್ತಿರುತ್ತದೆ. ಸಾರಿಗೆ ವ್ಯವಸ್ಥೆಯಲ್ಲಿರುವಂತಹ ರಸ್ತೆ ಸಾರಿಗೆ,ಜಲಸಾರಿಗೆ ಅದರಂತೆ ವಾಯುಸಾರಿಗೆ ಕೂಡ ಒಂದು. ವಾಯುಸಾರಿಗೆ ಅಂದಾಕ್ಷಣ ನಮಗೆ ತಟ್ಟನೆ ನೆನಪಾಗುವುದು ವಿಮಾನಯಾನ.ಈ ವಿಮಾನದ ಹಿನ್ನೆಲೆ ‌ತಿಳಿಯುವುದಾದರೆ ರೈಟ್ ಸಹೋದರರು 1903 ರಲ್ಲಿ ಈ ವಿಮಾನದ ಪರಿಕಲ್ಪನೆಯನ್ನ ಕಂಡುಹಿಡಿದರು. ಈ ವಿಮಾನಗಳಲ್ಲಿ ಕಲೆವೊಂದಷ್ಟು ಕುತೂಹಲಕಾರಿ ಸಂಗತಿಗಳು ಇರುತ್ತವೆ.ಒಂದೆರಡು ದಶಕಗಳ ಹಿಂದೆ ವಿಮಾನದಲ್ಲಿ ಪ್ರಯಾಣಿಸುವುದು ಎಂದರೆ ಯಾವುದೊ ಒಂದು ರೀತಿಯ ಸಾಧನೆ ಮಾಡಿದಂತಹ ಹೆಮ್ಮೆಯ ಭಾವವಿರುತ್ತದೆ. ಆದರೆ ಇಂದಿನ ದಿನಮಾನಗಳಲ್ಲಿ ವಿಮಾನಗಳಲ್ಲಿ ಪ್ರಯಾಣಿಸುವುದು ಎಂದರೆ ಸಾಮಾನ್ಯವಾಗಿದೆ. ವಿಮಾನಗಳಲ್ಲಿ ಪೈಲೆಟ್ ಗಳು, ಗಗನಸಖಿಯರು ಸೇರಿದಂತೆ ಒಂದಷ್ಟು ಸಿಬ್ಬಂದಿ ವರ್ಗ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಅಚ್ಚರಿಯ ವಿಚಾರ ಎಂದರೆ ವಿಮಾನಗಳು ಟೇಕ್ ಅಪ್ ಆದೊಡನೆಯೆ ಪೈಲೆಟ್ ಒಬ್ಬರು ನಿದ್ದೆಗೆ ಜಾರುತ್ತಾರೆ.

ಹಾಗಂದ ಮಾತ್ರಕ್ಕೆ ಪೈಲೆಟ್ ಗಳು ನಿದ್ರಿಸುತ್ತಾ ವಿಮಾನವನ್ನು ಚಾಲನೆ ಮಾಡುತ್ತಾರೆ ಎಂದು ತಿಳಿಯಬೇಕಾಗಿಲ್ಲ. ಅಸಲಿಗೆ ಒಂದು ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಇರುತ್ತಾರೆ. ಸಾಮಾನ್ಯವಾಗಿ ವಿಮಾನಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸಬೇಕಾದಾಗ ಇಬ್ಬರು ಪೈಲೆಟ್ ಗಳು ಇರುವುದು ಅಗತ್ಯ ಮತ್ತು ಕಡ್ಡಾಯವಾಗಿರುತ್ತದೆ. ನಿರಂತರವಾಗಿ ವಿಮಾನವನ್ನು ಚಾಲನೆ ಮಾಡಿದಂತಹ ಪೈಲಟ್ ತನ್ನ ಡೆಸ್ಟಿನೇಶನ್ ತಲುಪಿದ ನಂತರ ಮತ್ತೊಬ್ಬ ಪೈಲೆಟ್ ಗೆ ತನ್ನ ಚಾಲನಾ ಸ್ಥಳವನ್ನ ಬಿಟ್ಟು ತಾನು ನಿದ್ರೆಗೆ ಹೋಗುತ್ತಾರೆ ಈ ಪ್ರಕ್ರಿಯೆ ಸಹಜವಾಗಿರುತ್ತದೆ. ಇನ್ನು ವಿಮಾನ ಕೆಲವೊಮ್ಮೆ ಭೂಮಿಯಿಂದ ಅತೀ ಹೆಚ್ಚು ಅಂತರದಲ್ಲಿ ಹಾರಾಟ ನಡೆಸುವಾಗ ವಿಮಾನದಲ್ಲಿ ಆಮ್ಲ ಜನಕದ ಕೊರತೆ ಎದುರಿಸಬೇಕಾಗುತ್ತದೆ.ಇಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರಯಾಣಿಕರ ಜೀವ ರಕ್ಷಣೆಗಾಗಿ ಆಕ್ಸಿಜನ್ ಮಾಸ್ಕ್ ಗಳನ್ನು ವಿಮಾನಗಳಲ್ಲಿ ಇರಿಸಲಾಗುತ್ತದೆ. ಈ ವಿಶೇಷ ಅಕ್ಸಿಜನ್ ಮಾಸ್ಕ್ ಗಳು ಕೇವಲ ೧೪ ನಿಮಿಷಗಳ ಕಾಲ ಮಾತ್ರ ಉಪಯೋಗಕ್ಕೆ ಬರುತ್ತದೆ.ಹಾಗೇ ವಿಮಾನಗಳಲ್ಲಿ ಚಹಾದಂತಹ ಪಾನೀಯಗಳನ್ನು ಸಾಮಾನ್ಯವಾಗಿ ಪ್ರಯಾಣಿಕರು ನಿರಾಕರಿಸುತ್ತಾರೆ.

ಕಾರಣ ಸರಬರಾಜು ಮಾಡುವ ಪ್ರಕ್ರಿಯೆಯಲ್ಲಿ ಒಂದಷ್ಟು ಅಶುಧ್ದತೆಯನ್ನ ಕಾಣಬಾಹುದಾಗಿರುತ್ತದೆ ಎಂದು ಒಂದಷ್ಟು ಮಂದಿ ತಿಳಿಸುವುದುಂಟು. ವಿಮಾನದಲ್ಲಿ ಕೆಲವೊಮ್ಮೆ ಆಕಸ್ಮಿಕ ವಾಗಿ ಸಾವು ಸಂಭವಿಸಿದಾಗ, ಸಾವಿಗೀಡಾದಂತಹ ವ್ಯಕ್ತಿಯನ್ನ ಅವರು ಪಡೆದಂತಹ ಆಸನದಲ್ಲಿಯೇ ಇರಿಸಬೇಕಾಗುತ್ತದೆಯೇ ಹೊರತು ಯಾವುದೇ ರೀತಿಯಾಗಿ ಬದಲಾವಣೆ ಮಾಡುವಂತಿರುವುದಿಲ್ಲ.ಇನ್ನೂ ಪ್ರಮುಖ ವಾಗಿ ವಿಮಾನಗಳಲ್ಲಿ ಡೀಮ್ ಲೈಟ್ ಗಳನ್ನು ಬಳಸಲಾಗುತ್ತದೆ. ಏಕೆಂದರೆ ವಿಮಾನಗಳು ಟೇಕ್ ಆಫ್ ಆದಾಗ ಸಾಮಾನ್ಯವಾಗಿ ಪ್ಲೈಟ್ ನಲ್ಲಿ ತುರ್ತು ಪರಿಸ್ಥಿತಿ ಎದುರಾದಂತಹ ಸಂಧರ್ಭದಲ್ಲಿ ವಿದ್ಯುತ್ ಸ್ತಬ್ದವಾಗಿ ಕತ್ತಲೆ ಉಂಟಾದರೆ, ಮೊದಲನೇ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ‌ ಅಥವಾ ಸೂಕ್ಷ್ಮ ಮನಸ್ಸಿನ ಪ್ರಯಾಣಿಕರು ಇದ್ದಲ್ಲಿ ಆತಂಕಕ್ಕೆ ಒಳಗಾಗಬಹುದು‌ ಎಂಬ ಸದುದ್ದೇಶದಿಂದ ಡೀಮ್ ಲೈಟ್ಗಳನ್ನ ಅಳವಡಿಸಲಾಗಿರುತ್ತದೆ.

Leave a Reply

%d bloggers like this: