ಉದ್ಯಮಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ದಕ್ಷಿಣ ಭಾರತದ ಮತ್ತೊಬ್ಬ ನಟಿ

ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಬಿಂದಾಸ್ ಬೆಡಗಿ ಇದೀಗ ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ. ಹೌದು ಇತ್ತೀಚೆಗೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಅನೇಕ ನಟ ನಟಿಯರು ಸಿಂಗಲ್ ಲೈಫ್ ನಿಂದ ಮ್ಯಾರೇಜ್ ಲೈಫ್ ಕಡೆ ಮುಖ ಮಾಡುತ್ತಿದ್ದಾರೆ. ಅವರ ಸಾಲಿಗೆ ಇದೀಗ ಸೌತ್ ಸಿನಿರಂಗದ ಸುಪ್ರಸಿದ್ದ ನಟಿ ಹನ್ಸಿಕಾ ಮೋಟ್ವಾನಿ ಅವರು ಕೂಡಾ ಸೇರ್ಪಡೆಗೊಳ್ಳುತ್ತಿದ್ದಾರೆ. ಹೌದು ನಟಿ ಹನ್ಸಿಕಾ ಮೋಟ್ವಾನಿ ಅವರು ತೆಲುಗು, ತಮಿಳು ಸೇರಿದಂತೆ ಕನ್ನಡ ಭಾಷೆಯ ಸಿನಿಮಾದಲ್ಲಿಯೂ ಕೂಡ ನಟಿಸಿ ಭಾರತೀಯ ಚಿತ್ರರಂಗದಲ್ಲಿ ತನ್ನದೇಯಾದ ಒಂದು ಸ್ಥಾನಮಾನವನ್ನ ಗಳಿಸಿಕೊಂಡಿದ್ದಾರೆ. ಹಿಂದಿ ಭಾಷೆಯಲ್ಲಿ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಹನ್ಸಿಕಾ ಅವರುತದ ನಂತರ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಸ್ಟಾರ್ ನಟಿಯಾಗಿ ಮಿಂಚಿದ್ದಾರೆ.

ನಟಿ ಹನ್ಸಿಕಾ ಅವರಿಗೆ ಅತಿ ಹೆಚ್ಚು ಸಕ್ಸಸ್ ಅಂಡ್ ನೇಮು ಫೇಮು ತಂದುಕೊಟ್ಟದ್ದು ತಮಿಳು ಸಿನಿಮಾಗಳು ಅಂತ ಹೇಳಬಹುದು. ಯಾಕಂದ್ರೆ ಅವರ ಇಂಗೆಯುಮ್ ಕಾದಲ್, ವೇಲಾಯುದಮ್, ಒರುಕಾಲ್ ಒರುಕನ್ನಡಿ, ತೀಯಾ ವೇಲಾಯ್ ಸೀಯ್ಯಾನಮ್ ಕುಮಾರು, ಸಿಂಗಂ2 ಸೇರಿದಂತೆ ಮಲೆಯಾಳಂ ಭಾಷೆಯ ವಿಲನ್ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿ ನಟಿ ಹನ್ಸಿಕಾ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿದ್ದಾವೆ. ಮುಂಬೈನಲ್ಲಿ ಜನಿಸಿದ ಹನ್ಸಿಕಾ ಬಾಲನಟಿಯಾಗಿ ಗುರುತಿಸಿಕೊಂಡು ಕಿರುತೆರೆಯ ಮೂಲಕ ಬೆಳ್ಳಿಪರದೆಗೆ ಹೆಜ್ಜೆ ಇಡಲು ದಾರಿ ಮಾಡಿಕೊಂಡರು. ಅದರಂತೆ ಅವರ ಪ್ರತಿಭೆಗೆ ತಕ್ಕಂತೆ ಒಳ್ಳೊಳ್ಳೆ ಅವಕಾಶಗಳು ಹರಸಿ ಬರ್ತಾವೆ.

ನಟಿ ಹನ್ಸಿಕಾ ಅವರು ಕೇವಲ ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲಿ ಮಾತ್ರ ಅಲ್ಲದೇ ಅಪ್ಪು ಅವರ ಜೊತೆ ಬಿಂದಾಸ್ ಸಿನಿಮಾದಲ್ಲಿ ಕೂಡ ನಟಿಸಿ ಕನ್ನಡ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದರು. ಇದುವರೆಗೆ ನಟಿ ಹನ್ಸಿಕಾ ಅವರು ಬರೋಬ್ಬರಿ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಟಿ ಹನ್ಸಿಕಾ ಅವರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಿದ್ದರಾಗಿದ್ದಾರೆ. ಹೌದು ಮುಂಬೈ ಮೂಲದ ಉದ್ಯಮಿಯೊಬ್ಬರನ್ನ ಕೈ ಹಿಡಿಯುತ್ತಿದ್ದಾರೆ. ಇದೇ ಡಿಸೆಂಬರ್ ತಿಂಗಳಲ್ಲಿ ಜೈಪುರದಲ್ಲಿರುವ ಬರೋಬ್ಬರಿ ನಲವತ್ತೈದು ವರ್ಷದ ಹಳೆಯದಾಗಿರುವ ಪ್ಯಾಲೇಸ್ ನಲ್ಲಿ ಅದ್ದೂರಿಯಾಗಿ ಮದುವೆ ಮಾಡಲು ಅವರ ಕುಟುಂಬಸ್ಥರು ಸಕಲ ಸಿದ್ದತೆ ನಡೆಸುತ್ತಿದ್ದಾರೆ. ಈ ಕಾಲದ ಬಹುತೇಕ ನಟ ನಟಿಯರು ಲವ್ ಮ್ಯಾರೇಜ್ ಅಂತ ಹೋದ್ರೇ ನಟಿ ಹನ್ಸಿಕಾ ಅವರ ಈ ಮದುವೆ ಅರೆಂಜ್ಡ್ ಮ್ಯಾರೇಜ್ ಅನ್ನೋದು ವಿಶೇಷ ಅಂತಾನೇ ಹೇಳ್ಬೋದು.

Leave a Reply

%d bloggers like this: