ವಂಶಿಕಾ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್, ಪುಟಾಣಿ ವಂಶಿಕಾಗೆ ಸಿಕ್ತು ಮತ್ತೊಂದು ಆಫರ್

ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ದಂಪತಿಗಳ ಪುತ್ರಿ ವಂಶಿಕಾ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನ ಗಳಿಸಿದ್ದಾಳೆ. ಕೇವಲ ಐದು ವರ್ಷದ ಪೋರಿ ವಂಶಿಕಾಳ ಅರುಳು ಹುರಿದಂತೆ ಮಾತನಾಡುವ ಚಾತುರ್ಯತೆ, ಅವಳ ಮನ ಸೆಳೆಯುವ ನಟನೆ ಕನ್ನಡಿಗರಿಗೆ ತುಂಬಾನೇ ಇಷ್ಟವಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ವಂಶಿಕಾ ತನ್ನ ತಾಯಿ ಯಶಸ್ವಿನಿ ಜೊತೆ ಸ್ಪರ್ಧಿಯಾಗಿ ‌‌ಭಾಗವಸಿದ್ದರು. ವಂಶಿಕಾಳ ಮುದ್ದು ಮುದ್ದಾದ ಮಾತು ಅವಳ ಚಿನಕುರುಳಿ ಮಾತುಗಳನ್ನ ಕೇಳಿ ಕಿರುತೆರೆಯ ವೀಕ್ಷಕರು ತಲೆದೂಗಿದ್ದರು. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಎಲ್ಲರಿಗೂ ವಂಶಿಕಾ ಬಹಳ ಅಚ್ಚು ಮೆಚ್ಚಾಗಿದ್ದಳು. ನಿರೀಕ್ಷೆಯಂತೆ ನನ್ನಮ್ಮ ಸೂಪರ್ ಸ್ಟಾರ್ ಕಿರೀಟವನ್ನ ತಮ್ಮದಾಗಿಸಿಕೊಂಡರು.

ಅದಕ್ಕೂ ಮುನ್ನ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ವಂಶಿಕಾಳ ನಟನೆಗೆ, ಆಕೆಯ ಡೈಲಾಗ್ ಮೋಡಿಗೆ ಎಲ್ಲರೂ ಫಿಧಾ ಆಗಿದ್ರು. ಇದೀಗ ಪುಟಾಣಿ ಪೋರಿ ವಂಶಿಕಾ ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೌದು ನಟ ಕಮ್ ಗಾಯಕ ಆಗಿರೋ ವಸಿಷ್ಠ ಸಿಂಹ ಅವರು ಲವ್ ಲೀ ಅನ್ನೋ ಆಕ್ಷನ್ ಕಮ್ ರೊಮ್ಯಾಂಟಿಕ್ ಸಿನಿಮಾವೊಂದರಲ್ಲಿ ನಟಿಸುತ್ತಿರೋದು ಈಗಾಗಲೇ ನಿಮಗೆ ಗೊತ್ತಿದೆ‌. ‘ಲವ್ ಲಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈಗಾಗಲೇ ಈ ಲವ್ ಲಿ ಸಿನಿಮಾದ ಶೇಕಡ 50ರಷ್ಟು ಚಿತ್ರೀಕರಣ ಕೂಡ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣ ಇದೇ ಸೆಪ್ಟೆಂಬರ್ 6ರಂದು ಆರಂಭಗೊಳ್ಳುತ್ತಿದೆ. ಲವ್ ಲೀ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರಕ್ಕಾಗಿ ಈಗ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಎಂಟ್ರಿ ಆಗಿದೆ.

ಪುತ್ರಿ ವಂಶಿಕಾ ಸಿನಿಮಾದಲ್ಲಿ ಅವಕಾಶ ಪಡೆದಿರೋದಕ್ಕೆ ಮಾಸ್ಟರ್ ಆನಂದ್ ಅವರು ತಮ್ಮ ಮಗಳ ಆಸೆಯೇ ನಮ್ಮ ಆಸೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತನು ಎಂಬ ಪಾತ್ರದಲ್ಲಿ ವಂಶಿಕಾ ನಟಿಸುತ್ತಿದ್ದಾಳಂತೆ. ಈ ಬಗ್ಗೆ ಆನಂದ್ ಅವರು ವಂಶಿಕಾ ಗೆ ಇತ್ತೀಚೆಗೆ ಒಂದಷ್ಟು ಸಿನಿಮಾಗಳಲ್ಲಿ ಆಫರ್ ಬರ್ತಿವೆ. ಅದು ನನಗೆ ತುಂಬಾ ಸಂತೋಷ ಮತ್ತು ಜವಾಬ್ದಾರಿ ಎಂದು ತಿಳಿಸಿದ್ದಾರೆ. ಇನ್ನು ಮಫ್ತಿ ಸಿನಿಮಾದಲ್ಲಿ ನರ್ತನ್ ಅವರೊಟ್ಟಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಚೇತನ್ ಕೇಶವ್ ಅವರು ಲವ್ ಲೀ ಸಿನಿಮಾದ ಮುಖಾಂತರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ವಸಿಷ್ಠ ಸಿಂಹ ಅವರಿಗೆ ಜೋಡಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ರವೀಂದ್ರ ಕುಮಾರ್ ನಿರ್ಮಾಣದ ಈ ಲವ್ ಲೀ ಸಿನಿಮಾಗೆ ಅನೂಪ್ ಸೀಳಿನ್ ರಾಗ ಸಂಯೋಜನೆ ಮಾಡುತ್ತಿದ್ದು, ಅಶ್ವಿನ್ ಕೆನಡಿ ಛಾಯಾಗ್ರಹಣ, ಹರೀಶ್ ಕೊಮ್ಮೆ ಅವರು ಸಂಕಲನ ಮಾಡಿದ್ದಾರೆ.

Leave a Reply

%d bloggers like this: