ವೇದಿಕೆ ಮೇಲೆ ಅಕ್ಷಯ್ ಕುಮಾರ್ ಜೊತೆ ಕುಣಿದ ದಕ್ಷಿಣ ಭಾರತದ ಖ್ಯಾತ ನಟಿ, ವಿಡಿಯೋ ವೈರಲ್

ದಕ್ಷಿಣ ಭಾರತೀಯ ಚಿತ್ರರಂಗದ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಸಮಂತಾ ಅವರು ತಮ್ಮ ದಾಂಪತ್ಯ ಜೀವನದಿಂದ ಹೊರ ಬರುವ ಮೂಲಕ ಭಾರಿ ಸುದ್ದಿಯಾದರು. ನಾಗ ಚೈತನ್ಯ ಅವರಿಂದ ವಿಚ್ಚೇದನ ಪಡೆದ ನಂತರ ನಟಿ ಸಮಂತಾ ಅವರು ಮತ್ತೆ ತಮ್ಮ ಸಿನಿ ಕೆರಿಯರ್ ನತ್ತ ಮುಖಮಾಡಿ ಸಿನಿಮಾಗಳಲ್ಲಿ ಸಕ್ರೀಯರಾಗಿ ತೊಡಗಿಕೊಂಡರು. ಇದರ ನಡುವೆಯೇ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಮೂವಿ ಪುಷ್ಪಾ ಚಿತ್ರದಲ್ಲಿ ಹ್ಞೂ ಅಂತೀಯಾ ಮಾವ ಹ್ಞೂ ಹ್ಞೂ ಅಂತೀಯಾ ಮಾವ ಎಂಬ ಹಾಡೊಂದರಲ್ಲಿ ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕಿದ ನಟಿ ಸಮಂತಾ ಅವರಿಗೆ ದಕ್ಷಿಣ ಭಾರತ ಮಾತ್ರ ಇಡೀ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಜನಪ್ರಿಯತೆ ಸೃಷ್ಟಿಯಾಗುತ್ತದೆ. ಈ ಹಾಡಿನಲ್ಲಿ ಬೋಲ್ಡ್ ಆಗಿ ಹೆಜ್ಜೆ ಹಾಕಿದ ನಂತರ ಸಮಂತಾ ಅವರಿಗೆ ಬಾಲಿವುಡ್ ನಲ್ಲಿ ಆಫರ್ ಹರಿದು ಬರುತ್ತದೆ.

ಸಿನಿಮಾ ಮಾತ್ರ ಅಲ್ಲದೆ ವೆಬ್ ಸೀರೀಸ್ ಗಳಲ್ಲಿಯೂ ಕೂಡ ಅವಕಾಶ ಸಿಗುತ್ತದೆ. ಇದರ ಜೊತೆಗೆ ನಟಿ ಸಮಂತಾ ಅವರು ಮತ್ತೆ ಯಶೋಧಾ ಎಂಬ ಪ್ಯಾನ್ ಇಂಡಿಯಾ ಸಿನಿಮಾದ ಸ್ಪೆಷಲ್ ಹಾಡೊಂದರಲ್ಲಿ ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕಲಿದ್ದಾರಂತೆ. ಬಾಲಿವುಡ್ ನಲ್ಲಿ ಸಮಂತಾ ಅವರಿಗೆ ಅವಕಾಶ ಹೆಚ್ಚಾಗುತ್ತಿದ್ದು, ದಿನೇಶ್ ಅವರ ವಿಷನ್ ಪ್ರೊಡಕ್ಷನ್ ಹೌಸ್ ನಡಿ ನಿರ್ಮಾಣ ಆಗುತ್ತಿರುವ ಹೊಸ ಚಿತ್ರವೊಂದರಲ್ಲಿ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಆಯುಷ್ಮಾನ್ ಖುರಾನಾ ಅವರು ನಟಿಸಲಿದ್ದಾರೆ. ಇದೆಲ್ಲದರ ನಡುವೆ ಸಮಂತಾ ಅವರು ಸುದ್ದಿಯಾಗಿರುವುದು ಯಾಕಪ್ಪಾ ಅಂದರೆ ಅಕ್ಷಯ್ ಕುಮಾರ್ ಅವರೊಟ್ಟಿಗೆ ಪುಷ್ಪ ಚಿತ್ರದ ಹ್ಞೂ ಅಂತೀಯಾ ಮಾವ ಹಾಡಿಗೆ ಸಖತ್ ಬೋಲ್ಡ್ ಹಾಕಿ ಹೆಜ್ಜೆ ಹಾಕಿರುವ ವೀಡಿಯೋ ವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಕಾಫಿ ವಿತ್ ಕರಣ್ ಜೋಹಾರ್ ಕಾರ್ಯಕ್ರಮದಲ್ಲಿ ಸಮಂತಾ ಮತ್ತು ಅಕ್ಷಯ್ ಕುಮಾರ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ರಿಯಾಲಿಟಿ ಶೋ ಪ್ರೋಮೋವೊಂದರಲ್ಲಿ ಸಮಂತಾ ಅವರು ಅಕ್ಷಯ್ ಕುಮಾರ್ ಅವರೊಟ್ಟಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಕರಣ್ ಜೋಹಾರ್ ನಿರೂಪಣೆ ಮಾಡುವ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರ ಅಲ್ಲದೆ ದಕ್ಷಿಣ ಭಾರತದ ಅನೇಕ ಮಂದಿ ಸ್ಟಾರ್ಸ್ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಆಡುವ ಕೆಲವು ಮಾತುಗಳು ಇಂಟ್ರೆಸ್ಟಿಂಗ್ ಆಗಿರುವುದರ ಜೊತೆಗೆ ಕಾಂಟ್ರವರ್ಸಿ ಮಾತುಗಳು ಕೂಡ ಸೇರಿರುತ್ತವೆ. ಹಾಗಾಗಿ ಈ ಬಾರಿ ಸಮಂತಾ ಅವರು ಅಕ್ಷರ್ ಕುಮಾರ್ ಜೊತೆಗೆ ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಯಾವೆಲ್ಲಾ ರೀತಿಯ ಇಂಟ್ರೆಸ್ಟಿಂಗ್ ಕಥೆಗಳು ಹೊರ ಬೀಳಲಿವೆ ಅನ್ನೋದು ಕುತೂಹಲ ಮೂಡಿಸಿದೆ.