ಉಪ್ಪಿ ಪುತ್ರಿಯ ಸಿನಿಮಾ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿದ ಪ್ರಿಯಾಂಕಾ ಅವರು

ದೊಡ್ಮನೆಯ ಸಂಸ್ಥೆಯ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರಿ ಚಂದನವನಕ್ಕೆ ಪಾದಾರ್ಪಣೆ ಮಾಡ್ತಿದ್ದಾರಾ. ಈ ಒಂದು ಸುದ್ದಿ ನಿಜಕ್ಕೂ ಸತ್ಯಾನಾ. ಇದ್ದಕಿದ್ದಂತೆ ಈ ರೀತಿಯಾದ ಸುದ್ದಿ ಹರಿದಾಡಲು ಕಾರಣವೇನು ಅನ್ನೋದನ್ನ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಇತ್ತೀಚೆಗೆ ಕನ್ನಡದ ಅನೇಕ ನಟ ನಟಿಯರ ಮಕ್ಕಳು ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಸಕ್ಸಸ್ ಕಂಡು ಬಣ್ಣದ ಲೋಕದಲ್ಲಿ ತಮ್ಮ ಮನೆಯವರಂತೆ ನೆಲೆ ಕಂಡುಕೊಂಡಿದ್ದಾರೆ. ಇನ್ನು ಕೆಲವರು ಕಲಾ ಸರಸ್ವತಿ ನಮಗೆ ಒಲಿಯೋಲ್ಲ ಅಂತೇಳಿ ಸಿನಿಮಾರಂಗ ಬಿಟ್ಟು ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಎಲ್ಲರ ಜೀವನದಲ್ಲಿ ಒಂದೇ ರೀತಿ ಆಗಬೇಕು ಅಂದೇನಿಲ್ವಲ್ಲ. ಈಗಾಗಲೇ ಕನ್ನಡದ ಒಂದಷ್ಟು ಸ್ಟಾರ್ ನಟರ ಪುತ್ರರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಅದರಂತೆ ಇದೀಗ ಹೊಸದೊಂದು ಎರಾ ಸ್ಟಾರ್ಟ್ ಆಗಿದೆ. ಅದೇನಪ್ಪಾ ಅಂದರೆ ಸ್ಟಾರ್ ಕಲಾವಿದರ ಪುತ್ರಿಯರು ಸಹ ಚಂದನವನದಲ್ಲಿ ಸದ್ದು ಮಾಡಲು ಸೈಲೆಂಟಾಗಿ ಸಿದ್ದತೆ ನಡೆಸಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ರಾಧ್ಯರಾಮ್ ಅವರು ದರ್ಶನ್ ಅವರ ಹೊಸ ಸಿನಿಮಾಗೆ ನಾಯಕಿ ಆಗುವ ಮೂಲಕ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಇವರ ಬೆನ್ನಲ್ಲೇ ನಟಿ ಶೃತಿ ಅವರ ಮಗಳು ಕೂಡಾ ಸ್ಯಾಂಡಲ್ ವುಡ್ ಗೆ ಬರುತ್ತಾರೆ ಅನ್ನೋ ಮಾತು ಕೇಳಿ ಬಂತು. ಆದರೆ ಆ ವಿಚಾರಕ್ಕೆ ಅಷ್ಟೇನೋ ಸ್ಪಷ್ಟನೆ ಸಿಗಲಿಲ್ಲ. ಅದಾದ ನಂತರ ಕೆಲವು ದಿನಗಳ ಹಿಂದೆ ಲವ್ಲೀ ಸ್ಟಾರ್ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿರೋ ಟಗರು ಪಲ್ಯ ಸಿನಿಮಾದಲ್ಲಿ ನಾಗಭೂಷಣ್ ಅವರಿಗೆ ಜೋಡಿಯಾಗಿ ಆಯ್ಕೆ ಆಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ.

ಈಗ ಹೊಸದೊಂದು ಸುದ್ದಿ ಕೇಳಿ ಬಂದಿದೆ. ಅದು ಏನಪ್ಪಾ ಅಂದರೆ ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಪುತ್ರಿ ಐಶ್ವರ್ಯ ಅವರು ದೊಡ್ಮನೆಯ ಯುವರಾಜ್ ಕುಮಾರ್ ಅವರ ಹೊಸ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ. ಈ ಚಿತ್ರವನ್ನ ಸಂತೋಷ್ ಆನಂದ್ ರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಸಖತ್ ವೈರಲ್ ಆಗಿದೆ. ಅಸಲಿಗೆ ಇದೊಂದು ಸುಳ್ಳು ಸುದ್ದಿಯಾಗಿದ್ದು, ಉಪೇಂದ್ರ ಅವರ ಪುತ್ರಿ ಐಶ್ವರ್ಯ ಅವರು ತಮ್ಮ ವಿಧ್ಯಾಭ್ಯಾಸದಲ್ಲಿ ತೊಡಗಿರೋದ್ರಿಂದ ಸದ್ಯಕ್ಕೆ ಸಿನಿಮಾದಲ್ಲಿ ನಟಿಸೋದು ಸಾಧ್ಯವಿಲ್ಲ. ಆ ರೀತಿ ಏನಾದ್ರು ಇದ್ದರೆ ಗ್ರ್ಯಾಂಡ್ ಆಗಿಯೇ ಮಗಳನ್ನ ಲಾಂಚ್ ಮಾಡುತ್ತೇವೆ ಎಂದು ಪ್ರಿಯಾಂಕಾ ಅವರು ಮಾಹಿತಿ ನೀಡಿದ್ದಾರಂತೆ. ಹಾಗಾಗಿ ಯುವ ರಾಜ್ ಕುಮಾರ್ ಅವರಿಗೆ ಜೋಡಿಯಾಗಿ ಉಪೇಂದ್ರ ಪುತ್ರಿ ನಟಿಸುತ್ತಾರೆ ಅನ್ನೋದು ಗಾಳಿ ಸುದ್ದಿಯಾಗಿದೆ ಎಂದು ತಿಳಿದು ಬಂದಿದೆ.

Leave a Reply

%d bloggers like this: