ನಮ್ಮ ದೇಶದ ಟ್ರಾಫಿಕ್ ಸಂಚಾರಿ ನಿಯಮ ನೋಡಿ ಬೆಚ್ಚಿಬಿದ್ದು ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರಾ! ಯಾವ ಊರಿನಲ್ಲಿ ಗೊತ್ತಾ

ಮಹೇಂದ್ರ ಮೋಟಾರ್ಸ್ ಕಂಪನಿಯ ಮುಖ್ಯಸ್ಥರಾದ ಆನಂದ್ ಮಹೀಂದ್ರಾ ಅವರು ಸಂಚಾರಿ ನಿಯಮ ಪಾಲಿಸುವ ಕುರಿತ ಪೋಟೊ ವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಹಾಗಾದರೆ ಆನಂದ್ ಮಹೀಂದ್ರಾ ಅವರು ಮಾಡಿದ ಆ ಟ್ವೀಟ್ ಏನು, ಟ್ವೀಟ್ ನಲ್ಲಿನ ಆ ಸಂದೇಶ ಏನು ಎಂಬುದನ್ನು ತಿಳಿಯೋಣ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಪ್ರಸಿದ್ದ ಉದ್ಯಮಿ ಆಗಿ ಬೆಳೆದಿರುವ ಆನಂದ್ ಮಹೀಂದ್ರಾ ಅವರ ಮಹೀಂದ್ರಾ ಮೋಟಾರ್ಸ್ ದೇಶದ ಕಾರು ತಯಾರಕ ಕಂಪನಿ ಕೂಡ ಪ್ರಮುಖವಾಗಿದೆ. ಆನಂದ್ ಮಹೀಂದ್ರಾ ಅವರು ತಮ್ಮ ಉದ್ಯ‌ಮದ ಜೊತೆಗೆ ಹೆಚ್ಚು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ಇರುತ್ತಾರೆ. ಇತ್ತೀಚೆಗೆ 2021ರ ಸಾಲಿನ ರಿಯೋ ಒಲಂಪಿಕ್ ನಲ್ಲಿ ಭಾರತ ದೇಶಕ್ಕೆ ಚಿನ್ನ,ಬೆಳ್ಳಿ ಮತ್ತು ಕಂಚು ಪದಕಗಳನ್ನು ಪಡೆಯುವ ಮೂಲಕ ಭಾರತ ದೇಶಕ್ಕೆ ಕೀರ್ತಿ ತಂದ ಕ್ರೀಡಾ ಪಟುಗಳಿಗೆ ತಮ್ಮ ಸಂಸ್ಥೆಯ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸಾಮಾಜಿಕ ಬದ್ಧತೆ ಮತ್ತು ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ಬೆಂಬಲ ಸೂಚಿಸಿದ್ದರು.

ಇಂತಹ ಒಂದಷ್ಟು ಸಾಮಾಜಿಕ ಕಾರ್ಯಗಳ ಮೂಲಕ ಆನಂದ್ ಮಹೀಂದ್ರಾ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಇವರು ಸುದ್ದಿ ಆಗಿರುವುದು ಬೇರೆ ರಾಜ್ಯದಲ್ಲಿ ಅಲ್ಲಿನ ಜನರು ಟ್ರಾಫಿಕ್ ರೂಲ್ಸ್ ಗಳನ್ನು ಎಷ್ಟರ ಮಟ್ಟಿಗೆ ಶಿಸ್ತು ಬದ್ಧವಾಗಿ ನಿರ್ವಹಿಸುತ್ತಾರೆ ಎಂಬ ಸಂದೇಶ ನೀಡುವ ಫೋಟೋ ಪೋಸ್ಟ್ ಟ್ವೀಟ್ ಮಾಡುವ ಮೂಲಕ. ಹೌದು ಇತ್ತೀಚೆಗೆ ಆನಂದ್ ಮಹೀಂದ್ರಾ ಅವರು ಮೀಜೋರಾಂ ಗೆ ತೆರಳಿದ್ದಾರೆ. ಅಲ್ಲಿ ಮೀಜೋರಾಂ ನಗರದ ರಸ್ತೆಯೊಂದರ ಟ್ರಾಫಿಕ್ ನಲ್ಲಿ ಆನಂದ್ ಮಹೀಂದ್ರಾ ಅವರು ಇದ್ದಾರೆ. ಅಲ್ಲಿನ ಜನರು ಜೀಬ್ರಾ ಕ್ರಾಸ್ ದಾಟದೆ ತುಂಬಾ ಕಟ್ಟು ನಿಟ್ಟಾಗಿ ಅನುಸರಿಸುವ ಫೋಟೋವೊಂದನ್ನ ತಮ್ಮ ಟ್ವಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಆನಂದ್ ಮಹೀಂದ್ರಾ ಅವರು ಶೇರ್ ಮಾಡಿರುವ ಪೋಟೋದಲ್ಲಿ ಎರಡು ಬದಿಯಲ್ಲಿ ಚಲಿಸುವ ರಸ್ತೆ ಗೆ ನಡುವೆ ಹಾಕಲಾಗಿರುವ ಬಿಳಿ ಬಣ್ಣದ ರೇಖೆಯನ್ನ ಯಾವ ವಾಹನ ದಾಟಿಲ್ಲ.

ಸರತಿ ಸಾಲಿನಲ್ಲಿ ನಿಂತು ಎಲ್ಲಾ ವಾಹನ ಸವಾರರು ಸಂಚಾರಿ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ. ಈ ಮೀಜೋರಾಂ ನಲ್ಲಿ ಸಂಚಾರಿ ಪೊಲೀಸರು ಎಂ. ಎಲ್.ಎ ಕೂಡ ಟ್ರಾಫಿಕ್ ರೂಲ್ಸ್ ಫಾಲೋ ಮಾಡುವಂತೆ ತಾಕೀತು ಮಾಡುತ್ತಾರಂತೆ. ಕೂಡ ಈ ದೃಶ್ಯವೊಂದು ಆನಂದ್ ಮಹೀಂದ್ರಾ ಅವರಿಗೆ ಇಷ್ಟವಾಗಿ ಪೋಟೋ ಸೆರೆ ಹಿಡಿದು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆನಂದ್ ಮಹೀಂದ್ರಾ ಅವರು ಪೋಸ್ಟ್ ಮಾಡಿದ ಈ ಪೋಟೋ ಗೆ ಬರೋಬ್ಬರಿ ನಲವತ್ತೆರಡು ಸಾವಿರಕ್ಕೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ಈ ಪೋಟೋಗೆ ಮೀಜೋರಾಂ ಜನತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: