ತಿಮಿಂಗಲದ ವಾಂತಿಯ ರೇಟ್ ಎಷ್ಟು ಗೊತ್ತಾ? ಇದಕ್ಕೆ ಇಷ್ಟೊಂದು ಬೆಲೆ ಏಕೆ ಗೊತ್ತಾ? ಇದನ್ನು ಏನಕ್ಕೆ ಉಪಯೋಗಿಸುತ್ತಾರೆ ಗೊತ್ತಾ? ನೋಡಿ ಒಮ್ಮೆ

ನಮ್ಮ ಸುತ್ತ ಮುತ್ತ ನಮಗೆ ತಿಳಿಯದ ಎಷ್ಟೋ ವಿಷಯಗಳು ನಡೆಯುತ್ತಲೇ ಇರುತ್ತವೆ. ಕೆಲವು ವಿಸ್ಮಯಕಾರಿ ಸಂಗತಿಗಳು ನಮ್ಮನ್ನು ಆಶ್ಚರ್ಯ ಚಕಿತಕ್ಕೊಳಪಡಿಸಬಹುದು. ಕೆಲವು ಕುತೂಹಲಕ್ಕೆರಳಿಸಿ ಅವುಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಆಲೋಚನೆಗೆ ಒಳಪಡಿಸಬಹುದು. ಅಂತಹದ್ದೇ ಒಂದು ವಿಚಾರ ಇದೀಗ ಬೆಳಗಿಕೆ ಬಂದಿದೆ. ಹೌದು ನಮಗೆ ವಜ್ರ,ವೈಢೂರ್ಯ,ಆಸ್ತಿ, ದುಬಾರಿ ವಸ್ತುಗಳಿಗೆ ದುಬಾರಿ ಬೆಲೆ ಇರುತ್ತದೆ ಎಂಬುದು ಗೊತ್ತಿದೆ. ಆದರೆ ವಾಂತಿಗೂ ಕೂಡ ಇಷ್ಟು ಅಪಾರ ಬೇಡಿಕೆ ಮತ್ತು ದುಬಾರಿ ಬೆಲೆ ಇರುತ್ತದೆ ಎಂದರೆ ನಿಜಕ್ಕೂ ಕೂಡ ಒಮ್ಮೆಲೆ ಮೈ ರೋಮಾಂಚನವಾಗುತ್ತದೆ. ಹಾಗಾದರೆ ಯಾರ ಯಾವ ವಾಂತಿಗೆ ಇಷ್ಟೊಂದು ಬೆಲೆ ಅಂತೀರಾ ಸಮುದ್ರದಲ್ಲಿರುವ ತಿಮಿಂಗಲಗಳು ಮಾಡುವ ವಾಂತಿಗೆ ಕೋಟಿ ಕೋಟಿ ಬೆಲೆಯಿದೆಯಂತೆ. ಕೇವಲ ಈ ತಿಮಿಂಗಲದ ವಾಂತಿಗೆ ಇಷ್ಟೊಂದು ಬೆಲೆ ಏಕೆ. ಅಷ್ಟೊಂದು ಹಣ ಬೆಲೆ ಬಾಳುವುದಾದರೆ ಅದರಲ್ಲಿ ಅಂತಾದ್ದೇನಿದೆ ಎಂಬೆಲ್ಲಾ ಪ್ರಶ್ನೆಗಳು ನಮಗೆ ಬರುತ್ತದೆ.

ಇದಕ್ಕೂ ಪ್ರಮುಖ ಕಾರಣಗಳು ಸಮುದ್ರದಲ್ಲಿರುವ ಮೀನು ಮತ್ತು ತಿಮಿಂಗಿಲಗಳಲ್ಲಿ ಬೆಲೆ ಬಾಳುವಂತಹ ವಜ್ರ , ಮುತ್ತು, ಹವಳಗಳು ದೊರೆಯುತ್ತವೆ. ಅಂತೆಯೇ ಕಳೆದ ವರ್ಷ ಮೀನುಗಾರರಿಗೆ ಒಂದು ಅಮೂಲ್ಯವಾದ ವಸ್ತು ಸಿಗುತ್ತದೆ. ತಿಮಿಂಗಲ ಮಾಡಿದ ವಾಂತಿಯಲ್ಲಿ ಆಂಬಾ ಗ್ರೀಸ್ ಎಂಬ ದ್ರವ ಸಿಗುತ್ತದೆ. ಇದು ತಿಮಿಂಗಿಲದ ಹೊಟ್ಟೆಯ ಕರುಳಿನಲ್ಲಿ ಬೈಲ್ ಡಕ್ಟ್ ಎಂಬ ಜೀರ್ಣ ರಸದಿಂದ ಉತ್ಪತ್ತಿಯಾಗುತ್ತದೆ. ಅಂಬಾ ಗ್ರೀಸ್ ದ್ರವ ಸಿಕ್ಕಿದ್ದು ಸ್ಟರ್ಡ್ ಎಂಬ ಜಾತಿಯ ತಿಮಿಂಗಲದ ವಾಂತಿಯ ಮೂಲಕ.ಈ ವಾಂತಿಗೆ ಭಾರಿ ಬೇಡಿಕೆ ಉಂಟಾಗಲು ಪ್ರಮುಖ ಕಾರಣ ಅಂದರೆ ಈ ವಾಂತಿಯಲ್ಲಿರುವ ಆಂಬಾ ಗ್ರೀಸ್ ದ್ರವವನ್ನು ಮಧ್ಯಪಾನ ತಯಾರಿಕೆಯಲ್ಲಿ ಬಳಸುತ್ತಾರಂತೆ.

ಮಧ್ಯಪಾನ ಕಿಕ್ ಕೊಡುವುದಕ್ಕೆ ಈ ದ್ರವ ಪಧಾರ್ಥವನ್ನು ಬಹಳ ಹಿಂದೆ ತಯಾರು ಮಾಡುತ್ತಿದ್ದ ವೈನ್ ಗೆ ಮಿಶ್ರಣ ಮಾಡಲಾಗುತ್ತಿತ್ತು ಎಂದು ಸಂಶೋಧನೆಗಳು ತಿಳಿಸಿವೆ. ಅದರ ಜೊತೆಗೆ ಈ ಸ್ಟರ್ಡ್ ತಿಮಿಂಗಿಲದಲ್ಲಿರುವ ಈ ಆಂಬಾ ಗ್ರೀಸ್ ದ್ರವವನ್ನು ವಿಶ್ವದ ಪ್ರಸಿದ್ದ ಸುಗಂಧಭರಿತ ದ್ರವ್ಯಗಳಿಗೆ ಬಳಸಿ ಅದರಿಂದ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಇನ್ನು ಕಳೆದ ವರ್ಷ ಜೂನ್ ನಲ್ಲಿ ಮೀನುಗಾರರಿಗೆ ಈ ಸ್ಟರ್ಡ್ ತಿಮಿಂಗಲ ವಾಂತಿ ಮಾಡಿದಾಗ ಈ ದ್ರವ ಪಧಾರ್ಥ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದು ಇದನ್ನ ಸ್ಥಳೀಯ ಅನುಭವಸ್ಥರಿಗೆ ಹೇಳಿದಾಗ ಇದರ ಮಹತ್ವವನ್ನು ತಿಳಿದಿದ್ದಾರೆ. ಬಳಿಕ ಈ ತಿಮಿಂಗಿಲದ ವಾಂತಿಯಲ್ಲಿದ್ದ ಆಂಬಾ ಗ್ರೀಸ್ ದ್ರವವನ್ನು ಕೋಟ್ಯಾಂತರ ರೂ.ಗೆ ಸಂಶೋಧನೆ ಸಂಸ್ಥೆ ಒಂದು ಖರೀದಿ ಮಾಡಿ ಆ ಮೀನುಗಾರರು ದಿನ ಕಳೆಯುವ ಅಷ್ಟೋರಳಗೆ ಕೋಟ್ಯಾಧೀಶ್ವರ ಆಗಿದ್ದು ನಿಜಕ್ಕೂ ಕೂಡ ಅಚ್ಛರಿಯ ಸಂಗತಿಯಾಗಿದೆ.