ಅಂಡರ್ ವಾಟರ್ ನಲ್ಲಿ ಈ ಖ್ಯಾತ ನಟಿಗೆ ಲವ್ ಪ್ರೊಪೋಸ್ ಮಾಡಿದ ಮಾಜಿ ಮುಖ್ಯಮಂತ್ರಿ ಮೊಮ್ಮಗ..

ಪ್ರತಿಯೊಬ್ಬ ಪ್ರೇ‌ಯಸಿಗೂ ಕೂಡ ತನ್ನ ಪ್ರಿಯತಮ ಎಲ್ಲರಿಗಿಂತ ವಿಭಿನ್ನವಾಗಿ ತಮ್ಮ ಪ್ರೀತಿಯನ್ನ ವ್ಯಕ್ತಪಡಿಸಬೇಕು ಎಂಬ ಮಹದಾಸೆಯನ್ನ ಹೊಂದಿರುತ್ತಾರೆ. ಅದರಂತೆ ಅನೇಕ ಜೋಡಿಗಳು ತಮ್ಮ ಪ್ರೇಮವನ್ನು ಬಹಳ ವಿಶಿಷ್ಟ ರೀತಿಯಲ್ಲಿ ಸ್ವೀಕರಿಸುತ್ತಾರೆ. ಒಪ್ಪದ ಪ್ರಿಯತಮೆ ಕೂಡ ಪ್ರೀತಿಯನ್ನ ವ್ಯಕ್ತ ಪಡಿಸುವ ರೀತಿಗೆ ಆ ಹುಡುಗನಿಗೆ ಫಿಧಾ ಆಗಿ ಬಿಡುತ್ತಾರೆ. ಅಂತೆಯೇ ಹಿಂದಿ ಚಿತ್ರರಂಗದ ಜನಪ್ರಿಯ ಸುಪ್ರಸಿದ್ಧ ನಟಿಯಾಗಿ ಮಿಂಚುತ್ತಿರುವ ಮೆಹ್ರೀನ್ ಪಿರ್ಜಾದಾ ಅವರಿಗೆ ಕೂಡ ಒಂದು ಲವ್ ಪ್ರಪೋಸಲ್ ಬಂದಿದೆ. ಅದೂ ಕೂಡ ಮಾಜಿ ಮುಖ್ಯಮಂತ್ರಿ ಮೊಮ್ಮಗ ಎಂಬುದು ಎಲ್ಲರಿಗೂ ಅಚ್ಚರಿಯ ವಿಚಾರ. ಹೌದು ಹರಿಯಾಣ ರಾಜ್ಯದ ಮಾಜಿ ಮುಖ್ಯಮಂತ್ರಿ ಆದಂತಹ ಭಜನ್ ಲಾಲ್ ಅವರ ಮೊಮ್ಮಗ ಭವ್ಯ ಬಿಷ್ನೋಯ್ ಅವರು ಹರಿಯಾಣ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಉನ್ನತ ಹುದ್ದೆ ಅಲಂಕರಿಸಿದ್ದ ತಮ್ಮ ತಾತ ಭಜನ್ ಲಾಲ್ ಮತ್ತು ತಂದೆ ಕುಲದೀಪ್ ಬಿಷ್ನೋಯ್ ಅವರ ದಾರಿಯಲ್ಲೇ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದರ ನಡುವೆ ಎಫ್ ಟು ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿ ಅಪಾರ ಜನಪ್ರಿಯತೆ ಗಳಿಸಿದ ನಟಿ ಮೆಹ್ರೀನ್ ಕೌರ್ ಫಿರ್ಜಾದಾ ಅವರೊಟ್ಟಿಗೆ ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿದೆ. ತಮ್ಮ ಪ್ರೀತಿಯನ್ನ ಭವ್ಯ ಬಿಷ್ನೋಯ್ ಅವರು ಅಂಡರ್ ವಾಟರ್ ನಲ್ಲಿ ನಟಿ ಮೆಹ್ರೀನ್ ಅವರಿಗೆ ತಿಳಿಸಿದ್ದರಂತೆ. ಆಗ ತಾನೇ ಮೆಹ್ರೀನ್ ಅವರು ಅಂಡಮಾನ್ ನಲ್ಲಿ ಸ್ಕೂಬಾ ಡ್ರೈವಿಂಗ್ ತರಬೇತಿ ಪಡೆಯುತ್ತಿದ್ದರಂತೆ. ಇದೇ ಸಂಧರ್ಭದಲ್ಲಿ ಮೆಹ್ರೀನ್ ಅವರಿಗೆ ಅರಿವಿಗೆ ಬರದಂತೆ ಮೆಹ್ರೀನ್ ಅವರು ಈಜುವ ಸಂದರ್ಭದಲ್ಲಿ ನೀರಿನೊಳಗೆ ಮಂಡಿಯೂರಿ ತಮ್ಮ ಪ್ರೇಮ ನಿವೇದನೆ ಮಾಡಿದ್ದರಂತೆ ಭವ್ಯ ಬಿಷ್ನೋಯ್. ಭವ್ಯ ಬಿಷ್ನೋಯ್ ಅವರ ಪ್ರೇಮ ನಿವೇದನೆಯ ಶೈಲಿಯ ಕಂಡು ನಟಿ ಮೆಹ್ರೀನ್ ಅವರು ನಿಬ್ಬೆರಗಾಗಿ ಮೂಕ ವಿಸ್ಮಿತರಾಗಿದ್ದರಂತೆ.

ಈ ಅಚ್ಚರಿಯ ಕುತೂಹಲಕಾರಿ ವಿಚಾರವನ್ನು ಮೆಹ್ರೀನ್ ಅವರು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಕೂಡ ಆಗಿತ್ತು. ಜೈಪುರನಲ್ಲಿ ಬಹಳ ಅದ್ದೂರಿಯಾಗಿ ನಟಿ ಮೆಹ್ರೀನ್ ಪಿರ್ಜಾದಾ ಮತ್ತು ಭವ್ಯ ಬಿಷ್ನೋಯ್ ಅವರ ನಿಶ್ಚಿತಾರ್ಥ ಕಾರ್ಯ ನಡೆಯಿತು. ದುರಾದೃಷ್ಟವಶಾತ್ ಇದಾದ ತಿಂಗಳ ನಂತರ ಇವರಿಬ್ಬರ ಮದುವೆ ಕಾರಣಾಂತರಗಳಿಂದ ಸ್ಥಗಿತಗೊಂಡು ಇಬ್ಬರು ಪರಸ್ಪರ ವೈವಾಹಿಕ ಜೀವನಕ್ಕೆ ಪ್ರವೇಶ ಮಾಡುವ ಮುಂಚೆಯೇ ಅಂತ್ಯ ಕಂಡಿತು. ನಟಿ ಮೆಹ್ರಿನ್ ಅವರು ಕೇವಲ ಹಿಂದಿ ಮಾತ್ರ ಅಲ್ಲದೆ ತಮಿಳು,ತೆಲುಗು ಭಾಷೆಗಳಲ್ಲಿ ನಟಿಸಿದ್ದಾರೆ.

Leave a Reply

%d bloggers like this: