ವಿಕ್ರಾಂತ್ ರೋಣ ಚಿತ್ರ ನೋಡಿದ ರಾಜಮೌಳಿ ಚಿತ್ರದ ಬಗ್ಗೆ ಹೀಗೆ ಹೇಳಿದ್ರು

ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ಅಂದರೆ ಅದು ಕನ್ನಡದ ವಿಕ್ರಾಂತ್ ರೋಣ ಸಿನಿಮಾ. ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಕನ್ನಡದ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ. ಕಳೆದ ಗುರುವಾರ ವರ್ಲ್ಡ್ ವೈಡ್ ರಿಲೀಸ್ ಆದ ಈ ಚಿತ್ರ ಇದೀಗ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೆಲವೆಡೆ ಹೊರತುಪಡಿಸಿ ಬಿಡುಗಡೆಯಾದ ಎಲ್ಲಾ ಸೆಂಟರ್ ಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಫ್ಯಾಂಟಸಿ ಕಲ್ಪನೆಯ ವಿಕ್ರಾಂತ್ ರೋಣ ಸಿನಿಮಾದ ತಂತ್ರಜ್ಞಾನದ ಬಗ್ಗೆ ಈಗಾಗಲೇ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಂತೆ ವಿಕ್ರಾಂತ್ ರೋಣ ಸಿನಿಮಾ ಬರೋಬ್ಬರಿ ಅರವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡುತ್ತಿದೆ ಎಂದು ತಿಳಿದು ಬಂದಿದೆ.

ಇದರ ನಡುವೆ ಕೆಲವು ಕಿಡಿಗೆಡಿಗಳು ಸಿನಿಮಾ ನೋಡದೇ ಅಥವಾ ಉದ್ದೇಶ ಪೂರ್ವಕವಾಗಿಯೇ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ‌. ಆದರೆ ವಿಕ್ರಾಂತ್ ರೋಣ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಮಾತ್ರ ಕಿಚ್ಚನಿಗೆ ಬಹುಪರಾಕ್ ಹೇಳುತ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಕೆಜಿಎಫ್ ಚಿತ್ರದ ನಂತರ ಹೊರ ದೇಶಗಳಲ್ಲಿಯೂ ಕೂಡ ಪ್ರದರ್ಶನ ಕಂಡು ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರ ನಡುವೆ ವಿಕ್ರಾಂತ್ ರೋಣ ಸಿನಿಮಾ ತಂಡಕ್ಕೆ ತೆಲುಗಿನ ಸೂಪರ್ ಸ್ಟಾರ್ ನಿರ್ದೇಶಕನಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿದೆ. ಹೌದು ಭಾರತೀಯ ಚಿತ್ರರಂಗದ ಸೃಜನಾತ್ಮಕ ಪ್ರತಿಭಾವಂತ ನಿರ್ದೇಶಕರ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ವಿಕ್ರಾಂತ್ ರೋಣ ಸಿನಿಮಾವನ್ನು ನೋಡಿದ್ದು ಕಿಚ್ಚನ ಹೊಸ ಅವತಾರಕ್ಕೆ ಫಿಧಾ ಆಗಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾ ನೋಡಿದ ರಾಜಮೌಳಿ ಕಿಚ್ಚನಿಗೆ ಅಭಿನಂದನೆ ಸಲ್ಲಿಸಿ ಈ ರೀತಿಯ ಕಥೆಯನ್ನ ಒಪ್ಪಿಕೊಂಡು ಸಿನಿಮಾ ಮಾಡುವುದಕ್ಕೆ ಧೈರ್ಯ ಬೇಕು, ಸಿನಿಮಾ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂದು ವಿಕ್ರಾಂತ್ ರೋಣ ಚಿತ್ರದ ಯಶಸ್ಸನ್ನ ಕುರಿತು ಟ್ವೀಟ್ ಮಾಢಿದ್ದಾರೆ. ರಾಜಮೌಳಿ ಅವರ ಈ ಪೋಸ್ಟ್ ಕಂಡು ಸುದೀಪ್ ಅವರು ಕೂಡ ನಿಜಕ್ಕೂ ಕೂಡ ನಿಮ್ಮಿಂದ ಈ ರೀತಿಯ ಪ್ರತಿಕ್ರಿಯೆ ಕೇಳಿ ನನಗೆ ಸಂತೋಷವಾಗಿದೆ. ನಿಮಗೆ ತುಂಬು ಹೃದಯದ ಧನ್ಯವಾದಗಳು ಎಂದು ರೀ ಟ್ವೀಟ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರ ಆಪ್ತರಲ್ಲಿ ಎಸ್.ಎಸ್‌.ರಾಜಮೌಳಿ ಅವರು ಕೂಡ ಒಬ್ಬರಾಗಿದ್ದು ವಿಕ್ರಾಂತ್ ರೋಣ ಸಿನಿಮಾ ನೋಡಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದು ಕಿಚ್ಚ ಮತ್ತು ಕಿಚ್ಚನ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಒಟ್ಟಾರೆಯಾಗಿ ವಿಕ್ರಾಂತ್ ರೋಣ ಸಿನಿಮಾ ಎಲ್ಲೆಡೆ ಸಖತ್ ರೆಸ್ಪಾನ್ಸ್ ಪಡೆದು ಥಿಯೇಟರ್ ಗಳಲ್ಲಿ ಉತ್ತಮವಾಗಿ ಪ್ರದರ್ಶನವಾಗುತ್ತಿದೆ.

Leave a Reply

%d bloggers like this: