ವಿಚಿತ್ರ ಬಟ್ಟೆ ತೊಟ್ಟು ಕಾಣಿಸಿಕೊಂಡ ನಟಿ ತಮನ್ನಾ ಅವರು, ಈ ಬಟ್ಟೆಯ ಬೆಲೆ ಎಷ್ಟು ಗೊತ್ತೇ

ಸೌತ್ ಸಿನಿ ದುನಿಯಾದ ಮಿಲ್ಕ್ ಬ್ಯೂಟಿ ತಮನ್ನಾ ಹೊಸ ಅವತಾರ ಕಂಡು ಚಿತ್ರ ಪ್ರೇಮಿಗಳು ಮತ್ತು ಅವರ ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ. ನಟಿ ತಮನ್ನಾ ಭಾಟಿಯಾ ಅವರ ಹಾಲ್ಗೆನ್ನೆ ಚೆಲುವನ್ನ ಕಂಡರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅವರ ನಟನೆಯ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅದರಲ್ಲಿಯೂ ಬಾಹುಬಲಿ ಸಿನಿಮಾದಲ್ಲಿ ಅವರ ಸೌಂದರ್ಯ ಮೈಮಾಟಕ್ಕೆ ಮನಸೋಲದವರು ಯಾರಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರೋ ನಟಿ ತಮನ್ನಾ ಆಗಾಗ ತಮ್ಮ ಒಂದಷ್ಟು ‌‌‌‌‌‌ಫೋಟೋಗಳನ್ನ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳೊಟ್ಟಿಗೆ ಕನೆಕ್ಟ್ ಆಗಿರ್ತಾರೆ. ಅದ್ರಂತೆ ಇದೀಗ ವಿಭಿನ್ನ ಡ್ರೆಸ್ ಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋ ಸದ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಒಂದಷ್ಟು ಇಂಗ್ಲೀಷ್ ಟೈಟಲ್ ಹೊಂದಿರೋ ನೀಲಿ ಬಣ್ಣದ ಬಿಗಿಯಾದ ಉಡುಪು ಧರಿಸಿ ಬಗೆ ಬಗೆಯ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಅವರ ಅಭಿಮಾನಿಗಳು ಫಿಧಾ ಆಗಿದ್ದಾರೆ. ಅಷ್ಟೇ ಅಲ್ಲದೆ ಅವರ ಫೀಮೆಲ್ ಫ್ಯಾನ್ಸ್ ನಿಮ್ಮ ಸೌಂದರ್ಯದ ಗುಟ್ಟೇನು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಐವತ್ತಕ್ಕೂ ಅಧಿಕ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗೆ ಕೆಲವು ತಿಂಗಳುಗಳಿಂದೆ ರಿಲೀಸ್ ಆದ ವರುಣ್ ತೇಜ್ ಅವರ ಗಣಿ ಸಿನಿಮಾದಲ್ಲಿ ವಿಶೇಷ ಹಾಡೊಂದಕ್ಕೆ ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದರು.

ಅದಲ್ಲದೆ ವಿಕ್ಟರಿ ವೆಂಕಟೇಶ್ ಅವರ ಎಫ್3 ಸಿನಿಮಾದಲ್ಲಿ ಕೂಡ ತಮನ್ನಾ ಭಾಟಿಯಾ ನಟಿಸಿದ್ದರು. ಸದ್ಯಕ್ಕೆ ತಮನ್ನಾ ಭಾಟಿಯಾ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ಭೋಲಾ ಶಂಕರ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು ಸೌತ್ ಸಿನಿ ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿರೋ ತಮನ್ನಾ ಅವರು ಮುಂಬೈನ ಪ್ರತಿಷ್ಟಿತ ಏರಿಯಾ ಜುಹುನಲ್ಲಿ ಸರಿ ಸುಮಾರು 80,778 ಚದರಡಿವುಳ್ಳ ಮನೆಯೊಂದನ್ನ ಖರೀದಿ ಮಾಡಿದ್ದಾರೆ. ಅದರ ಬೆಲೆ ಬರೋಬ್ಬರಿ 16.60 ಕೋಟಿ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ತಮನ್ನಾ ಭಾಟಿಯಾ ಅವರು ಮೂಲಗಳ ಪ್ರಕಾರ ಸರಿ ಸುಮಾರು ನಲವತ್ತೆಂಟು ಸಾವಿರ ರೂಪಾಯಿ ಬೆಲೆಯ ಉಡುಗೆ ತೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ತಮನ್ನಾ ಭಾಟಿಯಾ ಅವರು ಸೌತ್ ಸಿನಿಮಾ ರಂಗದ ಬಹು ಬೇಡಿಕೆಯ ನಟಿಯರ ಪೈಕಿ ಮೊದಲ ಪಂಕ್ತಿಯಲ್ಲಿದ್ದಾರೆ.

Leave a Reply

%d bloggers like this: