ವಿದೇಶದಲ್ಲಿ ಡಿಬಾಸ್ ಅವರ ಹೊಸ ಚಿತ್ರದ ಶೂಟಿಂಗ್ ಜೋರು, ಈ ಚಿತ್ರ ದಾಖಲೆ ಮಾಡುವುದರಲ್ಲಿ ಸಂದೇಹವೇ ಇಲ್ಲ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಡಿಬಾಸ್ ದರ್ಶನ್ ಅವರು ಇತ್ತೀಚೆಗೆ ಸಖತ್ ಸುದ್ದಿ ಅಲ್ಲಿದ್ದಾರೆ‌. ಸುದ್ದಿಯಲ್ಲಿದ್ದಾರೆ ಅಂದ ಮಾತ್ರಕ್ಕೆ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ‌. ಆದರೆ ಅವರು ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಹೋದರು ಕೂಡ ಸಾವಿರಾರು ಅಭಿಮಾನಿಗಳು ಅವರನ್ನ ಸುತ್ತುವರೆದು ಜೈಕಾರ ಹಾಕುವ ದೃಶ್ಯ ಸನ್ನಿವೇಶಗಳು ಆಗಾಗ ಕಂಡು ಬರುತ್ತಿವೆ. ಡಿ ಬಾಸ್ ದರ್ಶನ್ ಅವರ ಕ್ರೇಜ಼್ ಅದ್ಯಾವ ಮಟ್ಟಿಗೆ ಇದೆ ಅಂದರೆ ಸೋಶಿಯಲ್ ಮೀಡಿಯಾ ಪೂರಾ ಡಿ ಬಾಸ್ ಫ್ಯಾನ್ಸ್ ಕ್ರೇಜ಼್ ಸಖತ್ತಾಗಿಯೇ ಇದೆ. ಇದೀಗ ದರ್ಶನ್ ಅವರ ವೀಡಿಯೋವೊಂದು ವೈರಲ್ ಆಗಿದೆ. ಅದೂ ಕೂಡ ಕ್ರಾಂತಿ ಸಿನಿಮಾದ ಚಿತ್ರೀಕರಣದ ದೃಶ್ಯದ ತುಣುಕು ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಈ ವೀಡಿಯೋದಲ್ಲಿ ಕ್ರಾಂತಿ ಚಿತ್ರದಲ್ಲಿ ಎನ್.ಆರ್.ಐ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಗೊತ್ತೇ ಇದೆ. ಆದ ಕಾರಣ ದರ್ಶನ್ ನೀಲಿ ಬಣ್ಣದ ಚಾರ್ಟರ್ ಫ್ಲೈಟ್ ನಿಂದ ಸೂಟು ಬೂಟು ಧರಿಸಿ ಇಳಿದು ಬರುತ್ತಿರೋ ದೃಶ್ಯವನ್ನ ಸೆರೆ ಹಿಡಿಯಲಾಗುತ್ತಿದೆ. ಈ ಚಿತ್ರೀಕರಣ ಪೋಲೆಂಡ್ ನಲ್ಲಿ ನಡೆಯುತ್ತಿದೆ. ಇದನ್ನ ಚಿತ್ರತಂಡವೇ ರಿಲೀಸ್ ಮಾಡಿದ್ಯೋ ಅಥವಾ ಯಾರೋ ಬೇರೆ ವ್ಯಕ್ತಿಗಳು ಇದನ್ನ ವೀಡಿಯೋ ಮಾಡಿ ಹರಿ ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಕ್ರಾಂತಿ ಸಿನಿಮಾದ ಈ ಒಂದು ವೀಡಿಯೋ ಸಖತ್ ವೈರಲ್ ಆಗಿದೆ. ಇನ್ನು ಕ್ರಾಂತಿ ಸಿನಿಮಾವನ್ನ ಈ ಹಿಂದೆ ಯಜಮಾನ ಸಿನಿಮಾ ಮಾಡಿದ ತಂಡವೇ ಮತ್ತೊಮ್ಮೆ ಜೊತೆಗೂಡಿ ಮಾಡುತ್ತಿದ್ದಾರೆ.

ಬಿ.ಸುರೇಶ, ಶೈಲಜಾ ನಾಗ್ ಅವರು ನಿರ್ಮಾಣ, ವಿ.ಹರಿ ಕೃಷ್ಣ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಕ್ರಾಂತಿ ಸಿನಿಮಾ ದರ್ಶನ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದಾರೆ. ಬುಲ್ ಬುಲ್, ಜಗ್ಗುದಾದ, ಅಂಬರೀಷ ಸಿನಿಮಾದ ನಂತರ ರಚ್ಚು ದಚ್ಚು ಜೊತೆ ತೆರೆ ಹಂಚಿಕೊಳ್ತಿದ್ದಾರೆ. ಹಾಗಾಗಿ ಅಭಿಮಾನಿಗಳು ಕೂಡ ಕ್ರಾಂತಿ ಸಿನಿಮಾದಲ್ಲಿ ಇವರಿಬ್ಬರ ಜೋಡಿಯನ್ನ ಕಣ್ತುಂಬಿಕೊಳ್ಳಲು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಕ್ರಾಂತಿ ಚಿತ್ರ ಅಂತಿಮ ಹಂತದ ಚಿತ್ರೀಕರಣದಲ್ಲಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಕ್ರಾಂತಿ ಸಿನಿಮಾ ಥಿಯೇಟರ್ ಅಂಗಳಕ್ಕೆ ಬರಲಿದೆ ಎಂದು ಹೇಳಲಾಗ್ತಿದೆ.

Leave a Reply

%d bloggers like this: