ತುಂಬಾ ಸಿಂಪಲ್ ಆಗಿ ಕಾಣುವ ಆಲಿಯಾ ಭಟ್ ಅವರ ಈ ಡ್ರೆಸ್ ಬೆಲೆಯಲ್ಲಿ ಮೂರು ಬೈಕ್ ಗಳನ್ನೇ ಖರೀದಿಸಬಹುದು

ಬಾಲಿವುಡ್ ಬಹು ಬೇಡಿಕೆಯ ಯುವ ನಟಿ ಆಲಿಯಾ ಭಟ್ ತೊಟ್ಟಿರೋ ಬಟ್ಟೆ ಬೆಲೆ ಕೇಳಿ ನೆಟ್ಟಿಗರು ದಂಗಾಗಿದ್ದಾರೆ. ಹೌದು ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳ ಲೈಫ್ ಸ್ಟೈಲ್ ಸಖತ್ ಬಿಂದಾಸ್ ಆಗಿ ರಿಚ್ ಆಗಿರುತ್ತದೆ. ಅವರು ಓಡಾಡುವ ಕಾರು, ಅವರ ಉಡುಗೆ ತೊಡುಗೆಗಳು ಮತ್ತು ಅವರು ಊಟ ಮಾಡುವ ರೆಸ್ಟೋರೆಂಟ್ ಗಳು ಭಾರಿ ಐಷಾರಾಮಿ ದುಬಾರಿ ಬೆಲೆಗಳದ್ದೇ ಆಗಿರ್ತಾವೆ. ಇದೇನು ಹೊಸದಲ್ಲ. ಆದರೆ ನಿರೀಕ್ಷೆಗೂ ಮೀರಿದ ಬೆಲೆಯಲ್ಲಿ ಉಡುಗೆ ತೊಡುಗೆ ತೊಟ್ಟಿರೋದನ್ನ ಕಂಡಾಗ ಅದರ ಬೆಲೆ ಕೇಳಿದಾಗ ಎಲ್ಲರ ಕಿವಿ ನೆಟ್ಟಗಾಗೋದು ಗ್ಯಾರಂಟಿ. ಇದೀಗ ಅದೇ ರೀತಿಯಾಗಿ ಎಲ್ಲರು ಹುಬ್ಬೇರಿಸುವಂತಹ ಬೆಲೆಯಲ್ಲಿ ಡ್ರೆಸ್ ಧರಿಸಿದ್ದು ಯಾರು ಅಂತೀರಾ. ಅವರು ಬೇರಾರು ಅಲ್ಲ ಖ್ಯಾತ ನಟಿ ಆಲಿಯಾ ಭಟ್. ಆಲಿಯಾ ಭಟ್ ಅವರು ಬಾಲಿವುಡ್ನ ಬಹು ಬೇಡಿಕೆಯ ನಟಿ.

ಇದೀಗ ಹಾರ್ಟ್ ಆಫ್ ಸ್ಟೋನ್ ಎಂಬ ಇಂಗ್ಲೀಷ್ ಚಿತ್ರದ ಮೂಲಕ ಹಾಲಿವುಡ್ಗೂ ಕೂಡ ಎಂಟ್ರಿ ಕೊಟ್ಟಿದ್ದಾರೆ. ಸದ್ಯಕ್ಕೆ ಮುಂದಿನ ತಿಂಗಳು ಸೆಪ್ಟೆಂಬರ್ 9ರಂದು ರಿಲೀಸ್ ಆಗುತ್ತಿರುವ ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಖತ್ ಬಿಝಿ಼ಯಾಗಿದ್ದಾರೆ. ಇದೇ ಮೊದಲ ಬಾರಿಗೆ ಪತಿ ರಣ್ ಬೀರ್ ಕಪೂರ್ ಜೊತೆ ಆಲಿಯಾ ಭಟ್ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಆಲಿಯಾ ಭಟ್ ಅವರು ತಾವು ಗರ್ಭಿಣಿ ಆಗಿದ್ರೂ ಕೂಡ ಸಿನಿಮಾ ಶೂಟಿಂಗ್ ಮತ್ತು ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರೋದು ಎಲ್ಲರು ಮೆಚ್ಚುಗೆಗೆ ಕಾರಣವಾಗಿತ್ತು.

ಅದರ ಜೊತೆಗೆ ಅವರು ಧರಿಸಿದ ಬಟ್ಟೆಗಳ ಬೆಲೆ ಕೇಳಿ ಕೂಡ ಕೆಲವರು ದಂಗಾಗಿದ್ದರು. ಹೌದು ನಟಿ ಆಲಿಯಾ ಭಟ್ ಅವರು ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದಕ್ಕೆ ಧರಿಸಿ ಬಂದಿದ್ದ ಟಾಪ್ ಬೆಲೆ ಬರೋಬ್ಬರಿ 4100 ಡಾಲರ್ ಅಂತೆ. ಅಂದರೆ ಭಾರತದ ಕರೆನ್ಸಿ ರುಪಾಯಿಯಲ್ಲಿ ಸರಿ ಸುಮಾರು 3,27,883 ಅಂತೆ. ಈ ದುಡ್ಡಲ್ಲಿ ಒಂದು ಬಟ್ಟೆ ಅಂಗಡಿನೇ ಖರೀದಿ ಮಾಡ್ಬೋದಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಆಲಿಯಾ ಭಟ್ ಧರಿಸಿದ್ದ ಈ ಡ್ರೆಸ್ ತೀರಾ ಸರಳವಾಗಿದ್ದು, ತೆಳುವಾಗಿತ್ತಂತೆ. ಆದರೂ ಕೂಡ ಈ ಟಾಪ್ ಗೆ ಇಷ್ಟೊಂದು ದುಬಾರಿ ಬೆಲೆನಾ ಅಂತ ಅನೇಕರು ಉಬ್ಬೇರಿಸಿದ್ದರು. ಸದ್ಯಕ್ಕೆ ಆಲಿಯಾ ಭಟ್ ಅವರು ಬಿಟೌನ್ ನಲ್ಲಿ ಸಿನಿಮಾ, ಬೇಬಿ ಬಂಪ್ ಫೋಟೋ ಶೂಟ್, ದುಬಾರಿ ಡ್ರೆಸ್ ಅಂತ ವಿವಿಧ ವಿಚಾರಗಳಿಗೆ ಸಖತ್ ಸುದ್ದಿಯಲ್ಲಿದ್ದಾರೆ.

Leave a Reply

%d bloggers like this: