ವಿದೇಶದಲ್ಲಿ 10 ಸಾವಿರ ಕೋಟಿ ಆಸ್ತಿ ಮೌಲ್ಯ ಹೊಂದಿರುವ ಏಕೈಕ ಕನ್ನಡದ ನಟಿ ಇವರೇ ನೋಡಿ

ಕನ್ನಡ ಚಿತ್ರರಂಗದ ತೊಂಭತ್ತರ ದಶಕದ ಸುಪ್ರಸಿದ್ದ ನಟಿ ಇಂದು ಬರೋಬ್ಬರಿ ಹತ್ತು ಸಾವಿರ ಕೋಟಿ ಒಡತಿ..! ಸಾಮಾನ್ಯವಾಗಿ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಅನೇಕ ನಟ-ನಟಿಯರು ಇಂದು ಹೇಳಿಕೊಳ್ಳಲಾಗದಂತಹ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ.ಕೆಲವರು ಆರ್ಥಿಕವಾಗಿ ತೀರಾ ದು:ಸ್ಥಿತಿಯಲ್ಲಿರುತ್ತಾರೆ.ಇನ್ನೂ ಕೆಲವರು ತಮ್ಮ ನಿಯೋಜಿತ ಉದ್ದೇಶ ಸ್ಪಷ್ಟ ಯೋಜನೆ,ಸರಳ ಜೀವನದೊಂದಿಗೆ ತಮ್ಮ ಜನಪ್ರಿಯತೆ ಉತ್ತುಂಗದ ದಿನಗಳಲ್ಲಿ ಯಾವುದೇ ರೀತಿಯಾಗಿ ಎಡವದೆ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂತಹ ಕಲಾವಿದರಲ್ಲಿ ನಟಿ ಮಾಧವಿ ಕೂಡ ಒಬ್ಬರು.ನಟಿ ಮಾಧವಿ ಕನ್ನಡ ಮಾತ್ರ ಅಲ್ಲದೆ ತೆಲುಗು,ತಮಿಳು,ಮಲೆಯಾಳಂ ಹೀಗೆ ಪಂಚಭಾಷಾ ತಾರೆಯಾಗಿ ಮಿಂಚಿದವರು.ಮದುವೆಯಾದ ನಂತರ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿರುವ ಮಾಧವಿ ಅವರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಸುಂದರ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ.ಅಷ್ಟೇ ಅಲ್ಲದೆ ಅತ್ಯುತ್ತಮ ಉದ್ಯಮಿಯಾಗಿ ಕೂಡ ಯಶಸ್ವಿಯಾಗಿದ್ದಾರೆ.

ನಟಿ ಮಾಧವಿ ಅವರು ದಕ್ಷಿಣ ಭಾರತದ ಸ್ಟಾರ್ ನಟರೊಂದಿಗೆ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು.ಆ ಸಮಯದಲ್ಲಿ ಸಿನಿಮಾವೊಂದಕ್ಕೆ ಮಾಧವಿ ಅವರು ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿದ್ದರು.ಯಾವ ಹೀರೋಗೂ ಕೂಡ ಕಡಿಮೆ ಇಲ್ಲದಂತೆ ಸಂಭಾವನೆ ಪಡೆಯುತ್ತಿದ್ದರು.ಕನ್ನಡದಲ್ಲಿ ಡಾ.ರಾಜ್ ಕುಮಾರ್,ವಿಷ್ಣು ವರ್ಧನ್,ಅಂಬರೀಶ್ ಅಂತಹ ದಿಗ್ಗಜ ನಟರೊಂದಿಗೆ ನಟಿ ಮಾಧವಿ ಅಭಿನಯಿಸಿದ್ದಾರೆ. ಬಣ್ಣದ ಲೋಕದಲ್ಲಿ ನಕ್ಷತ್ರ ತಾರೆಯಾಗಿ ಯಶಸ್ಸು ಕಂಡ ಮಾಧವಿ ಉದ್ಯಮಿ ರಾಘವ ಶರ್ಮಾ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು. ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟ ಮಾಧವಿ ತಮ್ಮ ಬಾಳ ಸಂಗಾತಿ ರಾಘವ ಶರ್ಮಾ ಅವರೊಟ್ಟಿಗೆ ಅಮೇರಿಕಾಗೆ ತೆರಳುತ್ತಾರೆ. ಬಳಿಕ ಸಿನಿಮಾ ಲೋಕದಿಂದ ದೂರ ಉಳಿದ ಮಾಧವಿ ತಮ್ಮ ಪತಿ ರಾಘವ ಶರ್ಮಾ ಅವರ ಉದ್ಯಮವನ್ನು ನೋಡಿಕೊಳ್ಳುತ್ತಾರೆ.

ಇನ್ನು ಮೂವರು ಮುದ್ದು ಹೆಣ್ಣು ಮಕ್ಕಳ ತಾಯಿಯಾಗಿರುವ ಮಾಧವಿ ತಮ್ಮಂತೆಯೇ ತಮ್ಮ ಮಕ್ಕಳಿಗೂ ಕೂಡ ಭರತನಾಟ್ಯ, ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ನಟಿ ಮಾಧವಿ ಅವರ ಪತಿ ರಾಘವ್ ಶರ್ಮಾ ಅವರು ಸಾವಿರಾರು ಕೋಟಿ ವಹಿವಾಟು ನಡೆಸುವ ಫಾರ್ಮಸಿಟಿಕಲ್ ಉದ್ಯಮವನ್ನು ನಡೆಸುತ್ತಾರೆ.ಈ ಬೃಹತ್ ಉದ್ಯಮವನ್ನ ತಮ್ಮ ಪತಿಯೊಬ್ಬರೇ ನಿರ್ವಹಿಸಲು ಕಷ್ಟ ಸಾಧ್ಯವೆಂದು ಅರಿತ ಮಾಧವಿ ತಮ್ಮ ಪತಿಯ ಜೊತೆಗೆ ತಾವೂ ಕೂಡ ಉದ್ಯಮ ನಿರ್ವಹಣೆಯಲ್ಲಿ ತೊಡಗಿಕೊಳ್ಳುತ್ತಾರೆ.ಸದ್ಯಕ್ಕೆ ಈ ಫಾರ್ಮಸಿಟಿಕಲ್ ಕಂಪನಿಯ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಟಿ ಮಾಧವಿ ಅಂತರಾಷ್ಟ್ರೀಯ ವ್ಯವಹಾರಗಳಿಗೆ ವಿಮಾನವನ್ನು ಬಳಸುತ್ತಾರೆ.ಹೀಗೆ ಐಷಾರಾಮಿ ಜೀವನ ನಡೆಸುತ್ತಿರುವ ನಟಿ ಮಾಧವಿ ಅವರು ಬರೋಬ್ಬರಿ ಹತ್ತು ಸಾವಿರ ಕೋಟಿ ಒಡತಿಯಾಗಿದ್ದಾರೆ.