ಟ್ರೊಲ್ ಗಳಿಂದ ಮನನೊಂದು ಕೊನೆಗೂ ಪ್ರತಿಕ್ರಿಯಿಸಿದ ರಶ್ಮಿಕಾ ಮಂದಣ್ಣ ಅವರು

ಟ್ರೋಲರ್ಸ್ ಬಗ್ಗೆ ಕೊನೆಗೂ ಮೌನ ಮುರಿದು ರಿಯಾಕ್ಟ್ ಮಾಡಿದ ರಶ್ಮಿಕಾ ಮಂದಣ್ಣ! ಅರೇ ಇದೇನಪ್ಪಾ ರಶ್ಮಿಕಾ ಮಂದಣ್ಣ ಕೊನೆಗೂ ರಿಯಾಕ್ಟ್ ಮಾಡಿದ್ರಾ. ರಶ್ಮಿಕಾ ಮಂದಣ್ಣ ಯಾವುದರ ಬಗ್ಗೆ ಏನಂತ ರಿಯಾಕ್ಟ್ ಮಾಡಿದ್ದಾರೆ. ಅದೇನು ಇದ್ದಕಿದ್ದಂತೆ ರಶ್ಮಿಕಾ ಮಂದಣ್ಣ ಅವರು ಮತ್ತೆ ಯಾಕ್ ಸುದ್ದಿಯಾಗಿದ್ದಾರೆ ಅನ್ನೋದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಕನ್ನಡ ಮಾತ್ರ ಅಲ್ಲದೇ ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಖ್ಯಾತ ನಟರ ಜೊತೆಗೆ ತೆರೆ ಹಂಚಿಕೊಂಡು ಭಾರತೀಯ ಸಿನಿರಂಗದ ಸುಪ್ರಸಿದ್ದ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಎಷ್ಟು ಪ್ರಸಿದ್ದತೆ ಪಡೆದುಕೊಂಡರೋ ಅಷ್ಟೇ ಪ್ರಮಾಣದಲ್ಲಿ ನಕರಾತ್ಮಕವಾಗಿ ಟೀಕೆ ಟ್ರೋಲ್ ಗೆ ಒಗಗಾಗಿದ್ದಾರೆ ಈಗಲೂ ಟ್ರೋಲ್ ಪೇಜ್ ಗಳಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಈ ಟ್ರೋಲ್ ಕಾಟ ಅನ್ನೋದು ಮಾತ್ರ ತಪ್ಪಿದ್ದಲ್ಲ.

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಗೊತ್ತೋ, ಗೊತ್ತಿಲ್ಲದೆ ನಡೆದುಕೊಂಡ ಅವರ ವರ್ತನೆ, ವ್ಯಕ್ತಿತ್ವದ ಬಗ್ಗೆ ಅನೇಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಲೇ ಇದೆ. ಆದರೆ ರಶ್ಮಿಕಾ ಮಂದಣ್ಣ ಮಾತ್ರ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಬಗ್ಗೆ ಆಗ್ತಿರೋ ಅನಗತ್ಯ ಟ್ರೋಲ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡ್ಕೊಂಡ್ ಆರಾಮಾಗಿದ್ರು. ಆದ್ರೇ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ತನ್ನ ಬಗ್ಗೆ ಅನಗತ್ಯ ಅಸಂಬದ್ದ ಕೆಟ್ಟದಾಗಿ ಟೀಕೆ ಟಿಪ್ಪಣಿ ಟ್ರೋಲ್ ಮಾಡ್ತಿದ್ದವರಿಗೆ ಧೀರ್ಘ ಪತ್ರ ಬರೆದು ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಈ ಒಂದು ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಾಗಿದ್ರೇ ರಶ್ಮಿಕಾ ಮಂದಣ್ಣ ಅವರು ಏನಂತ ಪೋಸ್ಟ್ ಮಾಡಿದ್ದಾರೆ ಅನ್ನೋದನ್ನ ತಿಳಿಯೋಣ.

ತಮ್ಮ ಪೋಸ್ಟ್ ನಲ್ಲಿ ರಶ್ಮಿಕಾ ಮಂದಣ್ಣ ಅವರು ಕಳೆದ ಕೆಲವು ವರ್ಷಗಳಿಂದ ನನಗೆ ಒಂದಷ್ಟು ವಿಚಾರಗಳು ಬಿಟ್ಟು ಬಿಡದೆ ಕಾಡುತ್ತಿವೆ. ಇಲ್ಲಿಯವರೆಗೆ ನಾನು ಎಲ್ಲಿಯೂ ಸಹ ರಿಯಾಕ್ಟ್ ಮಾಡಿರಲಿಲ್ಲ. ಅದಕ್ಕೆ ನನಗೆ ಸಮಯವೂ ಸಹ ಒದಗಿಬಂದಿರಲಿಲ್ಲ. ಆದರೆ ಈಗ ಎಲ್ಲಾದಕ್ಕೂ ಉತ್ತರ ನೀಡುವ ಸಂಧರ್ಭ ಬಂದಿದೆ. ನನ್ನ ಫಿಲ್ಮ್ ಕೆರಿಯರ್ ನಲ್ಲಿ ನನಗೆ ತುಂಬಾ ನಕರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ಅದು ನನ್ನ ಬಗ್ಗೆ ಅವರಿಗೆ ಇರುವ ಅವರ ಅಭಿಪ್ರಾಯ. ಅದು ಒಬ್ಬ ವ್ಯಕ್ತಿಯ ಬಗ್ಗೆ ಅವರಿಗೆ ಇರುವ ಅನಿಸಿಕೆ. ಒಬ್ಬ ವ್ಯಕ್ತಿ ಎಲ್ಲಾರಿಗೂ ಇಷ್ಟ ಆಗುವಂತೆ ನಡೆದುಕೊಳ್ಳೋದಕ್ಕೆ ಸಾಧ್ಯವಿಲ್ಲ. ಎಲ್ಲಾರು ಕೂಡ ನನ್ನನ್ನ ಇಷ್ಟ ಪಡಬೇಕು ಅಂತ ನಾನು ನಿರೀಕ್ಷೆ ಕೂಡ ಮಾಡೋದಿಲ್ಲ. ಮಾಡಲುಬಾರದು. ನಾನು ಆಯ್ಕೆ ಮಾಡಿಕೊಂಡಿರೋ ವೃತ್ತಿಯ ಬಗ್ಗೆ ಹೆಮ್ಮೆ ಇದೆ. ನಾನು ನಿಮ್ಮನ್ನ ಮನರಂಜಿಸಲು ದಿನದಿಂದ ದಿನಕ್ಕೆ ನನ್ನನ್ನ ನಾನು ತಯಾರಿ ಮಾಡಿಕೊಳ್ಳುತ್ತಲೇ ಇರ್ತೇನೆ.

ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ನನ್ನ ಬಗ್ಗೆ ಪೂರ್ವಪರ ತಿಳಿದುಕೊಳ್ಳದೇ ಅನಗತ್ಯವಾಗಿ ಕೆಟ್ಟದಾಗಿ ಟ್ರೋಲ್ ಮಾಡಲಾಗ್ತಿದೆ. ಈ ರೀತಿಯ ಬೆಳವಣಿಗೆಗಳು ನನ್ನನ್ನ ತುಂಬಾ ಸಲ ಯೋಚನೆಗೀಡು ಮಾಡಿವೆ. ಯಾಕಂದ್ರೆ ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಮಾಡೋ ಕೆಲವು ಟೀಕೆ ಟ್ರೋಲ್ ಗಳು ನನ್ನ ವೃತ್ತಿ ಜೀವನ ಮತ್ತು ಕೌಟಂಬಿಕವಾಗಿಯೂ ಸಹ ನನ್ನ ಮೇಲೆ ನಕರಾತ್ಮಕ ಪರಿಣಾಮ ಬೀರಿದೆ. ಆದರೆ ನಕರಾತ್ಮಕ ಅನಿಸಿಕೆ ಅಭಿಪ್ರಾಯಗಳನ್ನ ನಾನು ನನ್ನನ್ನ ತಿದ್ದಿಕೊಳ್ಳೋದಕ್ಕೆ ಅಂತ ನಾನು ನನ್ನ ಕೆಲವು ನಡೆಗಳನ್ನ ಬದಲಾಯಿಸಿಕೊಂಡಿದ್ದೇನೆ. ನನ್ನ ಬಗ್ಗೆ ಟ್ರೋಲ್ ಮಾಡೋವ್ರ ಬಗ್ಗೆ ಇದುವರೆಗೆ ನಾನು ರಿಯಾಕ್ಟ್ ಮಾಡಿರಲಿಲ್ಲ. ಆದರೆ ಈಗ ಪ್ರತಿಕ್ರಿಯಿಸಲು ಅನಿವಾರ್ಯವಾಯಿತು ಎಂದು ತಮ್ಮ ಇಷ್ಟು ದಿನಗಳ ಮೌನ ಮುರಿದಿದ್ದಾರೆ ರಶ್ಮಿಕಾ. ನಟಿ ರಮ್ಯಾ ಅವರು ಕೂಡ ರಶ್ಮಿಕಾ ಮಂದಣ್ಣ ಅವರ ಪೋಸ್ಟ್ ಶೇರ್ ಮಾಡ್ಕೊಂಡು ಅವರ ಪಾಡಿಗೆ ಅವರನ್ನ ಇರಲು ಬಿಡಿ ಬರೆದು ರಶ್ಮಿಕಾ ಮಂದಣ್ಣ ಅವರಿಗೆ ಬೆಂಬಲ ನೀಡಿದ್ದಾರೆ.

Leave a Reply

%d bloggers like this: