ತಿರುಪತಿಯಲ್ಲಿ ಹಿಂದೆಂದೂ ಆಗದ ಜಲಪ್ರಳಯ ಈಗ ಆಗಿದ್ದು ಈ ಒಂದು ಕಾರಣಕ್ಕೆ! ದೇವಸ್ಥಾನದಲ್ಲಿ ಆಗಿದ್ದಾದ್ರೂ ಏನು ಗೊತ್ತಾ?

ಭಾರತ ದೇಶದ ಅತ್ಯಂತ ಪ್ರಸಿದ್ದ ಶ್ರೀಮಂತ ದೇವಾಲಯಗಳಲ್ಲಿ ಪ್ರಮುಖವಾದ ತಿರುಪತಿ ತಿರುಮಲದಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದ ಜಲ ಪ್ರಳಯವಾಗಿ ಇಡೀ ತಿರುಮಲದಲ್ಲಿ ಜಲಾವೃತಗೊಂಡಿದೆ. ತಿರುಪತಿ ನಗರದ ಎಲ್ಲಾ ಭಾಗಗಳಲ್ಲಿ ಸಂಪೂರ್ಣ ಜಲ ದಿಗ್ಭಂದನವಾಗಿದ್ದು, ನಗರ ಅಸ್ತ್ಯವ್ಯಸ್ತವಾಗಿದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ತಿರುಪತಿಯಿಂದ ತಿರುಮಲಕ್ಕೆ ಕಾಲುದಾರಿಯಲ್ಲಿ ಸಾಗುವ ಅಲಿಪಿರಿಯಲ್ಲಿ ಅತಿಯಾದ ಗಾಳಿ ಮಳೆಯಿಂದಾಗಿ ಮೇಲ್ಚಾವಣೆ ಮತ್ತು ತಡೆಗೋಡೆಗಳು ಛಿದ್ರವಾಗಿ ಅವಶೇಷವಾಗಿ ಬಿದ್ದಿವೆ. ವರ್ಷ ವರ್ಷ ಎಂದಿನಂತೆ ಮಳೆ ಬರುತ್ತದೆ. ಕೆಲವೊಮ್ಮೆ ಅತಿಯಾದ ಭೀಕರ ಮಳೆ ಆದಾಗಲೂ ಕೂಡ ತಿರುಮಲದಲ್ಲಿ ವ್ಯಕ್ತಿಯನ್ನೇ ಕೊಚ್ಚಿಕೊಂಡು ಹೋಗುವಂತಹ ಪರಿಯಲ್ಲಿ ಜವರಾಯ ವರ್ತಿಸಿರಲಿಲ್ಲ. ಕಳೆದೊಂದು ವಾರದಿಂದ ರಾಜ್ಯವನ್ನು ಸೇರಿದಂತೆ ದೇಶದ ನಾನಾ ಭಾಗಗಗಲ್ಲಿ ಅತೀವೃಷ್ಟಿ ಸಂಭವಸಿದೆ.

ತಿರುಮಲದಲ್ಲಿಯಂತೂ ಹಗಲು-ರಾತ್ರಿ ಎನ್ನದೇ ಎಡಬಿಡದೇ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ತಿರುಪತಿ ತಿಮ್ಮಪ್ಪನ ಬೆಟ್ಟದಿಂದ ಹರಿದು ಬರುವ ಕಪಿಲ ತೀರ್ಥ ಜಲಪಾತ ಭೋರ್ಗೆರೆದು ಅಪಾಯಕಾರಿಯಾಗಿ ಧುಮುಕುತ್ತಿದೆ. ತಿರುಮಲದ ಒಳಾಂಗಣ ಸಂಪೂರ್ಣ ಜಲ ದಿಗ್ಭಂದನವಾಗಿದ್ದು ದೇವಾಲಯದ ಆವರಣಗಳು ನೀರಿನಿಂದ ಸಂಪೂರ್ಣ ಆವೃತವಾಗಿವೆ. ಪರಿಸ್ಥಿತಿ ಕೈ ಮೀರಿದರೆ ತಿರುಮಲದಲ್ಲಿ ಏನು ಸಂಭವಿಸುತ್ತದೆ ಎಂಬುದನ್ನು ಯಾರು ಕೂಡ ನಿರೀಕ್ಷೆ ಮಾಡಲಾಗದಷ್ಟು ಅಹಿತಕರ ಘಟನೆಗೆ ತಿರುಮಲ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ. ವೈಜ್ಞಾನಿಕವಾಗಿ ಬಂಗಾಳದಲ್ಲಿ ವಾಯುಭಾರ ಕುಸಿತದಿಂದಾಗಿ ಅಪಾರ ಪ್ರಾಮಾಣದ ಮಳೆಯಾಗುತ್ತಿದೆ ಎಂದು ಹೇಳಲಾಗುತ್ತಿದ್ದರು ಕೂಡ ಇಲ್ಲಿನ ಭಕ್ತರು ಸ್ಥಳೀಯರು ಜಲ ಪ್ರಳಯವಾಗುವುದಕ್ಕೆ ಬೇರೆಯದ್ದೇ ಕಾರಣ ನೀಡುತ್ತಿದ್ದಾರೆ.

ಅದೇನಪ್ಪಾ ಅಂದರೆ ಇತ್ತೀಚೆಗೆ ವಿಶೇಷವಾಗಿ ಅಪೂರ್ವವಾದಂತಹ ಚಂದ್ರ ಗ್ರಹಣ ಸಂಭವಿಸಿತ್ತು.ಈ ಸಂಧರ್ಭದಲ್ಲಿ ಪೂಜಾರಿಗಳು ತಿಮ್ಮಪ್ಪನಿಗೆ ಪೂಜೆ ಮಾಡಬಾರದಾಗಿತ್ತು. ಆದರೆ ಅಲ್ಲಿನ ಪೂಜಾರಿಗಳು ತಿಮ್ಮಪ್ಪನಿಗೆ ಅಂದು ಚಂದ್ರಗ್ರಹಣ ದಿನದಂದೇ ಪೂಜೆ ಮಾಡಿ ತಿಮ್ಮಪ್ಪನ ಅವಕೃಪೆಗೆ ಕಾರಣರಾಗಿದ್ದಾರೆ.ಇಷ್ಟೆಲ್ಲಾ ಅನಾಹುತಕ್ಕೆ ಪೂಜಾರಿಗಳ ಎಡವಟ್ಟಿನ ಕೆಲಸವೇ ಕಾರಣ ಅಂದು ತಿರುಮಲದ ಪೂಜಾರಿಗಳ ವಿರುದ್ದ ಭಕ್ತರು, ಸ್ಥಳೀಯರು ಅಸಮಾಧಾನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

%d bloggers like this: