ವಿಜಯ್ ದೇವರಕೊಂಡ ಅವರ ಲೈಗರ್ ಚಿತ್ರದ ಸೋಲಿನಿಂದ ಹಲವಾರು ಕೋಟಿ ನಷ್ಟ, ಈಗ ಹೊಸ ನಿರ್ಧಾರ ಮಾಡಿದ ನಿರ್ಮಾಪಕಿ

ಲೈಗರ್ ಸಿನಿಮಾದ ಸೋಲಿನ ಬಳಿಕ ಸೋಶಿಯಲ್ ಮೀಡಿಯಾಗೆ ಬ್ರೇಕ್ ಹಾಕಿದ್ದಾರೆ ನಟಿ ಕಮ್ ನಿರ್ಮಾಪಕಿ ಚಾರ್ಮಿ ಕೌರ್. ಹೌದು ಇತ್ತೀಚೆಗೆಯಷ್ಟೇ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಪ್ಯಾನ್ ಇಂಡಿಯಾ ಲೈಗರ್ ಸಿನಿಮಾ ಅಪಾರ ನಿರೀಕ್ಷೆ ಹುಟ್ಟು ಹಾಕಿತ್ತು. ಈ ಲೈಗರ್ ಸಿನಿಮಾದ ಮೂಲಕ ವಿಜಯ್ ದೇವರಕೊಂಡ ಕೂಡ ಬಾಲಿವುಡ್ ಗೆ ಎಂಟ್ರಿ ಆಗಿದ್ದರು. ಲೈಗರ್ ಸಿನಿಮಾ ಒಂದು ಬಾಕ್ಸಿಂಗ್ ಕ್ರೀಡಾಧಾರಿತ ಸಿನಿಮಾ. ಈ ಚಿತ್ರದಲ್ಲಿ ಮಾಜಿ ಬಾಕ್ಸರ್ ಮೈಕ್ ಟೈಸನ್ ಕೂಡ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದರು‌. ವಿಜಯ್ ದೇವರಕೊಂಡ ಅವರಿಗೆ ನಾಯಕಿಯಾಗಿ ಬಾಲಿವುಡ್ ಸ್ಟಾರ್ ನಟಿ ಅನನ್ಯಾ ಪಾಂಡೆ ನಟಿಸಿದ್ದರು.

ದಕ್ಷಿಣ ಭಾರತದ ಮೋಹಕ ತಾರೆ ನಟಿ ರಮ್ಯಾ ಕೃಷ್ಣ ಅವರು ಇದರಲ್ಲಿ ವಿಜಯ್ ದೇವರಕೊಂಡ ಅವರ ತಾಯಿ ಪಾತ್ರದಲ್ಲಿ ನಟಿಸಿದ್ದರು‌. ಜಸ್ಟ್ ಟ್ರೇಲರ್ ನಿಂದಾನೇ ಈ ಲೈಗರ್ ಸಿನಿಮಾ ರಿಲೀಸ್ ಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು. ಬರೋಬ್ಬರಿ ನೂರು ಕೋಟಿ ಬಜೆಟ್ ನಲ್ಲಿ ತಯಾರಾದ ಲೈಗರ್ ಸಿನಿಮಾಗೆ ಪುರಿ ಜಗನ್ನಾಥ್ ಅವರ ಜೊತೆಗೆ ನಟಿ ಚಾರ್ಮಿ ಕೌರ್ ಬಂಡವಾಳ ಹೂಡಿಕೆ ಮಾಡಿದ್ದರು. ಆದರೆ ಲೈಗರ್ ಸಿನಿಮಾ ಬಿಡುಗಡೆಯಾದ ಮೊದಲ ದಿನ ಬರೋಬ್ಬರಿ 33 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸೌಂಡ್ ಮಾಡೋ ಮುನ್ಸೂಚನೆ ನೀಡಿತು. ಆದರೆ ಸಿನಿಮಾ ನೋಡಿ ಹೊರ ಬಂದ ಪ್ರೇಕ್ಷಕರು ಲೈಗರ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಹಾಗಾಗಿ ಲೈಗರ್ ಸಿನಿಮಾ ಎರಡನೇ ದಿನ ಕೇವಲ 15-16 ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಸುಸ್ತಾಯಿತು.

ಒಟ್ಟಾರೆಯಾಗಿ ಅಪಾರ ನಿರೀಕ್ಷೆ ಹುಟ್ಟು ಹಾಕಿದ್ದ ಲೈಗರ್ ಸಿನಿಮಾ ಪ್ಲಾಫ್ ಆಗಿದ್ದೇ ತಡ ಇತ್ತ ನಟ ವಿಜಯ್ ದೇವರಕೊಂಡ ಅವರು ಕೂಡ ತಮ್ಮ ಸಂಭಾವನೆಯನ್ನ ನಿರ್ಮಾಪಕರಿಗೆ ಮರಳಿ ವಾಪಸ್ ನೀಡಿದ್ದಾರಂತೆ. ಇದರ ಬೆನ್ನಲ್ಲೇ ಲೈಗರ್ ಚಿತ್ರದ ಭಾಗವಾಗಿದ್ದ ನಟಿ ಚಾರ್ಮಿ ಕೌರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚಿಲ್ ಗಯ್ಸ್! ಸೋಶಿಯಲ್ ಮೀಡಿಯಾದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುವುದರಿಂದ ಪುರಿ ಕನೆಕ್ಟ್ಸ್ ಮತ್ತೆ ಪುಟಿದೇಳುತ್ತದೆ. ದೊಡ್ಡ ಮತ್ತು ಉತ್ತಮವಾಗಿ. ಅಲ್ಲಿವರ್ಗೆ ಬದುಕಿ ಮತ್ತು ಇತರರನ್ನ ಬದುಕಲು ಬಿಡಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನಟಿ, ನಿರ್ಮಾಪಕಿ ಚಾರ್ಮಿ ಅವರ ಈ ಪೋಸ್ಟ್ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.

Leave a Reply

%d bloggers like this: