‘ತ್ರಿಪುರ ಸುಂದರಿಯಾಗಿ’ ಕನ್ನಡ ಕಿರುತೆರೆಗೆ ಕಾಲಿಡುತ್ತಿದ್ದಾರೆ ಬಿಗ್ ಬಾಸ್ ಕನ್ನಡದ ಪ್ರಸಿದ್ಧ ನಟಿ

ಇತ್ತೀಚೇಗೆ ಕನ್ನಡ ಕಿರುತೆರೆಯಲ್ಲಿ ಅನೇಕ ಹೊಸ ಧಾರಾವಾಹಿಗಳು ಭಾರಿ ಸದ್ದು ಮಾಡುತ್ತಿವೆ. ಸಿನಿಮಾ ಕ್ಷೇತ್ರ ಯಾವ ಮಟ್ಟಿಗೇ ಮೇಕಿಂಗ್ ನಲ್ಲಿ ಸದ್ದು ಮಾಡುತ್ತಿದ್ದಿಯೋ ಅದೇ ರೀತಿಯಾಗಿ ಕಿರುತೆರೆ ಕೂಡ ನಾವು ಕೂಡ ಯಾರಿಗೂ, ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಅದ್ದೂರಿಯಾಗಿಯೇ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಅದ್ದೂರಿತನದ ಮೇಕಿಂಗ್ ಮೂಲಕ ಕನ್ನಡ ಕಿರುತೆರೆಯಲ್ಲಿ ತ್ರಿಪುರ ಸುಂದರಿ ಎಂಬ ಹೊಸ ಧಾರಾವಾಹಿ ಗಮನ ಸೆಳೆದಿದೆ. ಈ ತ್ರಿಪುರ ಸುಂದರಿ ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ಬಿಗ್ ಬಾಸ್ ಸೀಸನ್8 ಸ್ಪರ್ಧಿಯಾಗಿ ಎಲ್ಲರ ಮನ ಗೆದ್ದಿದ್ದ ನಟಿ ದಿವ್ಯ ಸುರೇಶ್ ಅವರು ನಟಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಕಿರುತೆರೆಯಲ್ಲಿ ಅಪಾರ ಪ್ರಸಿದ್ದತೆ ಪಡೆದುಕೊಂಡಿರುವ ವಾಹಿನಿಯಾಗಿ ನಾಡಿನಾದ್ಯಂತ ಮನೆ ಮನಗಳಲ್ಲಿ.

ಹೆಸರುವಾಸಿಯಾಗಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ತ್ರಿಪುರ ಸುಂದರಿ ಧಾರಾವಾಹಿ ಪ್ರಸಾರವಾಗಲಿದೆ. ಈಗಾಗಲೇ ತ್ರಿಪುರ ಸುಂದರಿ ಧಾರಾವಾಹಿಯ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಧಾರಾವಾಹಿ ವೀಕ್ಷಕರ ಎದುರಿಗೆ ಬರಲಿದೆ. ಈ ಹಿಂದೆ ನಟಿ ದಿವ್ಯಾ ಸುರೇಶ್ ಅವರು ಆಲ್ಬಂ ಸಾಂಗ್ ವೊಂದರಲ್ಲಿ ನಾಗಿಣಿಯಾಗಿ ಸಖತ್ ಆಗಿ ಮಿಂಚಿದ್ದರು. ಅವರಿಗೆ ಈ ಆಲ್ಬಂ ಸಾಂಗ್ ಮಾಡಿದಾಗಿನಿಂದ ಸಂಪೂರ್ಣವಾಗಿ ನಾಗಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮಹಾದಾಸೆಯನ್ನ ಹೊಂದಿದ್ದರಂತೆ. ಅದರಂತೆ ಇದೀಗ ನಾಗಿಣಿ ಕಥಾ ಹಂದರ ಹೊಂದಿರುವ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ದಿವ್ಯಾ ಸುರೇಶ್ ಅವರು ನಾಗಿಣಿ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೀಗಾಗಿ ತನ್ನ ಇಷ್ಟದ ಪಾತ್ರ ಸಿಕ್ಕ ಹಿನ್ನೆಲೆಯಲ್ಲಿ ದಿವ್ಯಾ ಸುರೇಶ್ ಅವರು ತಮ್ಮ ಪಾತ್ರಕ್ಕಾಗಿ ಭಾರಿ ಕಸರತ್ತನ್ನ ಮಾಡುತ್ತಿದ್ದಾರೆ. ಹೌದು ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಒಂದಷ್ಟು ಸಾಹಸಮಯ ಸನ್ನಿವೇಶಗಳು ಇರುವುದರಿಂದ ದಿವ್ಯಾ ಸುರೇಶ್ ಅವರು ಕೆಲವು ಸ್ಟಂಟ್ ಗಳನ್ನು ಕೂಡ ಮಾಡಬೇಕಾಗಿದೆಯಂತೆ. ಇನ್ನು ಈಗಾಗಲೇ ಕನ್ನಡ ಕಿರುತೆರೆಯಲ್ಲಿ ನಾಗಿಣಿ ಕಥಾಹಂದರ ಹೊಂದಿರುವ ಧಾರಾವಾಹಿಗಳು ಭಾರಿ ಜನಪ್ರಿಯವಾಗಿ ಮೂಡಿ ಬಂದಿವೆ. ಇದೀಗ ಕಲರ್ಸ್ ಕನ್ನಡದ ಮೂಲಕ ಮತ್ತೊಂದು ನಾಗಿಣಿ ಧಾರಾವಾಹಿ ತ್ರಿಪುರ ಸುಂದರಿಯಾಗಿ ಕಿರುತೆರೆ ವೀಕ್ಷಕರನ್ನ ಎಷ್ಟರ ಮಟ್ಟಿಗೆ ಮನರಂಜಿಸಿ ಯಶಸ್ಸು ಪಡೆಯಲಿದೆ ಎಂಬುದನ್ನ ಕಾದು ನೋಡಬೇಕಾಗಿದೆ.

Leave a Reply

%d bloggers like this: