ಥಿಯೇಟರ್ ಅಲ್ಲಿ ಮೋಡಿ ಮಾಡಿದ ಬಳಿಕ ಓಟಿಟಿ ಬಿಡುಗಡೆ ದಿನಾಂಕ ಘೋಷಿಸಿದ ಬ್ರಹ್ಮಾಸ್ತ್ರ ಚಿತ್ರತಂಡ

ಬಾಲಿವುಡ್ ನಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ತೆರೆ ಕಂಡು ಬಾಕ್ಸ್ ಅಫೀಸ್ ನಲ್ಲಿ ಧೂಳೆಬ್ಬಿಸಿದ್ದ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಮುಖ್ಯ ಭೂಮಿಕೆಯ ಪ್ಯಾನ್ ಇಂಡಿಯಾ ಬ್ರಹ್ಮಾಸ್ತ್ರ ಸಿನಿಮಾ ಇದೀಗ ಓಟಿಟಿಗೆ ಬರಲು ಫಿಕ್ಸ್ ಆಗಿದೆ. ಈ ಬ್ರಹ್ಮಾಸ್ತ್ರ ಚಿತ್ರದ ಗೆಲುವು ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಹಿಂದಿ ಚಿತ್ರರಂಗಕ್ಕೆ ಎನರ್ಜಿ ಬೂಸ್ಟ್ ಅಂತೆ ಆಗಿತ್ತು. ಯಾಕಂದ್ರೆ ಆಲಿಯಾ ಭಟ್ ಅವರ ಬ್ರಹ್ಮಾಸ್ತ್ರ ಸಿನಿಮಾ ಬರೋವರೆಗೂ ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ನಟರ ಸಿನಿಮಾಗಳೆಲ್ಲಾ ವಿಫಲವಾಗಿತ್ತು. ಆದ ಕಾರಣ ಈ ಬ್ರಹ್ಮಾಸ್ತ್ರ ಸಿನಿಮಾ ಗೆಲ್ಲಲೇಬೇಕು ಎಂದು ಇಡೀ ಬಾಲಿವುಡ್ ರಂಗವೇ ಅಭಿಲಾಶೆ ಇಟ್ಟುಕೊಂಡಿತು.

ಈ ಬ್ರಹ್ಮಾಸ್ತ್ರ ಚಿತ್ರದ ಇನ್ನೊಂದು ಗಮನಾರ್ಹವಾಗಿ ಹುಬ್ಬೇರಿಸುವುದು ಅಂದರೆ ಅದು ನಟಿ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಇಬ್ಬರು ಕೂಡ ಈ ಚಿತ್ರದ ಶೂಟಿಂಗ್ ಸಮಯದಲ್ಲಿಯೇ ಹೆಚ್ಚಾಗಿ ಆಪ್ತತೆಯನ್ನ ಬೆಳೆಸಿಕೊಂಡು ಪ್ರೀತಿ ಪ್ರೇಮ ಮದುವೆ ಅನ್ನೋ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟು ಆಲಿಯಾ ಭಟ್ ಅವರು ತಾಯಿಯೂ ಕೂಡ ಆಗಿದ್ದಾರೆ. ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಇದೇ ಮೊದಲ ಬಾರಿಗೆ ಜೋಡಿಯಾಗಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಸೆಪ್ಟೆಂಬರ್ 9ರಂದು ಬ್ರಹ್ಮಾಸ್ತ್ರ ಸಿನಿಮಾ ವರ್ಲ್ಡ್ ವೈಡ್ ಅದ್ದೂರಿಯಾಗಿ ರಿಲೀಸ್ ಅಗಿ ಭರ್ಜರಿ ಪ್ರದರ್ಶನ ಕಂಡಿತು. ಥ್ರೀಡಿಯಲ್ಲಿ ಮೂಡಿ ಬಂದಿದ್ದ ಈ ಚಿತ್ರ ಪ್ರೇಕ್ಷಕರನ್ನ ಮೋಡಿ ಮಾಡಿ ಮೊದಲನೇ ದಿನವೇ ಬರೋಬ್ಬರಿ 75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 160 ಕೋಟಿ ಹೀಗೆ ಉತ್ತಮ ಗಳಿಕೆ ಹೀಗೆ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆದ ಹದಿನೈದು ದಿನದಲ್ಲೇ ಬರೋಬ್ಬರಿ ನಾಲ್ಕು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿತು.

ಇದೀಗ ಥಿಯೇಟರ್ ನಿಂದ ಭರ್ಜರಿ ಕಲೆಕ್ಷನ್ ಮಾಡಿರುವ ಬ್ರಹ್ಮಾಸ್ತ್ರ ಸಿನಿಮಾ ಓಟಿಟಿಗೂ ಕೂಡ ಪ್ರವೇಶ ಮಾಡಿದೆ. ಇದೇ ಅಕ್ಟೋಬರ್ 23 ಅಂದರೆ ನಾಳೆ ಭಾನುವಾರ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ ಬ್ರಹ್ಮಾಸ್ತ್ರ ಸಿನಿಮಾ ಎಲ್ಲವೂ ಅಂದುಕೊಂಡತೆ ಆದರೆ ಅಧಿಕೃತವಾಗಿ ನವೆಂಬರ್ 4ರಂದು ಓಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ. ಬ್ರಹ್ಮಾಸ್ತ್ರ ಸಿನಿ‌ಮಾಗೆ ಸ್ಟಾರ್ ಸ್ಟೂಡಿಯೋಸ್, ಧರ್ಮ ಪ್ರೊಡಕ್ಷನ್, ಪ್ರೈಮ್ ಫೋಕಸ್ ಅಂಡ್ ಸ್ಟಾರ್ಲೈಟ್ ಪಿಕ್ಚರ್ಸ್ ಜಂಟಿಯಾಗಿ ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣ ಆಗಿತ್ತು. ಒಟ್ಟಾರೆಯಾಗಿ ಥ್ರೀಡಿಯಲ್ಲಿ ತೆರೆಕಂಡು ಪ್ರೇಕ್ಷಕರಿಗೆ ಮೋಡಿ ಮಾಡಿದ್ದ ಬ್ರಹ್ಮಾಸ್ತ್ರ ಸಿನಿಮಾ ಇದೀಗ ಓಟಿಟಿಯಲ್ಲಿ ಯಾವ ರೀತಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Reply

%d bloggers like this: