ವಿಕ್ರಾಂತ್ ರೋಣ ರಂಗಿತರಂಗ ಚಿತ್ರದ ಥರಾನೇ ಇದೆ ಅನ್ನೊರಿಗೆ ಕಿಚ್ಚನ ಖಡಕ್ ಉತ್ತರ

ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್ ನೀಡಿದ್ದಾರೆ. ಹೌದು ಕಳೆದ ವಾರ ಜುಲೈ 28 ಗುರುವಾರದಂದು ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದ ಸುದೀಪ್ ಅವರ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ ವರ್ಲ್ಡ್ ವೈಡ್ ಪಂಚಭಾಷೆಗಳಲ್ಲಿ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಮೊದಲ ಬಾರಿಗೆ ಸುದೀಪ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ನೋಡಿದ ಪ್ರತಿಯೊಬ್ಬ ಸಿನಿ ಪ್ರೇಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಸಿನಿಮಾ ನೋಡದೇ ಅಥವಾ ದುರುದ್ದೇಶದಿಂದಾಗಿ ವಿಕ್ರಾಂತ್ ರೋಣ ಸಿನಿಮಾ ಚೆನ್ನಾಗಿಲ್ಲ. ರಂಗಿತರಂಗ ಚಿತ್ರದಂತೆ ಇದೆ. ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಸುದೀಪ್ ಅವರಿಗೆ ಈ ಚಿತ್ರ ಸೂಟ್ ಆಗಲ್ಲ.

ಅದಲ್ಲದೆ ಈ ವಿಕ್ರಾಂತ್ ರೋಣ ಸಿನಿಮಾ ನಾವು ನಿರೀಕ್ಷೆ ಮಾಡಿದ್ದಷ್ಟು ಮನರಂಜನೆ ನೀಡಲ್ಲ. ಹಾಗೇ ಹೀಗೆ ಎಂದೆಲ್ಲಾ ವಿಕ್ರಾಂತ್ ರೋಣ ಚಿತ್ರದ ನಾಯಕ ನಟ ಸುದೀಪ್ ಅಂಡ್ ನಿರ್ದೇಶಕ ಅನೂಪ್ ಭಂಡಾರಿ ಅವರ ಕೆಲಸದ ಬಗ್ಗೆ ತೀರಾ ಕೇವಲವಾಗಿ ಮೌತ್ ಪಬ್ಲಿಸಿಟಿ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿಯೂ ಕೂಡ ಪೋಸ್ಟ್ ಮಾಡಿದ್ದಾರೆ. ಇದೇ ಸಂಧರ್ಭದಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಚಿತ್ರದ ಬಗ್ಗೆ ನೆಗೆಟೀವ್ ಮಾಡುತ್ತಿರುವುದನ್ನ ಸೂಕ್ಷ್ಮವಾಗಿ ಗಮನಿಸಿ ಈ ಹಿಂದೆ ನನ್ನ ಸಿನಿಮಾಗಳ ವಿರುದ್ದ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಆದರೆ ಪ್ರಕೃತಿ ನನ್ನ ಪರವಾಗಿಯೇ ಇದೆ ಎಂದು ಹೇಳಿದ್ದರು. ಅದೇ ರೀತಿಯಾಗಿ ವಿಕ್ರಾಂತ್ ರೋಣ ಸಿನಿಮಾ ರಂಗಿತರಂಗ ಥರಾನೇ ಇದೆ ಅನ್ನೋರಿಗೆ ‘ಇವಾಗೇನು’ ವಿಕ್ರಾಂತ್ ರೋಣ ಸಿನಿಮಾ ರಂಗಿತರಂಗ ಸಿನಿಮಾ ಥರಾ ಇದೆ.

ರಂಗಿತರಂಗನೇ ಅಲ್ವಲ್ಲ ಎಂದು ಕಿಚ್ಚ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ಈ ವಿಕ್ರಾಂತ್ ರೋಣ ಸಿನಿಮಾಗಾಗಿ ಎಷ್ಟು ಮಂದಿ ದುಡಿದಿದ್ದಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಈ ರೀತಿಯ ಸಿನಿಮಾವನ್ನು ನಾನು ಮತ್ತೇ ಮಾಡಲು ಸಾಧ್ಯವಾಗೋಲ್ಲ. ನೆಗೆಟೀವ್ ಮಾಡುವವರು ಮಾಡಲಿ ಅವರಿಗೆ ಒಳ್ಳೇದಾಗಲಿ ಎಂದು ನಿರ್ದೇಶಕ ಅನೂಪ್ ಭಂಡಾರಿ ಅವರು ಕೂಡ ತಿಳಿಸಿದ್ದಾರೆ. ಇನ್ನೊಂದೆಡೆ ಒಟ್ಟಾರೆಯಾಗಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 35 ಕೋಟಿ ಕಲೆಕ್ಷನ್ ಮಾಡಿದ್ದು, ನಾಲ್ಕೇ ದಿನಕ್ಕೆ ಬರೋಬ್ಬರಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ 100 ಕ್ರೋಸ್ ಕ್ಲಬ್ ಸೇರಿದೆ. ಇನ್ನು ಇತ್ತೀಚೆಗೆ ವಿಕ್ರಾಂತ್ ರೋಣ ಸಿನಿಮಾವನ್ನು ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ ಅವರು ಕೂಡ ನೋಡಿ ಕಿಚ್ಚನಿಗೆ ಮೆಚ್ಚುಗೆಯ ಮಾತುಗಳನ್ನಾಡಿ ಟ್ವೀಟ್ ಮಾಡಿದ್ದರು.