ಉಪ್ಪಿ ಅವರ ಹೊಸ ಬಿಗ್ ಬಜೆಟ್ ಚಿತ್ರಕ್ಕೆ ಆಯ್ಕೆ ಆದ ಕನ್ನಡ ನಟಿ

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದಷ್ಟು ವರ್ಷಗಳ ನಂತರ ಡೈರೆಕ್ಷನ್ ಗೆ ಕಮ್ ಬ್ಯಾಕ್ ಮಾಡಿರೊದು ನಿಮಗೆ ಗೊತ್ತೇ ಇದೆ. ಉಪೇಂದ್ರ ಅವರು ಉಪ್ಪಿ2 ಚಿತ್ರ ನಿರ್ದೇಶನ ಮಾಡಿದ ನಂತರ ನಿರ್ದೇಶನ ಮಾಡುತ್ತಿರೋ ಹೊಸ ಸಿನಿಮಾ ಯುಐ. ಈ ಚಿತ್ರದ ಟೈಟಲ್ ಬಹಳ ಗಮನ ಸೆಳೆದಿದ್ದು , ಈಗಾಗಲೇ ಸಿನಿ ಪ್ರಿಯರಲ್ಲಿ ಭಾರಿ ಕ್ಯೂರಿಯಾಸಿಟಿ ಹುಟ್ಟಿಸಿದೆ. ಮೊದಲೇ ಉಪೇಂದ್ರ ಅವರ ಸಿನಿಮಾಗಳು ಅಂದರೆ ಡಿಫ್ರೆಂಟ್ ಅನ್ನೋ ಪದಕ್ಕೆ ಅನ್ವರ್ಥವಾಗಿರುತ್ತವೆ. ವಿಭಿನ್ನ ಆಲೋಚನೆಯ ಜೊತೆಗೆ ಸಿನಿಮಾದಲ್ಲಿ ಏನಾದರೊಂದು ಹೊಸ ಚಿಂತನೆಗಳನ್ನ ಮಾಹಿತಿ ಸಂದೇಶಗಳನ್ನ ತಮ್ಮ ಚಿತ್ರದಲ್ಲಿ ಹೇಳಲು ಹೊರಟಿರುತ್ತಾರೆ ಉಪೇಂದ್ರ. ಅದರಂತೆ ಈಗ ಮಾಡುತ್ತಿರೋ ಯುಐ ಸಿನಿಮಾ ಕೂಡ ಒಂದು ವಿಶೇಷವಾದ ಕಾನ್ಸೆಪ್ಟ್ ಹೊಂದಿದೆ ಎಂದು ಹೇಳಲಾಗುತ್ತಿದೆ.

ಯುಐ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿದ್ದು, ಈ ಚಿತ್ರವನ್ನ ಟಗರು ಸಿನಿಮಾ ಖ್ಯಾತಿಯ ಕೆಪಿ ಶ್ರೀಕಾಂತ್ ಮತ್ತು ಜಿ.ಮನೋಹರನ್ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಈಗಾಗಲೇ ಯುಐ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಶೂಟಿಂಗ್ ವೇಳೆ ಡಸ್ಟ್ ಅಲರ್ಜಿಯಿಂದ ಉಪೇಂದ್ರ ಅವರಿಗೆ ಕೊಂಚ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುದ್ದಿಯಾಗಿದ್ದರು. ಇದೀಗ ಯುಐ ಸಿನಿಮಾದ ಹೊಸದೊಂದು ಅಪ್ ಡೇಟ್ ಸಿಕ್ಕಿದೆ. ಉಪೇಂದ್ರ ಅವರ ನಿರ್ದೇಶನದಲ್ಲಿ ಬರೋ ಎಲ್ಲಾ ಸಿನಿಮಾಗಳಲ್ಲಿ ಕಥೆ ಏನಿರಬಹುದು ಅನ್ನೋದು ಎಷ್ಟರ ಮಟ್ಟಿಗೆ ಸದ್ದು ಆಗುತ್ತೋ ಅದೇ ರೀತಿಯಾಗಿ ಅವರ ಸಿನಿಮಾದ ನಾಯಕಿ ಯಾರು ಅನ್ನೋದು ಕೂಡಾ ಭಾರಿ ಚರ್ಚೆ ಕುತೂಹಲ ಮೂಡಿಸುತ್ತದೆ.

ಅದೇ ರೀತಿಯಾಗಿ ಯುಐ ಸಿನಿಮಾ ಸೆಟ್ಟೇರಿದಾಗಿನಿಂದ ಚಿತ್ರದ ನಾಯಕಿಯ ಬಗ್ಗೆ ಪ್ರಶ್ನೆ ಇತ್ತು. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದಂತಾಗಿದೆ. ಹೌದು ಉಪೇಂದ್ರ ಅವರ ನಟಿಸಿ ನಿರ್ದೇಶನ ಮಾಡುತ್ತಿರೋ ಈ ಯುಐ ಸಿನಿಮಾಗೆ ಏಕ್ ಲವ್ ಯಾ ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ನಟಿ ರೀಷ್ಮಾ ನಾಣಯ್ಯ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಇದಕ್ಕೂ ಮುನ್ನ ಇದು ಪ್ಯಾನ್ ಇಂಡಿಯಾ ಚಿತ್ರ ಆಗಿರೋದ್ರಿಂದ ಇದರಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟಿ, ನಟರು ಇರಲಿದ್ದಾರೆ ಅನ್ನೋದು ಕೇಳಿಬಂದಿತ್ತು. ಆದರೆ ಈಗ ಮೂಲಗಳ ಪ್ರಕಾರ ಯುಐ ಸಿನಿಮಾಗೆ ಕನ್ನಡತಿ ರೀಷ್ಮಾ ನಾಣಯ್ಯ ಉಪೇಂದ್ರ ಅವರಿಗೆ ಜೋಡಿಯಾಗಿದ್ದಾರೆ. ಇನ್ನು ತಾರಾಗಣದಲ್ಲಿ ಪ್ರಶಾಂತ್ ಸಂಬರ್ಗಿ, ಇಂದ್ರಜಿತ್ ಲಂಕೇಶ್ ಸೇರಿದಂತೆ ಇಂಡಿಯನ್ ಸಿನಿಮಾ ರಂಗದ ಖ್ಯಾತನಾಮ ಕಲಾವಿದರು ಇರಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

%d bloggers like this: