ಈಗ ವೇಶ್ಯೆಯರ ಜೀವನ ಹೇಗಾಗಿದೆ ನೋಡಿ, ವೇಶ್ಯೆ ಹೇಳಿಕೊಂಡ ನೋವು

ಜಗತ್ತಿಗೆ ಕಂಟಕವಾಗಿ ಕಾಡಿದ ಈ ಕೊರೋನ ವೈರಸ್ ಮನುಕುಲವನ್ನು ಹಿಂಡಿ ಹಿಪ್ಪೆ ಮಾಡಿದೆ.ಅದರಲ್ಲಿಯೂ ಬಡ-ಮಧ್ಯಮ ವರ್ಗದ ಜನರಿಗೆ ಎದುರಾದಂತಹ ಸಂಕಷ್ಟ ಅಷ್ಪಿಷ್ಟಲ್ಲ.ದೇಶಾದ್ಯಂತ ಗಣನೀಯವಾಗಿ ಏರಿಕೆ ಕಾಣುತ್ತಿದ್ದಂತಹ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಸರ್ಕಾರ ಮಾಡಿದ ನಿರಂತರ ಲಾಕ್ ಡೌನ್ ಒಂದೆಡೆ ಜನರ ಬದುಕನ್ನ ದಿಕ್ಕು ತೋಚದಂತೆ ಮಾಡಿದರೆ ಮತ್ತೊಂದೆಡೆ ಬಹಳಷ್ಟು ಕುಟುಂಬಗಳಲ್ಲಿ ಕೋವಿಡ್ ಗೆ ಒಳಗಾಗಿ ಮನೆಯಲ್ಲಿ ಮಕ್ಕಳು ಪೋಷಕರನ್ನ ಕಳೆದುಕೊಂಡರೆ,ಇನ್ನೊಂದೆಡೆ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡು ಶೋಕದ ಮಡುವಿನಲ್ಲಿ ನರಳಬೇಕಾಯಿತು.ಇದೊಂದು ರೀತಿಯ ಸಂಕಷ್ಟದ ಬದುಕಾದರೆ ಲಾಕ್ ಡೌನ್ ಪರಿಣಾಮ ದೇಶದ ಇಡೀ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ಥಬ್ದವಾಗಿ ಆರ್ಥಿಕ ವಹಿವಾಟುಗಳು ನಿಂತು ಹೋದವು.ಇದರಿಂದ ಸಾವಿರಾರು ಉದ್ಯಮಗಳು ನಷ್ಟಕ್ಕೆ ಒಳಗಾಗಿ ಮುಚ್ಚಿದವು.

ಇದರ ಪರಿಣಾಮ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಆರ್ಥಿಕ ಹೊಡೆತ ತಿಂದರು.ಇದು ಸಾಮಾನ್ಯ ಜನರ ಬದುಕು ಇಷ್ಟರ ಮಟ್ಟಿಗೆ ನಿಷ್ಟುರವಾಯಿತು.ಇದರ ಬಳಿಕ ನಿಧಾನವಾಗಿ ಕರುಣಾಜನಕ ಕಥೆಯಾಗಿ ಕರುಳು ಹಿಂಡುವ ಅಂತಹ ಸಂಗತಿಗಳು ಬೆಳಕಿಗೆ ಬಂದವು.ಅಂತಹವುದರಲ್ಲಿ ವೇಶ್ಯೆಯರ ಬದುಕು ಕೂಡ ಒಂದಾಗಿತ್ತು.ಕೆಲವು ಅನಿವಾರ್ಯ ಕಾರಣ ಅಥವಾ ಯಾರೋ ಮಾಡಿದ ತಪ್ಪಿನಿಂದಾಗಿ ತಾವು ಶಿಕ್ಷೆಗೆ ಒಳಗಾಗುವಂತೆ ಈ ಮಾಂಸದಂಧೆಗೆ ಸಿಲುಕಿಕೊಂಡಿರುವ ಈ ಹೆಣ್ಣು ಮಕ್ಕಳ ಸ್ಥಿತಿ ನಿಜಕ್ಕೂ ಕೂಡ ಹೇಳತೀರದು.ವೇಶ್ಯೆ ವೃತ್ತಿಯಲ್ಲಿರುವ ಒಂದಷ್ಟು ಮಹಿಳೆಯರು ಹೇಳುವ ಪ್ರಕಾರ ತಮ್ಮ ಬಾಳ ಸಂಗಾತಿಯಾಗಿ ಸಿಕ್ಕ ಪತಿಯರು ಸಾಂಸಾರಿಕ ಜೀವನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ,ಬೇಜವಾಬ್ದಾರಿತನದಿಂದ ವರ್ತಿಸಿ ಇಡೀ ಕುಟುಂಬದ ಹೊರೆ ತಮ್ಮ ಮೇಲೆ ಬಿದ್ದಾಗ ಕೆಲವು ಅನಿವಾರ್ಯ ಕಾರಣದಿಂದ ಈ ದಾರಿ ಹಿಡಿದಿದ್ದೇವೆ.

ನಮಗೆ ಇದನ್ನ ಹೊರತು ಪಡಿಸಿದರೆ ನಮ್ಮ ಬದುಕಿಗೆ ನೆರವಾಗುವಂತಹ ಆದಾಯ ಮತ್ತೊಂದಿಲ್ಲ.ಒಮ್ಮೆ ಈ ವೇಶ್ಯಾವಾಟಿಕೆಗೆ ಇಳಿದರೆ ಮತ್ತೆ ಬೇರೊಂದು ಕ್ಷೇತ್ರದಲ್ಲಿ ಉದ್ಯೋಗ ಮಾಡಿದರು ಕೂಡ ನಮ್ಮನ್ನ ಇತರೆ ವ್ಯಕ್ತಿಗಳು ಅಲ್ಲಿ ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ.ಹೀಗಿರುವಾಗ ಈ ಕೋವಿಡ್ ಸಂಧರ್ಭದಲ್ಲಿ ನಮ್ಮ ಪಾಡು ಅಷ್ಟಿಷ್ಟಲ್ಲ.ಮನೆಯಲ್ಲಿ ಮಕ್ಕಳು ನಮ್ಮನ್ನ ನಂಬಿಕೊಂಡು ಇರುತ್ತವೆ.ನಾವು ಮಾಡುತ್ತಿರುವ ಕೆಲಸದ ಬಗ್ಗೆ ನಮ್ಮ ಮಕ್ಕಳಿಗೆ,ಕುಟುಂಬದವರಿಗೆ ಅವರಿಗೆ ಯಾವುದೇ ರೀತಿಯ ಮಾಹಿತಿ ಇರುವುದಿಲ್ಲ.ಎಲ್ಲೋ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದಿದ್ದಾರೆ.

ಕೆಲಸ ಮಾಡದೇ ಹೋದರು ಕೂಡ ಲಾಕ್ಡೌನ್ ಇರುವ ಕಾರಣ ಸಂಬಳ ಬಂದೇ ಬರುತ್ತದೆ ಎಂಬ ಅಭಿಪ್ರಾಯ ಅವರದ್ದು.ಆದರೆ ನಿಜಾಂಶವೇ ಬೇರೆ. ನಮ್ಮ ಬಳಿ ಗಿರಾಕಿಗಳ ಬರದೇ ಹೋದರೇ ನಮ್ಮಗೆಲ್ಲಿ ಆದಾಯ.ಹಣ ವಿಲ್ಲದೆ ಬದುಕನ್ನ ಹೇಗೆ ಸಾಗಿಸೋದು.ಈ ಕೋವಿಡ್ ಲೌಕ್ಡೌನ್ ಸಂಧರ್ಭ ದಲ್ಲಿ ಹೊರಗೆ ಬರಬಾರದು ಎಂಬ ನಿಯಮ.ಹೀಗಿರುವಾಗ ಹೊರ ಹೋಗಿ ಸೆರಗಾಸಿ ಸಂಪಾದಿಸುವುದೆಲ್ಲಿ ಎಂದು ತಮ್ಮ ಕರುಣಾಜನಕ ಪರಿಸ್ಥಿತಿಗಳನ್ನ ಕೆಲವೊಂದು ಕಡೆ ಹಂಚಿಕೊಂಡಿದ್ದಾರೆ.ಇನ್ನು ಮಹಿಳಾ ಮತ್ತು ಬಾಲ ಕಲ್ಯಾಣ ಇಲಾಖೆಯ ಸಮೀಕ್ಷೆ ವರದಿಯ ಪ್ರಕಾರ ದೇಶಾದ್ಯಂತ ಸರಿ ಸುಮಾರು ಮೂವತ್ತು ಲಕ್ಷಕ್ಕೂ ಅಧಿಕ ವೇಶ್ಯೆಯರು ಇದ್ದು,ಅವರಲ್ಲಿ ಬಹುತೇಕರು ಯೌವ್ವನದ ಹುಡುಗಿಯರೇ ಹೆಚ್ಚು ಒಳಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಜೊತೆಗೆ ಮಾನವ ಹಕ್ಕು ಆಯೋಗದ ವರದಿಯ ಪ್ರಕಾರ ದೇಶದಲ್ಲಿ ಸರಿ ಸುಮಾರು ಎರಡು ಕೋಟಿಯಷ್ಟು ಮಹಿಳೆಯರು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.ಬಹಳಷ್ಟು ಮಂದಿ ಮಹಿಳೆಯರು ಸಾಂಸರಿಕ ಜೀವನದಲ್ಲಿದ್ದುಕೊಂಡೇ ಇದರಲ್ಲಿ ತೊಡಗಿರುವುದು ದುರಂತವೇ ಸರಿ.ಇದಕ್ಕೆ ಮುಖ್ಯವಾಗಿ ಕಾರಣ ಆಗಿರುವುದು ತನ್ನ ಜವಾಬ್ದಾರಿ ಇಲ್ಲದ ಪತಿ ಮತ್ತು ಅವರ ಮನೆಯ ಆರ್ಥಿಕ ಪರಿಸ್ಥಿತಿ ಎಂಬುದು ಇನ್ನೊಂದು ವರದಿಯಲ್ಲಿ ತಿಳಿಸಿದೆ

Leave a Reply

%d bloggers like this: