ಟ್ರೋಲ್ ಪೇಜ್ ಗಳ ಕಾರಣ ಸಂಭಾವನೆ ಹೆಚ್ಚಿಸಿಕೊಂಡ ಬಿ‌.ಟಿ.ವಿ ನಿರೂಪಕಿ ‘ದಿವ್ಯಾ ವಸಂತ’, ಈಗ ಸಂಭಾವನೆ ಎಷ್ಟು ಗೊತ್ತಾ?

ಟ್ರೋಲ್ ಪೇಜ್ ಗಳಿಂದ ಬಿ‌.ಟಿ.ವಿ ನಿರೂಪಕಿ ದಿವ್ಯಾ ವಸಂತ ಅವರಿಗೆ ಭಾರಿ ಡಿಮ್ಯಾಂಡ್….! ಇತ್ತೀಚೆಗಷ್ಟೆ ಸ್ಯಾಂಡಲ್ ವುಡ್ ಖ್ಯಾತ ನಟಿ ಅಮೂಲ್ಯ ಅವರು ತಾಯಿಯಾಗುತ್ತಿರುವ ವಿಷಯವನ್ನು ಅನಗತ್ಯವಾಗಿ ದೊಡ್ಡ ವಿಚಾರ ಎಂಬಂತೆ ಬಿ.ಟಿ.ವಿ.ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ನಟಿ ಅಮೂಲ್ಯ ಅವರು ತಾಯಿ ಆಗುತ್ತಿರುವುದು ಇಡೀ ರಾಜ್ಯವೇ ಖುಷಿ ಪಡುವಂತಹ ಸುದ್ದಿ ಎಂದು ಪ್ರಸಾರ ಮಾಡಿತ್ತು.ಇದು ಸಾರ್ವಜನಿಕರಿಂದ ಮತ್ತು ಸೋಶೀಯಲ್ ಮೀಡಿಯಾದ ಅನೇಕ ಟ್ರೋಲ್ ಪೇಜ್ ಗಳ ಅಸಮಾಧಾನದ ಜೊತೆಗೆ ಮಾಧ್ಯಮದ ಗೌರವಕ್ಕೆ ತಕ್ಕ ಕಾರ್ಯಕ್ರಮಗಳಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅಮೂಲ್ಯ ಅವರು ತಾಯಿ ಆಗುತ್ತಿರುವ ಇಡೀ ರಾಜ್ಯವೇ ಖುಷಿ ಪಡುವಂತಹ ಸುದ್ದಿ ಎಂದು ಕಾರ್ಯಕ್ರಮ ಮಾಡಿದ್ದು ಬಿ.ಟಿ.ವಿ.ಡಿಜಿಟಲ್ ಹೆಡ್ ಆಗಿರುವ ನಿರೂಪಕಿ ದಿವ್ಯಾ ವಸಂತ.

ದಿವ್ಯಾ ವಸಂತ ಅವರು ಅಮೂಲ್ಯ ತಾಯಿಯಾಗುತ್ತಿರುವುದು ಇಡೀ ರಾಜ್ಯವೇ ಸಂತೋಷ ಪಡುವ ವಿಷಯ ಎಂದು ಸುದ್ದಿ ನಿರೂಪಣೆ ಮಾಡುತ್ತಿದ್ದ ಶೈಲಿ ಎಂತವರಿಗೂ ಕೂಡ ಹಾಸ್ಯವಾಗುವಂತೆ ಕಾಣುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಂತೂ ಅದರಲ್ಲೂ ಟ್ರೋಲ್ ಪೇಜ್ ಗಳಲ್ಲಿ ನಿರೂಪಕಿ ದಿವ್ಯಾ ವಸಂತ ಅವರನ್ನ ಹಿಗ್ಗಾ ಮುಗ್ಗಾ ಟ್ರೋಲ್ ಮಾಡಲಾಯಿತು. ಇದಾದ ಬಳಿಕ ತಮ್ಮ ಅತಿಯಾದ ವರ್ತನೆಯಿಂದ ಕ್ಷಮೆ ಕೋರಿ ತಮ್ಮ ಕರ್ತವ್ಯ ಮಾಡಿಕೊಂಡು ಹೋಗುತ್ತಾರೆ ಎಂದು ಭಾವಿಸಿದ್ಥವರಿಗೆ ನಿರೂಪಕಿ ದಿವ್ಯಾ ವಸಂತ ಅವರು ಇದೇ ಟ್ರೋಲ್ ಪೇಜಸ್ ಗಳನ್ನ ಇಟ್ಟುಕೊಂಡು ಮತ್ತೊಂದು ಕಾರ್ಯಕ್ರಮ ಮಾಡಿದರು.

ಈ ಕಾರ್ಯಕ್ರಮದಲ್ಲಿ ಟ್ರೋಲ್ ಪೇಜ್ ಗಳ ಬಗ್ಗೆ ಮಾತನಾಡುವ ಭರದಲ್ಲಿ ಬಿಟ್ಟಿ ನೆಟ್ ಸಿಗುತ್ತದೆ ಎಂದು ಕಮೆಂಟ್ ಮಾಡ್ತಿರಾ,ಟ್ರೋಲ್ ಪೇಜಸ್ ಗಳೇ ನಿಮ್ಮ ಬುದ್ದಿವಂತಿಕೆ ಏನು,ಪ್ರತಿಭೆ ಏನು ಎಂಬೆಲ್ಲಾ ಕೊಂಕು ಮಾತುಗಳಿಂದು ಟ್ರೋಲ್ ಪೇಜ್ ಗಳಿಗೆ ಜಾಡಿಸಿದರು. ಆದರೆ ಇಲ್ಲೂ ಕೂಡ ನಿರೂಪಕಿ ದಿವ್ಯಾ ವಸಂತ ಅವರು ಮತ್ತೆ ಟ್ರೋಲ್ ಪೇಜ್ ಗಳಿಗೆ ನೆಟ್ಟಿಗರಿಗೆ ಆಹಾರವಾದರು. ದಿವ್ಯಾ ವಸಂತ ಅವರು ಬಿಟ್ಟಿ ನೆಟ್ ಎಂಬುದನ್ನ ಮಾತಾಡಿದ್ದಕ್ಕೆ ಬಿಟ್ಟಿ ನೆಟ್ ಯಾರ್ ಕೊಡ್ತಾರೆ ಎಂದು ನೆಟ್ಟಿಗರು ಮತ್ತು ಟ್ರೋಲ್ ಪೇಜಸ್ ಗಳು ತರಾಟೆಗೆ ತೆಗೆದುಕೊಂಡರು. ಇತ್ತ ದಿವ್ಯಾ ವಸಂತ ಅವರು ಮಾತ್ರ ಯಾರು ಎಷ್ಟಾದರು ಏನಾದರು ತನ್ನ ಬಗ್ಗೆ ಟ್ರೋಲ್ ಮಾಡಿಕೊಳ್ಳಲಿ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ರೀಲ್ಸ್ ಮಾಡಿಕೊಂಡು ತಮ್ಮ ಒಂದಷ್ಟು ಫೋಟೋಗಳನ್ನ ಅಪ್ಲೋಡ್ ಮಾಡುತ್ತಿದ್ದಾರೆ.

ಇದರ ನಡುವೆ ಶಾಕಿಂಗ್ ವಿಚಾರ ಅಂದರೆ ಟಿವಿ ನಿರೂಪಕಿ ದಿವ್ಯಾ ವಸಂತ ಅವರಿಗೆ ಇಷ್ಟೆಲ್ಲಾ ಟ್ರೋಲ್ ಮಾಡಿದ ಟ್ರೋಲ್ ಪೇಜಸ್ ಗಳೇ ಬಂಪರ್ ಆಫರ್ ಕೊಟ್ಟಂಗಾಯ್ತು ಅನ್ನಬಹುದು. ಏಕೆಂದರೆ ದಿವ್ಯಾ ವಸಂತ ಅವರ ಜನಪ್ರಿಯತೆ ಎಲ್ಲೆಡೆ ಜೋರಾಗಿದೆ.ಇದೇ ಜನಪ್ರಿಯತೆಯನ್ನ ಉತ್ತಮವಾಗಿ ಬಳಸಿಕೊಂಡ ದಿವ್ಯಾ ವಸಂತ ತಮ್ಮ ಸಂಭಾವನೆಯನ್ನ ಏರಿಕೆ ‌ಮಾಡಿಕೊಂಡಿದ್ದಾರಂತೆ. ಸುದ್ದಿವೊಂದನ್ನ ಓದಲು ಮೂರು ಸಾವಿರ ಪಡೆಯುತ್ತಿದ್ದ ದಿವ್ಯಾ ವಸಂತ ಅವರಿಗೆ ಇದೀಗ ಐದು ಸಾವಿರ ರೂ. ನೀಡಲಾಗುತ್ತಿದೆಯಂತೆ.ಹೀಗಂತಾ ಇನ್ನೊಂದಷ್ಟು ಟ್ರೋಲ್ ಪೇಜ್ ಗಳೇ ಟ್ರೋಲ್ ಮಾಡುತ್ತಿವೆ.

ಆದರೆ ದಿವ್ಯಾ ವಸಂತ ಅವರಿಗೆ ಬಿಟಿವಿ ನಿಜವಾಗಲೂ ಸಂಭಾವನೆಯನ್ನು ಏರಿಸಿದ್ದಾರಾ ಎಂಬುದು ಮಾತ್ರ ತಿಳಿದು ಬಂದಿಲ್ಲ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: