ಉತ್ತರ ಕರ್ನಾಟಕದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಹುಬ್ಬಳ್ಳಿಯ ಇನ್ಫೋಸಿಸ್ ಕಂಪನಿಯಿಂದ ನೇಮಕಾತಿ ಆರಂಭ

ದೇಶದ ಪ್ರತಿಷ್ಟಿತ ಐಟಿ ಸಂಸ್ಥೆ ಆಗಿರುವ ಇನ್ಫೋಸಿಸ್ ನೇಮಕಾತಿ ಆರಂಭ ಮಾಡಿದೆ. ಅದೂ ಕೂಡ ಹುಬ್ಬಳ್ಳಿ ನಗರದಲ್ಲಿ ಅನ್ನೋದು ವಿಶೇಷ. ಬಹು ರಾಷ್ಟ್ರೀಯ ಕಂಪನಿಗಳು ಸಾಮಾನ್ಯವಾಗಿ ಬೆಂಗಳೂರಿನಂತಹ ಮೆಟ್ರೋ ಸಿಟಿಗಳಲ್ಲಿ ಹೆಚ್ಚಾಗಿ ನೇಮಕಾತಿ ಮಾಡುತ್ತವೆ. ಆದರೆ ನಮ್ಮ ಕರ್ನಾಟಕದ ಹೆಮ್ಮೆಯ ಐಟಿ ಸಂಸ್ಥೆ ಆಗಿರುವ ಇನ್ಫೋಸಿಸ್ ಸಂಸ್ಥೆ ಇದೀಗ ಹುಬ್ಬಳ್ಳಿ ನಗರದಲ್ಲಿ ಕ್ಯಾಂಪಸ್ ಆರಂಭ ಮಾಡಿದ್ದು, ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೀಡುತ್ತಿದೆ. ಇನ್ಫೋಸಿಸ್ ಕಂಪನಿಯಲ್ಲಿ ಖಾಲಿ ಇರುವ ಏರೋಸ್ಪೇಸ್ ಅಂಡ್ ಜಾವಾ ಡೆವಲಪರ್ ಹುದ್ದೆಗಳಿಗೆ ಆಹ್ವಾನ ನೀಡಿದೆ. ಇನ್ಫೋಸಿಸ್ ಕಂಪನಿಯಲ್ಲಿ ನೀವು ಕೆಲಸ ಮಾಡಲು ಆಸಕ್ತರಾಗಿದ್ದಲ್ಲಿ ಈ ಅರ್ಹತೆಗಳು ನಿಮ್ಮಲ್ಲಿವೆಯ ಎಂದು ಖಚಿತ ಪಡಿಸಿಕೊಳ್ಳಿ. ಇನ್ಫೋಸಿಸ್ ನಲ್ಲಿ ಖಾಲಿ ಇರುವಂತಹ ಏರೋಸ್ಪೇಸ್ ಇಂಜಿನಿಯರ್ ಹುದ್ದೆಗೆ ಬೇಕಾಗಿರುವ ಅರ್ಹತೆಗಳನ್ನ ನೋಡುವುದಾದರೆ ಬಿಇ, ಬಿಸಿಎ, ಎಂಟೆಕ್, ಎಂಸಿಎ ಪದವೀಧರರಾಗಿದ್ದು, ಈ ಒಂದು ವೃತ್ತಿಯಲ್ಲಿ ಐದು ವರ್ಷಕ್ಕೂ ಹೆಚ್ಚು ಅನುಭವ ಇರ್ಬೇಕು.

ಅವರಿಗೆ ಏರೋಸ್ಪೇಸ್ ಇಂಜಿನಿಯರ್ ಕೆಲಸಕ್ಕೆ ಬೇಕಾದ ಪ್ರೈಮರಿ ಸ್ಕಿಲ್ಸ್ ಕರಗತವಾಗಿದ್ದು, ಎಂಡೆಡೆಡ್ ಸಾಫ್ಟವೇರ್, ಕಂಟೋಲ್ ಸಿಸ್ಟಮ್ ಬಗ್ಗೆ ಅರಿವಿರಬೇಕು. ಇನ್ನು ಜಾವಾ ಡೆವಲಪರ್ ಹುದ್ದೆಗೆ ಕನಿಷ್ಟ ಬಿಇ, ಬಿಸಿಎ, ಎಂಸಿಎ, ಪದವೀಧರರಾಗಿದ್ದು ಐದು ವರ್ಷಗಳ ಸೇವಾ ಅನುಭವ ಹೊಂದಿರಬೇಕು. ಜಾವಾ, ಜಾವಾ ಜಾವಾ8, ಜಾವಾ ಮೈಕ್ರೋ ಸರ್ವೀಸಸ್, ಜಾವಾ ಸ್ಟ್ರಿಂಗ್ಬೂಟ್, ಜಾವಾ ಎಎಲ್ಎಲ್ ಅಂತಹ ಪ್ರೈಮರಿ ಸ್ಕಿಲ್ಸ್ ತಿಳಿದಿರಬೇಕಾಗುತ್ತದೆ. ಈ ಎಲ್ಲಾ ಅರ್ಹತೆ, ಕೌಶಲ್ಯಗಳು ನಿಮ್ಮಲ್ಲಿ ಇದ್ದಲ್ಲಿ ನೀವು ಹುಬ್ಬಳ್ಳಿ ನಗರದಲ್ಲಿ ಇನ್ಫೋಸಿಸ್ ಕಂಪನಿಯು ಆಹ್ವಾನ ಮಾಡಿರೋ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅಭ್ಯರ್ಥಿಗಳು @infosysCareers ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.

Leave a Reply

%d bloggers like this: