ವಿಭಿನ್ನ ಮಾತುಗಳ ಮೂಲಕ ಗಮನ ಸೆಳೆದಿರುವ ಈ 19 ವರ್ಷದ ಹುಡುಗ ‘ನವಾಜ್’ ಯಾರು ಗೊತ್ತಾ

ಬಿಗ್ ಬಾಸ್ ರಿಯಾಲಿಟಿ ಶೋ ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ, ಈ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾರ್ಯಕ್ರಮಕ್ಕೆ ಹೋಗಬೇಕು ಎನ್ನೋದು ಅನೇಕರ ಡ್ರೀಮ್. ಆದರೆ ಬಿಗ್ ಬಾಸ್ ಗೆ ಹೋಗೋದಕ್ಕೆ ಎಲ್ಲಾರಿಗೂ ಅವಕಾಶ ಸಿಕ್ಕೋದಿಲ್ಲ. ಕೆಲವರಿಗೆ ಅದೃಷ್ಟ ಎಂಬಂತೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲು ಅವಕಾಶ ಸಿಗುತ್ತದೆ. ಅಂತಹವರ ಸಾಲಿಗೆ ಇದೀಗ ನವಾಜ್ ಕೂಡ ಸೇರ್ಪಡೆ ಆಗಿದ್ದಾರೆ. ಯಾರಿದು ನವಾಜ್ ಅಂತೀರಾ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರೀಯರಾಗಿರೋ ಕನ್ನಡ ಸಿನಿಮಾಗಳ ಬಗ್ಗೆ ಆಸಕ್ತಿ ಇರೋರಿಗೆ ಈ ನವಾಜ್ ಯಾರು ಅನ್ನೋದು ಗೊತ್ತೇ ಇರುತ್ತೆ. ಯಾಕಂದ್ರೆ ಈ 19ವರ್ಷದ ನವಾಜ್ ಅನ್ನೋ ಹುಡ್ಗ ವೈರಲ್ ಆಗಿದ್ದೇ ಕನ್ನಡ ಸಿನಿಮಾ ರಿವ್ಯೂ ಮಾಡೋ ಮೂಲಕ.

ಅದೂ ಕೂಡ ವಿಭಿನ್ನವಾಗಿ ಪ್ರಾಸ ಪದಗಳನ್ನ ಬಳಸಿ ಸಿನಿಮಾ ನೋಡಿ ತನ್ನದೇಯಾದ ವಿಚಿತ್ರ ಶೈಲಿಯಲ್ಲಿ ಜೋರಾಗಿ ಕಿರುಚಿ ವಿಭಿನ್ನ ಮ್ಯಾನರಿಸಂ ಮೂಲಕ ವಿಮರ್ಶೆ ಮಾಡಿ ಪ್ರೇಕ್ಷಕರಿಗೆ ಸಿನಿಮಾ ನೋಡೋ ಹಾಗೆ ಮಾಡ್ತಿದ್ರು ಈ ನವಾಜ್. ನವಾಜ್ ರಿವ್ಯೂ ಮಾಡೋಕ್ ಸ್ಟಾರ್ಟ್ ಮಾಡಿದ್ದೇ ಡಾಲಿ ಧನಂಜಯ್ ಅವರ ಬಡವ ರಾಸ್ಕಲ್ ಸಿನಿಮಾದ ಮೂಲಕ. ಬಡವ ರಾಸ್ಕಲ್ ಸಿನಿಮಾ ನೋಡಿ ಸಖತ್ ಪ್ರಾಸ ಪದಗಳ ಬಳಸಿ ರಿವ್ಯೂ ಮಾಡಿದ್ರು. ಇದು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಯ್ತೂ. ಇದರಿಂದ ಮುಂದುವರಿದ ರಿವ್ಯೂ ನವಾಜ್ ವರಸೆ ನಿರಂತರವಾಗಿ ಪ್ರತಿ ಶುಕ್ರವಾರ ರಿಲೀಸ್ ಆಗೋ ಎಲ್ಲಾ ಕನ್ನಡ ಸಿನಿಮಾಗಳನ್ನ ರಿವ್ಯೂ ಮಾಡೋ ಹಾಗೇ ಮಾಡ್ತು. ಇದರಿಂದ ನವಾಜ್ ರಿವ್ಯೂ ಕೊಟ್ರೆ ಜನ ಬಂದ್ ಸಿನಿಮಾ ನೋಡ್ತಾರೆ.

ಅನ್ನೋ ಮಟ್ಟಕ್ಕೆ ಜನಪ್ರಿಯತೆ ಪಡ್ಕೊಂಡ ನವಾಜ್ ಗೆ ಅದೃಷ್ಟ ಎಂಬಂತೆ ಇದೀಗ ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೇಶ ಪಡೆದಿದ್ದಾರೆ. ವೇದಿಕೆಗೆ ಎಂಟ್ರಿ ಕೊಟ್ಟ ನವಾಜ್ ಸುದೀಪ್ ಅವರ ಮುಂದೆ ನನಗೆ ಕಸ ಗುಡ್ಸೋಕೂ ಕೂಡ ಬರಲ್ಲ. ನಾನೊಬ್ಬ ಕಾಮಿಡಿಯನ್ ಆಗ್ಬೇಕು ಅಂತ ಕನಸಿದೆ. ನಾನೀಗ ಬಿಗ್ ಬಾಸ್ ವೇದಿಕೆಗೆ ಬಂದಿದ್ದೇನೆ ಅಂದ್ರೆ ಇದೇ ನನ್ನ ಗೆಲುವು. ಸುಮ್ನೆ ಜನಕ್ಕೆ ಸಿನಿಮಾ ನೋಡಿ ಅಂದ್ರೆ ಆಗಲ್ಲ. ಆಗ ನಾನೇ ಟೆಕ್ನಿಕ್ ಶುರು ಮಾಡಿ ಡೈಲಾಗ್ ಹೊಡ್ಯೋಕೆ ಶುರು ಮಾಡ್ದೆ. ನನ್ನಿಂದಾಗಿ ಒಂದಷ್ಟು ಜನ ಸಿನಿಮಾ ನೋಡೋಕ್ ಬರ್ತಾರೆ ಅಂದ್ರೆ ಖುಷಿ ಆಗುತ್ತೆ ಅಂತ ರಿವ್ಯೂ ನವಾಜ್ ಹೇಳಿದ್ದಾರೆ. ಸಿನಿಮಾಗಳನ್ನ ತನ್ನ ವಿಭಿನ್ನ ಮ್ಯಾನರಿಸಂ ಅಂಡ್ ಪ್ರಾಸ ಪದಗಳ ಮೂಲಕ ಸಖತ್ ಫೇಮಸ್ ಆಗಿದ್ದ ರಿವ್ಯೂ ನವಾಜ್ ದೊಡ್ಮನೆಯಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Reply

%d bloggers like this: