ವರ ಮಹಾಲಕ್ಷ್ಮಿ ಹಬ್ಬದ ಫೋಟೋಗಳನ್ನು ಹಂಚಿಕೊಂಡ ನಟಿ ರಾಧಿಕಾ ಯಶ್ ಅವರು

ಚಂದನವನದಲ್ಲಿ ಆದರ್ಶ ದಂಪತಿಗಳಂತೆ ಇರುವ ನಟಿ ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಇತ್ತೀಚೆಗೆ ತಾನೇ ಈ ತಾರಾ ಜೋಡಿ ವಿದೇಶ ಪ್ರವಾಸ ಕೈಗೊಂಡು ಅಲ್ಲಿನ ಒಂದಷ್ಪು ಪ್ರಸಿದ್ದ ಸ್ಥಳಗಳಿಗೆ ಭೇಟಿ ನೀಡಿ ಫೋಟೋಗೆ ಪೋಸ್ ಕೊಟ್ಟಿದ್ದರು. ಆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು. ಇನ್ನು ಯಶ್ ಕೂಡ ಕೆಜಿಎಫ್2 ಯಶಸ್ಸಿನ ನಂತರ ಶೂಟಿಂಗ್ ಬಿಡುವಿನ ವೇಳೆಯಲ್ಲಿ ತಮ್ಮ ಮುದ್ದಾದ ಮಕ್ಕಳೊಟ್ಟಿಗೆ ತುಂಟಾಟ ಮಾಡುತ್ತಾ ಕಾಲ ಕಳೆಯುತ್ತಿರುವ ಒಂದಷ್ಟು ವೀಡಿಯೋ ಮತ್ತು ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅದರಂತೆ ಇದೀಗ ನಟಿ ರಾಧಿಕಾ ಪಂಡಿತ್ ಅವರು ವರಲಕ್ಷ್ಮಿ ಹಬ್ಬ ಆಚರಣೆ ಮಾಡಿದ ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿರುವ ಈ ಫೋಟೋಗಳು ಒಂದಕ್ಕಿಂತ ಒಂದು ಆಕರ್ಷಕವಾಗಿವೆ.

ಈ ಪೋಟೋದಲ್ಲಿ ರಾಧಿಕಾ ಪಂಡಿತ್ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಮಗ ಯಥರ್ವ ಪುಟ್ಟ ಪಂಚೆ ಉಟ್ಟು ಗಮನ ಸೆಳೆದರೆ, ಮಗಳು ಐರಾ ಕೂಡ ತಾಯಿಯೊಟ್ಟಿಗೆ ಫೋಟೋಗೇ ಪೋಸ್ ಕೊಡುತ್ತಾ ನಿಂತಿದ್ದಾರೆ. ಈ ಫ್ಯಾಮಿಲಿ ಪೋಟೋ ನೋಡಿದ ನೆಟ್ಟಿಗರು ಯಶ್ ಎಲ್ಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಪ್ರಶ್ನೆಗೆ ಪೋಟೋ ತೆಗೆದಿದ್ದೇ ಯಶ್ ಅಂತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ನಾಡಿನಾದ್ಯಂತ ಆಚರಿಸಿದ ವರ ಮಹಾಲಕ್ಷ್ಮಿ ಹಬ್ಬದಂದು ನಟಿ ರಾಧಿಕಾ ಪಂಡಿತ್ ಅವರು ತಮ್ಮ ಮನೆಯಲ್ಲಿ ಕೂರಿಸಿರುವ ಲಕ್ಷ್ಮಿ ಮತ್ತು ತಮ್ಮ ಮನೆಯಲ್ಲಿ ಹಬ್ಬದ ಸಡಗರ ಹೇಗಿತ್ತು ಅನ್ನೋದನ್ನ ಫೋಟೋಗಳ ಮೂಲಕ ತಿಳಿಸಿದ್ದಾರೆ. ಇನ್ನು ನಟ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು ಪ್ರೀತಿಸಿ ಮದುವೆಯಾಗಿ ಇದೀಗ ಇಬ್ಬರು ಮುದ್ದಾದ ಮಕ್ಕಳೊಟ್ಟಿಗೆ ಸುಂದರ ದಾಂಪತ್ಯ ಬದುಕನ್ನ ಸಾಗಿಸುತ್ತಿದ್ದು, ಯುವ ಜೋಡಿಗಳಿಗೆ ಆದರ್ಶ ದಂಪತಿಗಳಾಗಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್2 ಆದ ನಂತರ ಯಾವ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ಅವರ ಅಸಂಖ್ಯಾತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.