ತುಂಬಾ ವರ್ಷಗಳ ನಂತರ ಫ್ಯಾಮಿಲಿ ಟ್ರಿಪ್ ಹೊರಟ ಚಾಲೇಂಜಿಂಗ್ ಸ್ಟಾರ್ ದರ್ಶನ್..!ಎಲ್ಲಿಗೆ ಗೊತ್ತಾ

ತುಂಬಾ ದಿನಗಳ ನಂತರ ಫ್ಯಾಮಿಲಿ ಟ್ರಿಪ್ ಹೊರಟ ಚಾಲೇಂಜಿಂಗ್ ಸ್ಟಾರ್ ದರ್ಶನ್..! ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.ಸದ್ಯಕ್ಕೆ ರಾಬರ್ಟ್ ಚಿತ್ರದ ಯಶಸ್ಸಿನ ಗುಂಗಿನಲ್ಲಿದ್ದ ದರ್ಶನ್ ಕ್ರಾಂತಿ ಸಿನಿಮಾದ ತಯಾರಿ ನಡೆಸುತ್ತಿದ್ದಾರೆ.ಈ ಚಿತ್ರದ ಪಾತ್ರಕ್ಕಾಗಿ ದರ್ಶನ್ ಅವರು ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರೆ.ಈ ಹಿಂದೆ ಯಜಮಾನ ಚಿತ್ರ ನಿರ್ಮಾಣ ಮಾಡಿದ ನಿರ್ಮಾಪಕಿ ಶೈಲಜಾ ನಾಗ್ ಈ ಕ್ರಾಂತಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಯಜಮಾನ ಚಿತ್ರವನ್ನು ನಿರ್ದೇಶನ ಮಾಡಿದ್ದ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಇದೀಗ ಮತ್ತೆ ದರ್ಶನ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನುನಿರ್ದೇಶಕ ವಿ.ಹರಿಕೃಷ್ಣ ಈ ಕ್ರಾಂತಿ ಚಿತ್ರದಲ್ಲಿ ಶಿಕ್ಷಣದ ಮಹತ್ವದ ವಿಚಾರಗಳನ್ನು ಹೇಳಲಿದ್ದಾರಂತೆ. ಈಗಾಗಲೇ ಮೂಹೂರ್ತ ಮಾಡಿಕೊಂಡಿದ್ದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರ ಮದಕರಿ ನಾಯಕ ಚಿತ್ರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಇತ್ತ ಕ್ರಾಂತಿ ಸಿನಿಮಾದ ಒಂದಷ್ಟು ಶೂಟಿಂಗ್ ಪೂರ್ವ ಯೋಜಿತ ಕೆಲಸ ಕಾರ್ಯಗಳು ನಡೆಯುತ್ತಿವೆ.ಇದರ ನಡುವೆ ಚಾಲೇಂಜಿಂಗ್ ದರ್ಶನ್ ಅವರು ತಮ್ಮ ಬಿಡುವಿನ ವೇಳೆಯನ್ನು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಹೌದು ಸಿನಿಮಾ ಶೂಟಿಂಗ್ ಅಂತೇಳಿ ಸದಾ ಬಿಝಿ.ಇರುತ್ತಿದ್ದ ದರ್ಶನ್ ಇದೀಗ ತಮ್ಮ ಪತ್ನಿ ವಿಜಯಲಕ್ಷ್ಮಿ,ಮಗ ವಿನೀಶ್ ಅವರೊಟ್ಟಿಗೆ ರಾಜ್ಯದ ವಿವಿಧ ಐತಿಹಾಸಿಕ ಪ್ರಸಿದ್ದ ಸ್ಥಳಗಳು ಮತ್ತು ಪ್ರವಾಸಿ ತಾಣಗಳು ಮತ್ತು ತಮ್ಮ ನೆಚ್ಚಿನ ಅರಣ್ಯದ ಕಡೆ ಪ್ರವಾಸ ಹೋಗಿ ಬಂದಿದ್ದಾರೆ.ತಾವು ಸಫಾರಿ ಹೋಗುವ ಜೀಪ್ ನಲ್ಲಿ ವಿನೀಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರನ್ನ ಪಕ್ಕದಲ್ಲಿ ಕೂರಿಸಿಕೊಂಡು ಸಂತೋಷವಾಗಿ ಹೋಗುತ್ತಿದ್ದ ಸಂಧರ್ಭದಲ್ಲಿ ರಸ್ತೆಯಲ್ಲಿ ಅಭಿಮಾನಿಗಳು ಅವರ ಜೀಪ್ ಅನ್ನು ಫಾಲೋ ಮಾಡಿದ್ದಾರೆ.

ವೇಗವಾಗಿ ಹೋಗುತ್ತಿದ್ದ ತಮ್ಮ ಜೀಪ್ ಅನ್ನು ಫಾಲೋ ಮಾಡುತ್ತಿದ್ದ ಅಭಿಮಾನಿಗೆ ದರ್ಶನ್ ಅವರು ಏನಾದ್ರು ಬಿದ್ದು ಹೆಚ್ಚು ಕಡಿಮೆ ಆದ್ರೇ ಯಾರ್ ಜವಾಬ್ದಾರಿ ಎಂದು ಕೊಂಚ ಜೋರಾಗಿಯೇ ಗದರಿ ಬೈದಿದ್ದಾರೆ.ಇತ್ತೀಚೆಗೆ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.ಒಟ್ಟಾರೆಯಾಗಿ ದರ್ಶನ್ ಅವರು ಆಫ್ಟರ್ ಲಾಂಗ್ ಟೈಮ್ ತಮ್ಮ ಕುಟುಂಬದ ಜೊತೆಗೆ ಲಾಂಗ್ ಡ್ರೈವ್ ಹೋಗಿ ಮಗ ವಿನೀಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಂತೋಷ ಪಡಿಸಿದ್ದಾರೆ.ಇದು ಇವರಿಗೆ ಮರೆಯಲಾಗದ ಸುಂದರ ಕ್ಷಣಗಳು ಎನ್ನಬಹುದಾಗಿದೆ.

Leave a Reply

%d bloggers like this: