ನಿರ್ಮಾಪಕ ಉಮಾಪತಿ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ

ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದೆ. ಹೌದು ಸಾಮಾನ್ಯವಾಗಿ ಸಿನಿಮಾ ಕ್ಷೇತ್ರಕ್ಕೆ ನಟ-ನಟಿ ಆಗಬೇಕು ಅಥವಾ ನಿರ್ದೆಶಕ ನಾಗಬೇಕು ಎಂಬ ಮಹಾದಾಸೆ ಹೊತ್ತು ಬರುತ್ತಾರೆ.ಆದರೆ ಯುವ ಉತ್ಸಾಹಿಗಳು ನಿರ್ಮಾಪಕನಾಗಬೇಕು ಎಂಬ ಕನಸು ಹೊತ್ತು ಬರುವುದು ವಿರಳಾತಿ ವಿರಳ.ಇತ್ತೀಚೆಗೆ ಸಿನಿಮಾ ನಿರ್ಮಾಣ ಮಾಡುವುದಕ್ಕೂ ಕೂಡ ಉತ್ತಮ ಚಿತ್ರಗಳನ್ನು ನೀಡಿ ನಿರ್ಮಾಪಕನಾಗಬೇಕು ಎಂಬ ಕನಸು ಹೊತ್ತಿ ಬರುತ್ತಿದ್ದಾರೆ. ಅಂತಹ ಯುವ ಉತ್ಸಾಹಿಗಳಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಕೂಡ ಒಬ್ಬರು.2017 ರಲ್ಲಿ ಛಾಯಾಗ್ರಾಹಕ ಎಸ್. ಕೃಷ್ಣ ನಿರ್ದೇಶನದಲ್ಲಿ ತೆರೆಕಂಡ ಹೆಬ್ಬುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟರು.ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರ ಉತ್ತಮ ಗಳಿಕೆ ಕಂಡು ಸೂಪರ್ ಹಿಟ್ ಆಯಿತು.

ನಿರ್ಮಾಪಕನಾಗಿ ತಮ್ಮ ಚೊಚ್ಚಲ ಮೊದಲ ಚಿತ್ರದ ನಿರ್ಮಾಣದಲ್ಲಿ ಯಶಸ್ವಿಯಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸ್ಟಾರ್ ನಟರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ.ಹಾಗಾಗಿ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದಲ್ಲಿ ದರ್ಶನ್ ಅವರ ಒಟ್ಟಿಗೆ ಚಿತ್ರವೊಂದನ್ನು ನಿರ್ಮಾಣ ಮಾಡುವ ಆಸೆ ಇಟ್ಟಿಕೊಂಡಿದ್ದರು.ಆದರೆ ಪ್ರೇಮ್ ಅವರ ಡೇಟ್ ಸಮಸ್ಯೆಯಿಂದಾಗಿ ಪ್ರೇಮ್ ಅವರ ಜಾಗಕ್ಕೆ ತರುಣ್ ಸುಧೀರ್ ಎಂಟ್ರಿ ಆಗಿ ರಾಬರ್ಟ್ ಸಿನಿಮಾ ಸಟ್ಟೇರಿತು.ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದಲ್ಲಿ ಮೂಡಿಬಂದ ರಾಬರ್ಟ್ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿತು.ದರ್ಶನ್ ಸಿನಿಮಾಗಳು ಅಂದಮೇಲೆ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡೇ ಮಾಡುತ್ತವೆ.

ಅದರಂತೆ ರಾಬರ್ಟ್ ಚಿತ್ರ ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು.ಮತ್ತೆ ಗೆಲುವಿನ ನಗೆ ಬೀರಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ದರ್ಶನ್ ಅವರೊಂದಿಗಿನ ಭಾಂಧವ್ಯ ಉತ್ತಮವಾಗಿತ್ತು.ಆದರೆ ಕೆಲವೊಂದು ತಿಂಗಳಿಂದ ಆದ ಘಟನೆಗಳು ದರ್ಶನ್ ಮತ್ತು ಉಮಾಪತಿ ನಡುವೆ ಮನಸ್ತಾಪ ಉಂಟು ಮಾಡಿದೆ.ದರ್ಶನ್ ಅವರ ಹೆಸರನ್ನು ಬಳಸಿಕೊಂಡು ಬರೋಬ್ಬರಿ ಇಪ್ಪತ್ತೈದು ಕೋಟಿ ರೂ.ಸಾಲಕ್ಕೆ ಅರ್ಜಿ ಸಲ್ಲಿಸಿ.ದರ್ಶನ್ ಅವರನ್ನೇ ಶ್ಯೂರಿಟಿಯಾಗಿ ಮಾಡಿದ್ದರು ಎಂಬ ವಿಚಾರ ಭಾರಿ ಸುದ್ದಿ ಆಗಿ ದರ್ಶನ್ ಆಪ್ತರ ನಡುವೆ ಕಂದಕ ಸೃಷ್ಟಿಯಾಗಿದೆ.

ಈ ವಿವಾದದ ನಡುವೆ ಪರಸ್ಪರ ತಮ್ಮ ಹೇಳಿಕೆ ನೀಡುವುದರ ಮೂಲಕ ಆಪ್ತ ಸ್ನೇಹಿತರು ಸದ್ಯದ ಮಟ್ಟಿಗೆ ಅಂತರ ಕಾಯ್ದುಕೊಂಡಿದ್ದಾರೆ.ಇನ್ನು ನಿರ್ಮಾಪಕ ಶ್ರೀನಿವಾಸ್ ಗೌಡ ಅವರು ಶ್ರೀ ಮುರುಳಿ ನಟಿಸುತ್ತಿರುವ ಮದಗಜ ಚಿತ್ರಕ್ಕೆ ಬಂಡವಾಳ ಹೂಡಿದ್ದು,ಚಿತ್ರದ ಕೆಲಸ ಕಾರ್ಯಗಳು ನಡೆಯುತ್ತಿವೆ.ಉಮಾಪತಿ ಶ್ರೀನಿವಾಸ್ ಗೌಡ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದು,ಆಗರ್ಭ ಶ್ರೀಮಂತ ಕುಟುಂಬ ಹಿನ್ನೆಲೆವುಳ್ಳವರಾಗಿದ್ದಾರೆ.ಇತ್ತೀಚೇಗೆ ಖಾಸಗಿ ವಾಹಿನಿಯಲ್ಲಿ ಅವರೇ ತಿಳಿಸಿರುವಂತೆ ಬೆಂಗಳೂರು ನಗರದಲ್ಲಿ ನೂರಾರು ಎಕರೆ ಆಸ್ತಿ-ಪಾಸ್ತಿ ಹೊಂದಿದ್ದಾರಂತೆ.ಜೊತೆಗೆ ಉಮಾಪತಿ ಶ್ರೀ ನಿವಾಸ್ ಗೌಡ ಅವರು ಹತ್ತು ಹಲವು ಪ್ರಾಪರ್ಟಿಗಳ ಮಾಲೀಕರಾಗಿದ್ದಾರೆ.

ಯಶಸ್ವಿ ಉದ್ಯಮಿ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಉಮಾಪತಿ ಅವರಿಗೆ ಒಂದು ಗಂಡು ಒಂದು ಹೆಣ್ಣು ಮಗುವಿದ್ದು,ಸುಂದರ ಬದುಕನ್ನ ಕಟ್ಟಿಕೊಂಡಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.