‘ವಿಕ್ರಮ್ ವೇದಾ’ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆದ ಹೃತಿಕ್ ರೋಶನ್ ಅವರು

ಬಾಲಿವುಡ್ ಎವರ್ಗೀನ್ ಹ್ಯಾಂಡ್ಸಮ್ ಹೀರೋ ನಟ ಹೃತಿಕ್ ರೋಷನ್ ಅವರ ಸಂಭಾವನೆ ಎಷ್ಟಿದೆ ಗೊತ್ತಾ. ಸದ್ಯಕ್ಕೆ ಬಾಲಿವುಡ್ ಅಂಗಳದಲ್ಲಿ ವಿಕ್ರಂ ವೇದಾ ಸಿನಿಮಾದ್ದೇ ಸೌಂಡು. ಅದರ ಜೊತೆಗೆ ಈ ವಿಕ್ರಮ್ ವೇದಾ ಸಿನಿಮಾದಲ್ಲಿ ನಟಿಸೋದಕ್ಕೆ ಹೃತಿಕ್ ರೋಷನ್ ಅವರು ಎಷ್ಟು ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿ ಬಿಟೌನ್ ನಲ್ಲಿ ಸಖತ್ ಟಾಕ್ ಆಗ್ತಿದೆ. ಇತ್ತೀಚೆಗೆ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾದ ಯಶಸ್ಸು ಬಾಲಿವುಡ್ ಮತ್ತೇ ರಂಗೇರುವಂತೆ ಮಾಡಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಲ್ಲಿ ಸ್ಟಾರ್ ನಟರ ಸಿನಿಮಾಗಳು ಇದೀಗ ಬಿಡುಗಡೆಗೆ ಸಿದ್ದವಾಗಿವೆ‌. ಅದರಂತೆ ಕಳೆದ ಸೆಪ್ಟೆಂಬರ್ 30ರಂದು ರಿಲೀಸ್ ಆದ ವಿಕ್ರಂವೇದಾ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ತಕ್ಕ ಮಟ್ಟಿಗೆ ಸೌಂಡ್ ಮಾಡುತ್ತಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಕ್ರಂವೇದಾ ಸಿನಿಮಾ ತಮಿಳಿನ ರೀಮೇಕ್ ಸಿನಿಮಾ. ವಿಜಯ್ ಸೇತುಪತಿ ನಟಿಸಿದ ಪಾತ್ರದಲ್ಲಿ ಹೃತಿಕ್ ರೋಶನ್ ಕಾಣಿಸಿಕೊಂಡಿದ್ದು, ಮಾಧವನ್ ನಟಿಸಿದ್ದ ಪಾತ್ರದಲ್ಲಿ ಸೈಫ್ ಅಲಿಖಾನ್ ನಟಿಸಿದ್ದಾರೆ. 2019ರಲ್ಲಿ ತೆರೆಕಂಡ ವಾರ್ ಚಿತ್ರದ ನಂತರ ಹೃತಿಕ್ ರೋಷನ್ ಅವರ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಮೂರು ವರ್ಷಗಳ ನಂತರ ಹೃತಿಕ್ ರೋಷನ್ ಅವರ ಸಿನಿಮಾ ರಿಲೀಸ್ ಆದ ಕಾರಣ ಅವರ ಅಭಿಮಾನಿಗಳು ಕೂಡ ವಿಕ್ರಂ ವೇದಾ ಸಿನಿಮಾ ರೀಮೇಕ್ ಆಗಿದ್ದರು ಕೂಡ ಉತ್ಸುಕತೆಯಿಂದ ಹೋಗಿ ನೋಡಿದ್ದಾರೆ‌. ವೇದಾ ಪಾತ್ರದಲ್ಲಿ ಖಡಕ್ ಮಾಸ್ ಆಗಿ ಕಾಣಿಸಿಕೊಂಡಿರೋ ಹೃತಿಕ್ ರೋಷನ್ ಅವರ ಅಭಿನಯಕ್ಕೆ ಅವರ ಅಭಿಮಾನಿಗಳು ಸಖತ್ ಫಿಧಾ ಆಗಿದ್ದಾರೆ. ಈ ವಿಕ್ರಂ ವೇದಾ ಸಿನಿಮಾ ಹೃತಿಕ್ ರೋಷನ್ ಅವರಿಗೆ ಬಿಗ್ ಬ್ರೇಕ್ ಅಂತಾನೇ ಹೇಳ್ಭೋದು.

ವಿಕ್ರಂ ವೇದಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದಾಗಲೇ ಇದೀಗ ಈ ಚಿತ್ರದಲ್ಲಿ ನಟಿಸಿರೋ ಕಲಾವಿದರ ಸಂಭಾವನೆ ಎಷ್ಟಿರಬಹುದು ಎಂದು ಬಿಟೌನ್ ನಲ್ಲಿ ಲೆಕ್ಕಾಚಾರ ಶುರುವಾಗಿದೆ. ಮೂಲಗಳ ಪ್ರಕಾರ ನಾಯಕ ಹೃತಿಕ್ ರೋಷನ್ ಅವರು ಈ ವೇದಾ ಪಾತ್ರಕ್ಕಾಗಿ ಬರೋಬ್ಬರಿ 50 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಅದೇ ರೀತಿಯಾಗಿ ವಿಕ್ರಮ್ ಪಾತ್ರ ನಿರ್ವಹಿಸಿರೋ ಸೈಫ್ ಅಲಿ ಖಾನ್ ಅವರು ಹನ್ನೆರಡು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿರೋ ರಾಧಿಕಾ ಆಪ್ಟೆ ಬರೋಬ್ಬರಿ ಮೂರು ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇನ್ನು ಒಟ್ಟಾರೆಯಾಗಿ ಸರಿ ಸುಮಾರು ವಿಕ್ರಂವೇದಾ ಸಿನಿಮಾ ಬರೋಬ್ಬರಿ 175 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು, ಮೊದಲ ವಾರದಲ್ಲಿಯೇ ಶೇಕಡವಾರು ಕಲೆಕ್ಷನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ.

Leave a Reply

%d bloggers like this: