ವಿದೇಶದಿಂದ ಅಪ್ಪು ಮಗಳು ಧೃತಿ ವಾಪಸ್ಸು, ಬಾಯ್ಬಿಟ್ಟ ಅಸಲಿ ಸತ್ಯ

ಚಂದನವನದ ಧೃವತಾರೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಮೂರನೇ ತಿಂಗಳು ಸಮೀಪವಾಗುತ್ತಿದೆ. ಆದರೂ ಕೂಡ ಪುನೀತ್ ರಾಜ್ ಕುಮಾರ್ ನಮ್ಮೊಂದಿಗಿಲ್ಲ ಎಂಬ ಕಹಿ ಸತ್ಯವನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಟ ಪುನೀತ್ ರಾಜ್ ಕುಮಾರ್ ಅವರ ಹೊಸದೊಂದು ಸಿನಿಮಾ ಸಟ್ಟೇರಿತು ಅಂದರೆ ಸರಿ ಸುಮಾರು ಸಾವಿರ ಜನರಿಗೆ ಉದ್ಯೋಗ ಸಿಗುತಿತ್ತು. ಇದೀಗ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅಪಾರ ನಷ್ಟವನ್ನು ಅನುಭವಿಸುವಂತಾಗಿದೆ. ಅಪ್ಪು ಅವರು ಕೇವಲ ಸಿನಿಮಾ ನಟನಾಗಿರದೇ ಉದ್ಯಮಿಯಾಗಿಯೂ ಕೂಡ ತೊಡಗಿಸಿಕೊಂಡಿದ್ದರು. ಸಿನಿಮಾವೊಂದಕ್ಕೆ ಐದರಿಂದ ಆರು ಕೋಟಿ ಸಂಭಾವನೆ ಪಡೆಯುತ್ತಿದ್ದ ಅಪ್ಪು,ಇತರೆ ಆದಾಯದ ಮೂಲಗಳನ್ನ ಹೊಂದಿದ್ದರು. ಅವರ ಸಂಪಾದನೆಗೆ ತಕ್ಕ ಹಾಗೆ ಸಾಮಾಜಿಕ ಕಾರ್ಯಗಳಿಗೂ ಕೂಡ ಕೋಟ್ಯಾಂತರ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ತಮ್ಮ ಆದಾಯದ ಒಂದಷ್ಟು ಭಾಗವನ್ನು ಸಮಾಜ ಸೇವೆಗೆ ಅಂತಾನೇ ಮೀಸಲಿಟ್ಟಿದ್ದರು.

ಅದರಂತೇ ಅಪ್ಪು ಅವರು ಯಾರಿಗೂ ತಿಳಿಯದಂತೆ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದರು. ಅದು ಎಷ್ಟರ ಮಟ್ಟಿಗೆ ಗೌಪ್ಯವಾಗಿ ಸಹಾಯ ಮಾಡುತ್ತಿದ್ದರು ಅಂದರೆ ಅವರ ಕುಟುಂಬದ ಸದಸ್ಯರಿಗೂ ಕೂಡ ತಮ್ಮ ಸಹಾಯ ಗೊತ್ತಾಗದೇ ಹಾಗೆ ನಿಭಾಯಿಸಿಕೊಂಡು ಬಂದಿದ್ದರು. ಅವರ ನಿಧನದ ಬಳಿಕ ಅಪ್ಪು ಮಾಡಿದ ಸಹಾಯ, ಸಾಮಾಜಿಕ ಸೇವೆಗಳು ಒಂದೊಂದಾಗಿ ಸಾಗರದ ಅಲೆಗಳಂತೆ ತೇಲಿ ತೇಲಿ ಬಂದವು. ಶರಣರ ಗುಣ ಮರಣದಲ್ಲಿ ಅನ್ನುವ ಹಾಗೇ ಅಪ್ಪು ಅವರು ಮಾಡಿದಂತಹ ಅಷ್ಟೂ ಮಾನವೀಯ ಕಾರ್ಯಗಳು ತಿಳಿದು ದೇಶ ದೇಶವೇ ಕಣ್ಣೀರಾಕಿತ್ತು.

ಕರ್ನಾಟಕದಲ್ಲಂತೂ ಅವರ ಹೆಸರಿನಲ್ಲಿ ನೇತ್ರದಾನ ಅಭಿಯಾನ, ಅನ್ನ ಸಂತರ್ಪಣೆ ಕಾರ್ಯಗಳು ಬೀದಿ ಬೀದಿಗಳಲ್ಲಿ ನಡೆದು ಪ್ರತಿಯೊಂದು ಗಲ್ಲಿಯಲ್ಲಿಯೂ ಅವರ ಫೋಟೋ ಹಾಕಿ ಆರಾಧನೆ ನಡೆಸಲಾಯಿತು. ಸಮಾಜದೊಟ್ಟಿಗೆ ಇಟ್ಟುಕೊಂಡಿರುವಂತಹ ಕಾಳಜಿ ಭಾಂಧವ್ಯವನ್ನು ತಮ್ಮ ಕುಟುಂಬದ ಮೇಲೆ ಅದಕ್ಕಿಂತ ದುಪ್ಪಟಾಗಿಯೇ ಇರಿಸಿಕೊಂಡಿದ್ದರು. ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿದ್ದ ಪುನೀತ್ ರಾಜ್ ಕುಮಾರ್ ಅವರು ತಮ್ಮ ಮಕ್ಕಳನ್ನ ತಮ್ಮಂತೆಯೇ ಸರಳವಾಗಿ ಬೆಳೆಸುತ್ತಿದ್ದರು. ಅಂತೆಯೇ ಅವರಿಬ್ಬರ ಹೆಣ್ಣು ಮಕ್ಕಳು ಸಹ ತಂದೆಯ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದರು.

ಅದರಲ್ಲಿಯೂ ದೊಡ್ಡ ಮಗಳು ಧೃತಿ ಉತ್ತಮವಾಗಿ ಓದಿ ಅಮೇರಿಕಾದಲ್ಲಿ ಪ್ರಸಿದ್ದ ಯೂನಿವರ್ಸಿಟಿಯೊಂದರಲ್ಲಿ ಸೀಟು ಪಡೆದು ವಿಧ್ಯಾಭ್ಯಾಸ ನಡೆಸುತ್ತಿದ್ದಾರೆ. ತನ್ನ ತಂದೆಯ ಅಗಲಿಕೆಯ ಸುದ್ದಿ ಕೇಳಿ ಆಘಾತಕ್ಕೊಳಗಾದ ಧೃತಿ ವಿದೇಶದಿಂದ ಆಗಮಿಸಿ ಕಣ್ಣೀರಾಗಿದ್ದು ಇನ್ನು ಕೂಡ ಅವರಿಗೆ ಮತ್ತು ಅವರ ಕುಟುಂಬದವರಿಗೆ ಇನ್ನು ಮಾಸಿಲ್ಲ. ತನ್ನ ತಂದೆಯ ನಿಧನದ ಬಳಿಕ ಮತ್ತೇ ಅಮೆರಿಕಾಗೆ ಹೋಗಲು ಮನಸ್ಸಿಲ್ಲದ ಧೃತಿ ಅವರನ್ನ ಶಿವಣ್ಣ,ರಾಘಣ್ಣ ಕುಟುಂಬದವರು ಮನವೊಲಿಸಿ ತಂದೆ ಪುನೀತ್ ಕಂಡ ಕನಸನ್ನು ನನಸು ಮಾಡಲು ನೀನು ಅಮೆರಿಕಾದಲ್ಲಿ ಓದಿ ತಂದೆಯಂತೆ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ತಿಳಿ ಹೇಳಿದರು. ತನ್ನ ತಂದೆಯ ಎಲ್ಲಾ ವಿಧಿ ವಿಧಾನ ಕಾರ್ಯಗಳನ್ನು ಪೂರೈಸಿದ ಧೃತಿ ಈಗ ಅಮೆರಿಕಾದಲ್ಲಿ ನೆಲೆಸಿ ಅಧ್ಯಾಯನ ನಡೆಸುತ್ತಿದ್ದಾರೆ.

ಆದರೆ ತನ್ನ ಪ್ರೀತಿಯ ಅಪ್ಪನ ನೆನೆದು ಇಂದಿಗೂ ಕೂಡ ಧೃತಿ ಅವರು ಕಣ್ಣೀರಾಕುತ್ತಿದ್ದಾರಂತೆ. ದಿನ ನಿತ್ಯ ಫೋನ್ ಮಾಡಿ ಕುಶಲೋಪರಿ ಕ್ಷೇಮ ವಿಚಾರಿಸಿಕೊಳ್ಳುವ ತಾಯಿ ಅಶ್ವಿನಿ ಅವರು ಧೈರ್ಯ ತುಂಬಿ ಸಮಾಧಾನ ಮಾಡುತ್ತಿದ್ದಾರಂತೆ. ಒಟ್ಟಾರೆಯಾಗಿ ಅಪ್ಪು ಅವರನ್ನ ನೇರವಾಗಿ ನೋಡದೇ ಮಾತಾಡದೇ ಕೇವಲ ಪರದೆಯಲ್ಲಿ ನೋಡಿ ಅವರನ್ನ ಇಷ್ಟು ಪ್ರೀತಿಸುವ ಜನ ಸಾಮಾನ್ಯರಿಗೇನೇ ಅವರ ಅಗಲಿಕೆ ಇಷ್ಟು ಕಾಡಿ ನೋವು ನೀಡಬೇಕಾದರೆ ಇನ್ನು ಅವರ ಕುಟುಂಬದವರ ನೋವು ಎಷ್ಟರ ಮಟ್ಟಿಗೆ ಇರಬೇಡ.

Leave a Reply

%d bloggers like this: