ಥೈಲ್ಯಾಂಡ್ ನತ್ತ 777 ಚಾರ್ಲಿ ಚಿತ್ರ

777 ಚಾರ್ಲಿ ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಭಾಂಧವ್ಯ ಹೇಗೆ ಇರಲಿದೆ‌ ಅನ್ನೋದನ್ನ ಮನ ಮುಟ್ಟುವಂತೆ ತೋರಿಸಿ ಕನ್ನಡ ಸಿನಿ ಪ್ರೇಕ್ಷಕರನ್ನ ಮಾತ್ರ ಅಲ್ಲದೇ ಪರಭಾಷೆ ಪ್ರೇಕ್ಷಕರ ಮನವನ್ನೂ ಗೆದ್ದು ಎಲ್ಲಾ ಕಡೆ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತು. ಅದರ ಜೊತೆಗೆ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿ ಭಾರತೀಯ ಚಿತ್ರರಂಗದ ಬಾಕ್ಸ್ ಆಪೀಸ್ ನಲ್ಲಿ ಬರೋಬ್ಬರಿ ನೂರೈವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಅದಲ್ಲದೇ ಓಟಿಟಿಯಲ್ಲಿಯೂ ಸಹ ಚಾರ್ಲಿ ಸಿನಿಮಾ ಎಲ್ಲರ ಮನಗೆದ್ದು ರಕ್ಷಿತ್ ಶೆಟ್ಟಿ ಅಂಡ್ ಟೀಮ್ ಕಮಾಲ್ ಮಾಡಿತು. ಇನ್ನೊಂದು ವಿಶೇಷ ಅಂದರೆ 777 ಚಾರ್ಲಿ ಸಿನಿಮಾ ನಿರ್ದೇಶಕ ಕಿರಣ್ ರಾಜ್ ಅವರಿಗೆ ಚೊಚ್ಚಲ ನಿರ್ದೇಶನ ಆಗಿದ್ದರೂ ಅಭೂತಪೂರ್ವ ಯಶಸ್ಸು ಸಿಕ್ಕಿದ ಕಾರಣ ನಿರ್ದೇಶಕ ಕಿರಣ್ ರಾಜ್ ಅವರ ವೃತ್ತಿ ಜೀವನಕ್ಕೆ ಒಂದು ಹೊಸ ತಿರುವು ಸಿಕ್ಕಿತು.

ಪರಮ್ವಾ ಸ್ಟೂಡಿಯೋಸ್ ಬ್ಯಾನರಡಿಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಗುಪ್ತಾ ಅವರು 777 ಚಾರ್ಲಿ ಸಿನಿಮಾವನ್ನ ಬರೋಬ್ಬರಿ ಸರಿ ಸುಮಾರು ಇಪ್ಪತ್ತು ಕೋಟಿಗೂ ಅಧಿಕ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಿಸಿದ್ದರು. ಅದರಂತೆ 777 ಚಾರ್ಲಿ ಸಿನಿಮಾ ಕೂಡ ನಿರೀಕ್ಷೆಗೆ ಮೀರಿ ಯಶಸ್ಸು ಕಂಡು ರಕ್ಷಿತ್ ಶೆಟ್ಟಿ ಅವರಿಗೆ ಬ್ರೇಕ್ ನೀಡಿತು. ಅದರ ಜೊತೆಗೆ ಅವರ ಜೇಬನ್ನ ಕೂಡಾ ತುಂಬಿಸಿತು. ರಕ್ಷಿತ್ ಶೆಟ್ಟಿ ಮತ್ತು ಸಂಗೀತಾ ಶೃಂಗೇರಿ ಜೋಡಿಯಲ್ಲಿ ಮೂಡಿಬಂದ 777 ಚಾರ್ಲಿ ಸಿನಿಮಾ ಥಿಯೇಟರ್ ಮತ್ತು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿಯೂ ಸಹ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡು ಇದೀಗ ಮತ್ತೆ ಸದ್ದು ಮಾಡುತ್ತಿದೆ. ಅದೇನಪ್ಪಾ ಅಂದರೆ 777 ಚಾರ್ಲಿ ಸಿನಿಮಾ ಥಾಯ್ಲೆಂಡ್ ನಲ್ಲಿ ರಿಲೀಸ್ ಆಗ್ತಾಯಿದೆಯಂತೆ. ಈ ವಿಷಯವನ್ನ ಸ್ವತಃ 777 ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್ ರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೈವ್ ಬಂದು ತಿಳಿಸಿದ್ದಾರೆ. ಈ ಸುದ್ದಿ ನಿಜಕ್ಕೂ ಕೂಡ ಕನ್ನಡಿಗರಾದ ನಾವೆಲ್ಲರೂ ಹೆಮ್ಮೆ ಸಂತೋಷ ಪಡುವಂತಹ ಸುದ್ದಿಯಾಗಿದೆ. ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಿಗೆ ಇದು ಅತ್ಯಂತ ಸಂತಸದ ವಿಚಾರವಾಗಿದೆ. ಒಟ್ಟಾರೆಯಾಗಿ 777 ಚಾರ್ಲಿ ಸಿನಿಮಾ ದೇಶದ ಗಡಿಯಾಚೇ ಮತ್ತೆ ಸದ್ದು ಮಾಡುವ ಮೂಲಕ ಸುದ್ದಿಯಾಗ್ತಿದೆ.

Leave a Reply

%d bloggers like this: