ವರದಕ್ಷಿಣಿಯಾಗಿ ನಾಯಿ ಮತ್ತು ಎಮ್ಮೆಗಳನ್ನು ಕೇಳಿದ ವರ : ಜೈಲಿಗೆ ತಳ್ಳಿದ ಪೊಲೀಸರು

ಮದುವೆ ನಿಶ್ಚಯ ಮಾಡಿಕೊಂಡ ಯುವ ಜೋಡಿ.ತದ ನಂತರ ವರ ಕೇಳಿದ ವರದಕ್ಷಿಣೆ ಕೇಳಿ ದಂಗಾದ ವಧುವಿನ ಪೋಷಕರು. ವರದಕ್ಷಿಣೆ ಎಂಬುದು ಒಂದು ಸಾಮಾಜಿಕ ಪಿಡುಗು. ವರದಕ್ಷಣೆ ಕೊಡುವುದು ಮತ್ತು ಪಡೆದುಕೊಳ್ಳುವುದು ಎರಡೂ ಕೂಡ ಶಿಕ್ಷಾರ್ಹ ಅಪರಾಧ.ಇದರ ನಡುವೆ ವರದಕ್ಷಿಣೆ ಎಂಬುದು ಸಾರಾಸಗಟವಾಗಿ ನಡೆಯುತ್ತವೆ. ಇದು ವಧು ಮತ್ತು ವರ ಎರಡು ಕುಟುಂಬಗಳಿಗೂ ಸಹ ಸಮ್ಮತದಿಂದಲೇ ಒಪ್ಪಂದ ಮಾಡಿಕೊಂಡು ವ್ಯವಹರಿಸಿಕೊಳ್ಳುತ್ತವೆ.ವರದಕ್ಷಿಣೆಯ ವಿರುದ್ದ ಕಠಿಣ ಕಾನೂನು ಕ್ರಮ ಇದ್ದರು ಕೂಡ ಇದು ಸಹಜವಾಗಿಯೇ ನಡೆಯುತ್ತವೆ.ಆದರೆ ಕೆಲವೊಮ್ಮೆ ವರನ ಪೋಷಕರು ಇದನ್ನೇ ಉಪಯೋಗಿಸಿಕೊಂಡು ಎಗ್ಗಿಲ್ಲದೆ ಮನಬಂದಂತೆ ಹಣಕ್ಕೆ ಬೇಡಿಕೆ ಇಡುವುದನ್ನು ಶುರು ಮಾಡುತ್ತಾರೆ.

ಇದರಿಂದ ಹೆಣ್ಣಿನ ಕಡೆಯವರು ನಿಜಕ್ಕೂ ಕೂಡ ಮಾನಸಿಕ ಹಿಂಸೆಯ ಜೊತೆಗೆ ಆರ್ಥಿಕ ತೊಂದರೆಗೆ ಒಳಗಾಗುತ್ತಾರೆ. ಅಂತದ್ದೇ ಒಂದು ವರದಕ್ಷಿಣೆ ಕಿರುಕುಳ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.ವಿಚಿತ್ರ ಅಂದರೆ ವರ ಬೇಡಿಕೆ ಇಟ್ಟಿರುವುದು ಹಣ ಎಂಬುದಕ್ಕಿಂತ ಇಪ್ಪತ್ತೊಂದು ಆಮೆಗಳು,ಕಪ್ಪು ಬಣ್ಣದ ಲ್ಯಾಬ್ರಡಾರ್ ನಾಯಿಯನ್ನು.ವರನ ಈ ವಿಚಿತ್ರ ಬೇಡಿಕೆ ಕೇಳಿದ ವಧುವಿನ ಪೋಷಕರು ದಂಗಾಗಿದ್ದಾರೆ. ಕಳೆದ ಫೆಬ್ರವರಿ 10 ರಂದು ಮದುವೆ ನಿಶ್ಚಯ ಮಾಡಿಕೊಂಡಿದ್ದ ಯುವಕ ಈ ಸಂಧರ್ಭದಲ್ಲಿ ಎರಡು ಲಕ್ಷ ಹಣ ಮತ್ತು ಹತ್ತು ಗ್ರಾಂ ಚಿನ್ನವನ್ನು ಪಡೆದಿದ್ದಾನೆ.

ಒಪ್ಪಂದ ಆದ ನಂತರ ವರನ ಕುಟುಂಬದವರು ವಧುವಿನ ಪೋಷಕರ ಹತ್ತಿರ ಇಪ್ಪತ್ತೊಂದು ಆಮೆ, ಒಂದು ಕಪ್ಪು ಲ್ಯಾಬ್ರಡಾರ್ ನಾಯಿ ಜೊತೆಗೆ ಮತ್ತೆ ಹತ್ತು ಲಕ್ಷ ರೂ.ಗಳ ಹಣ ಬೇಡಿಕೆ ಇಟ್ಟಿದ್ದಾರೆ.ಇದರಿಂದ ಆತಂಕ ಮತ್ತು ಅಸಹಾಯಕರಾಗಿ ವಧುವಿನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಇದೀಗ ವರನ ಸದಸ್ಯರ ಮೇಲೆ ಪಿ.ಎಸ್. ಐ. ಆಗಿರುವ ಸಾಧ್ನಾ ಅವಾದ್ ಅವರು ವಿಚಾರಣೆ ನಡೆಸಿ ವರನ ಕುಟುಂಬದವರ ಮೇಲೆ ಐಪಿಸಿ ಸೆಕ್ಷನ್ 420,406,ಮತ್ತು 34 ನೇ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.

Leave a Reply

%d bloggers like this: