ಗೋಲ್ಡನ್ ಸ್ಟಾರ್ ಗಣೇಶ್ ಸೂಪರ್ ಸ್ಟಾರ್ ಆಗೋದನ್ನು ತಡೆದ ಸಿನೆಮಾಗಳಿವು

ಸ್ಯಾಂಡಲ್ ವುಡ್ ನಿರ್ಮಾಪಕರ ಚಿನ್ನದ ಗಣಿ ಆಗಿದ್ದ ಗೋಲ್ಡನ್ ಸ್ಟಾರ್ ಗಣಿ ಫ್ಲಾಪ್ ಸ್ಟಾರ್ ಆಗಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬ ನಟರಿಗೂ ಕೂಡ ಉತ್ತಮ ಪಾಠ ಎನ್ನಬಹುದು.ಇಪ್ಪತ್ತರ ದಶಕದಲ್ಲಿ ಕನ್ನಡದ ಸೂಪರ್ ಸ್ಟಾರ್ ನಟ ಗಣೇಶ್.ನಾಟಕ,ಕಿರುತೆರೆ ಧಾರಾವಾಹಿ, ಕಾಮಿಡಿ ಟೈಮ್ ಎಂಬ ಶೂ ಮುಖಾಂತರ ಜನಪ್ರಿಯ ನಿರೂಪಕನಾಗಿ ಗುರುತಿಸಿಕೊಂಡು ಚೆಲ್ಲಾಟ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟ ಗಣೇಶ್ ತದ ನಂತರ ಆಗಿದ್ದು ಈಗ ಇತಿಹಾಸ. ಹೌದು ಮನುಷ್ಯ ಯಾವಾಗಬೇಕಾದರು ಏನಾದ್ರೂ ಆಗ್ಬೋದು.ಅದಕ್ಕೆ ತಕ್ಕ ಪರಿಶ್ರಮ ಪ್ರತಿಭೆಗೆ ಅವಕಾಶ ಸಿಕ್ಕೇ ಸಿಗುತ್ತದೆ.ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮವಾಗಿ ಜೀವನ ರೂಪಿಸಿಕೊಳ್ಳುವುದು ಅವರ ವ್ಯಕ್ತಿತ್ವಕ್ಕೆ ಬಿಟ್ಟದ್ದು.ಅದರಂತೆ ನಟ ಗಣೇಶ್ ಕೂಡ ಸಿನಿಮಾಗಳಲ್ಲಿ ಸಿಕ್ಕಂತಹ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ನಟನಾಗಿ ಮಿಂಚಿದರು ಕೂಡ ಯಶಸ್ಸಿನ ಉತ್ತುಂಗ ಮಟ್ಟ ಏರಿದರು ಸಹ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಎಡವಿದರು ಗಣೇಶ್.ಕನ್ನಡ ಚಿತ್ರರಂಗದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆ ಗಣೇಶ್ ಅವರದ್ದು.

2006 ರಲ್ಲಿ ತೆರೆಕಂಡ ಚೆಲ್ಲಾಟ ಚಿತ್ರ ಗಣೇಶ್ ಅವರ ನಾಯಕತ್ವದ ಮೊದಲ ಚಿತ್ರ.ಈ ಚಿತ್ರ ಉತ್ತಮ ಮೆಚ್ಚುಗೆ ಪಡೆದು ಗಣೇಶ್ ಚಂದನವನದ ಭರವಸೆಯ ನಟರಾಗಿ ಉಳಿದುಕೊಂಡರು.ತದ ನಂತರ ಮುಂಗಾರು ಮಳೆ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಯಾರೂ ಕೂಡ ಊಹಿಸಲಾಗದ ಹಾಗೇ ಸೂಪರ್ ಡೂಪರ್ ಎವರಗ್ರೀನ್ ಮೂವಿಯಾಗಿ ಉಳಿಯಿತು.ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿತು. ಮುಂಗಾರು ಮಳೆ ಚಿತ್ರದ ಯಶಸ್ಸಿನ ನಂತರ ಗಣೇಶ್ ಅವರಿಗೆ ಗೋಲ್ಡನ್ ಸ್ಟಾರ್ ಎಂಬ ಬಿರುದು ಬಂತು.ಅದಕ್ಕೆ ತಕ್ಕಂತೆ ಗಣೇಶ್ ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗುತ್ತಿದ್ದವು.ಗೋಲ್ಡನ್ ಸ್ಟಾರ್ ಗಣಿ ನಿರ್ಮಾಪಕರಿಗೆ ಚಿನ್ನದ ಗಣಿಯಾಗಿ ಬಿಟ್ಟರು.ಮುಂಗಾರು ಮಳೆ ನಂತರ ಹುಡುಗಾಟ,ಚೆಲುವಿನ ಚಿತ್ತಾರ,ಕೃಷ್ಣ,ಗಾಳಿಪಟ,ಅಲಮನೆ ಹೀಗೆ ಸಾಲು ಸಾಲು ಚಿತ್ರಗಳು ಅಮೋಘ ಯಶಸ್ಸು ಕಂಡವು.

ಆದರೆ ಇದರ ಬಳಿಕ ಬಂದಂತಹ ಬೊಂಬಾಟ್,ಸಂಗಮ,ಸರ್ಕಸ್,ಉಲ್ಲಾಸ ಉತ್ಸಾಹ ಎಂಬಂತಹ ಸಿನಿಮಾಗಳು ಗಣೇಶ್ ಅವರ ಸ್ಟಾರ್ ಗಿರಿಯನ್ನೇ ತಲೆಕೆಳಗಾಗಿ ಮಾಡಿಬಿಟ್ಟಿತ್ತು.ಸ್ಯಾಂಡಲ್ ವುಡ್ ನ ಸೋಲಿಲ್ಲದ ಸರದಾರ ಅಂತಿದ್ದ ಗಣೇಶ್ ಗೆ ಸೋಲು ಗಳ ಸರಮಾಲೆಯೇ ಅಂಟಿಕೊಂಡಿತ್ತು.ಇವರ ಸೋಲಿಗೆ ಪ್ರಮುಖ ಕಾರಣ ಕಥೆಯ ಆಯ್ಕೆಯಲ್ಲಿ ಎಡವಿದ್ದದ್ದೂ.ಜನಪ್ರಿಯತೆಯ ಉತ್ತುಂಗದಲ್ಲಿದ್ದ ನಟರು ತಮ್ಮ ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಆಲಸ್ಯ ಮಾಡಿದರೆ ತಮ್ಮ ವೃತ್ತಿ ಜೀವನದಲ್ಲಿ ಯಾವ ರೀತಿಯ ವ್ಯತಿರಿಕ್ತ ಪರಿಣಾಮ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ನಟ ಗಣೇಶ್ ಉತ್ತಮ ಉದಾಹರಣೆ ಆಗಿದ್ದಾರೆ.ಶ್ರಾವಣಿ ಸುಬ್ರಮಣ್ಯ,ಆಟೋರಾಜ,ಮಳೆಯಲಿ ಜೊತೆಯಲಿ,ಚಮಕ್ ಅಂತಹ ಸಿನಿಮಾಗಳ ಮೂಲಕ ಮತ್ತೆ ಗೆಲುವಿನ ನಗೆ ಬೀರುತ್ತಿರುವ ಗಣೇಶ್ ಸದ್ಯಕ್ಕೆ ಸಿಂಪಲ್ ಸುನಿ ಅವರ ಜೊತೆ ಸಖತ್, ರಾಯಗಢ ಎಂಬಂತಹ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Leave a Reply

%d bloggers like this: