ಉಲ್ಟಾ ಮನೆ ನಿರ್ಮಾಣ..ಈ ಉಲ್ಟಾ ಮನೆ ನೋಡಲು ವಿವಿಧ ದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರಂತೆ. ಇದು ಇರೋದು ಎಲ್ಲಿ ಗೊತ್ತಾ

ಉಲ್ಟಾ ಪಲ್ಟಾ ಯೋಚನೆ ಮಾಡುವ ಜನರನ್ನ ನೋಡಿರುತ್ತೇವೆ, ‌ಕೇಳಿರುತ್ತೇವೆ. ಆದರೆ ಉಲ್ಟಾ ಪಲ್ಟಾ ಇರುವ ಮನೆಯನ್ನ ನೋಡಿರಲು ಸಾಧ್ಯವೇ. ಇಲ್ಲ ಅಂತ ನಾವು ಊಹೆ ಮಾಡಿರಬಹುದು. ಆದರೆ ಇಲ್ಲೊಂದು ಕಡೆ ಉಲ್ಟಾ ನಿರ್ಮಾಣ ಮಾಡಿರುವ ಮನೆ ನಮ್ಮನ್ನ ಚಕಿತ ಗೊಳಿಸುತ್ತಿದೆ. ಹೌದು ಮನುಷ್ಯ ಪ್ರಕೃತಿಗೆ ವಿರುದ್ದವಾಗಿ ನಡೆಯಬಾರದು ಎಂದು ಹೇಳುತ್ತಾರೆ. ಅದರಂತೆ ಭೂಮಿಯ ಗುರುತ್ವಾಕರ್ಷಣೆ ಬಲವೊಂದಿದೆ ಎಂದು ನ್ಯೂಟನ್ ನಿಯಮ ತಿಳಿಸುತ್ತದೆ. ಅದನ್ನೇ ನಾವು ಕೂಡ ತಿಳಿದುಕೊಂಡಿದ್ದೇವೆ. ಭೂಮಿ, ಸೂರ್ಯ ಇನ್ನಿತರ ಆಕಾಶಕಾಯಗಳ ಅಸ್ತಿತ್ವಕ್ಕೆ ಗುರುತ್ವಾಕರ್ಷಣೆಯೇ ಕಾರಣ ಎಂದೂ ಸಹ ಹೇಳಲಾಗುತ್ತದೆ. ಇದೀಗ ಈ ಗುರುತ್ವಾಕರ್ಷಣೆಯ ವಿಚಾರ ಮುನ್ನೆಲೆಗೆ ಬರುವುದಕ್ಕೆ ಕಾರಣ ಅಂದರೆ ಕೊಲಂಬಿಯಾದಲ್ಲಿ ಗುರುತ್ವಾಕರ್ಷಣೆಗೆ ವಿರುದ್ದವಾಗಿ ಒಂದು ಉಲ್ಟಾವಾಗಿ ಮನೆಯೊಂದನ್ನ ನಿರ್ಮಾಣ ಮಾಡಿದ್ದಾರೆ.

ಈ ಉಲ್ಟಾ ಮನೆ ನೋಡಲು ವಿವಿಧ ದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರಂತೆ. ಈ ಆಪ್ಟಿಕಲ್ ಇಲ್ಯೂಷನ್ ಮನೆ ವರ್ಲ್ಡ್ ವೈಡ್ ಭಾರಿ ವೈರಲ್ ಆಗುತ್ತಿದೆ. ಜಗತ್ತಿನಲ್ಲಿ ವಿಸ್ಮಯಕಾರಿ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಕೊಲಂಬಿಯಾದಲ್ಲಿ ನಿರ್ಮಾಣ ಆಗಿರುವ ಈ ಉಲ್ಟಾ ಮನೆ ಮತ್ತೊಮ್ಮೆ ಸಾಕ್ಷಿಯಾಗಿದೆ. ದಿನಂಪ್ರತಿ ವಿಶ್ವದ ವಿವಿಧ ಭಾಗಗಳಲ್ಲಿ ರೋಚಕವಾದ ಕುತೂಹಲಕಾರಿ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಕೆಲವು ನಮ್ಮ ಕಲ್ಪನೆಗೂ ಮೀರಿದ್ದಾಗಿರುತ್ತವೆ. ಆದರೂ ಕೂಡ ವಾಸ್ತವದಲ್ಲಿ ನಾವು ಅದನ್ನ ಕಣ್ಣಾರೆ ಕಂಡಾಗ ನಂಬಲೇಬೇಕಾಗುತ್ತದೆ. ಅದರಂತೆ ಇದೀಗ ಕೊಲಂಬಿಯಾದ ಬೊಗೋಟಾ ಎಂ‌ಬ ಪ್ರದೇಶದಲ್ಲಿ ಗುರುತ್ವಾಕರ್ಷಣೆಗೆ ತದ್ವಿರುದ್ದವಾಗಿ ಮನೆಯನ್ನ ನಿರ್ಮಾಣ ಮಾಡಿದ್ದಾರೆ. ಈ ಮನೆಯನ್ನ ಫ್ರಿಟ್ಜ್ ಶಾಲ್ ಎಂಬ ವ್ಯಕ್ತಿ ಕೊಲಂಬಿಯಾದ ಗುವಿಯೋ ಪ್ರದೇಶದ ಸಾಂಟಾ ಮರಿಯಾ ಡಿ ಗುವಾಟಿಟಾ ಎಂಬ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದಾರೆ.

ಈ ವಿಚಿತ್ರವಾದ ಮನೆಯನ್ನ ಛಾಯಾಗ್ರಾಹಕರಾದಂತಹ ಹೆರ್ನೋಂಡೊ ರೊಜೋ ರೊಡ್ರಿಗಸ್ ಎಂಬುವವರು ಡ್ರೋನ್ ಮೂಲಕ ಈ ಮನೆಯನ್ನು ಬಹಳ ಆಕರ್ಷಕವಾಗಿ ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಮತ್ತು ಫೋಟೋವನ್ನು ಯಾಹೂ.ಕಾಮ್ ಸಂಸ್ಥೆ ಸುದ್ದಿ ಮಾಡಿದೆ.ಈ ಸುದ್ದಿ ಜಗತ್ತಿನಾದ್ಯಂತ ಭಾರಿ ಹರಡಿದ್ದು, ಜಗತ್ತಿನ ಅನೇಕ ದೇಶಗಳಿಂದ ಈ ವಿಚಿತ್ರವಾದ ಮನೆ ನೋಡಲು ಸಾವಿರಾರು ಜನ ಬರುತ್ತಿದ್ದಾರಂತೆ. ಈ ಮನೆಯೊಳಗೆ ಹೊಕ್ಕ ಜನರಿಗೆ ತಲೆ ಸುತ್ತಿದ್ದಂತಹ ಅನುಭವ ಆಗುತ್ತದೆಯಂತೆ. ಈ ಮನೆಯ ವಿನ್ಯಾಸ ರಚನೆ ತಿಳಿಯುವುದಾದರೆ ಮನೆಯ ಮಹಡಿಯು ನೆಲಕ್ಕೆ ಮತ್ತು ಕಾರ್ ಪಾರ್ಕ್ ಮಾಡಿರುವುದನ್ನ ಮೇಲಕ್ಕೆ ಇರುವಂತೆ ಪೋಟೋದಲ್ಲಿ ಕಾಣಬಹುದಾಗಿರುತ್ತದೆ.

Leave a Reply

%d bloggers like this: