ತಂದೆಯಿಂದ ದುಬಾರಿ ಬೆಲೆಯ ಐಷಾರಾಮಿ ಬೆಂಜ್ ಕಾರು ಉಡುಗೊರೆಯಾಗಿ ಪಡೆದ ದಕ್ಷಿಣ ಭಾರತದ ನಟಿ

ಜ್ಯೂನಿಯರ್ ಸಮಂತಾ ಅಂತಾನೇ ಕರೆಸಿಕೊಳ್ಳೋ ನಟಿ ಅಶುರೆಡ್ಡಿ ಬರ್ಥ್ ಡೇ ಗೆ ಭರ್ಜರಿ ಗಿಫ್ಟ್ ಪಡೆದು ಟಾಲಿವುಡ್ ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಹೌದು ಯಾರು ಈ ಜ್ಯೂನಿಯರ್ ಸಮಂತಾ ಅಂತೀರಾ. ಬಾಲಿವುಡ್ ರಿಯಲಿಸ್ಟಿಕ್ ಫೇಮಸ್ ಡೈರೆಕ್ಟರ್ ಆಗಿರೋ ರಾಮ್ ಗೋಪಾಲ್ ವರ್ಮಾ ಅವರ ಕೆನ್ನೆಗೆ ಬಾರಿಸಿ ಭಾರಿ ಸುದ್ದಿಯಾಗಿದ್ದ ನಿರೂಪಕಿಯೇ ಈ ಜ್ಯೂನಿಯರ್ ಸಮಂತಾ ಅಶುರೆಡ್ಡಿ. ಅಶುರೆಡ್ಡಿ ನಟಿ ಮಾತ್ರ ಅಲ್ಲ. ಅವರು ರೂಪದರ್ಶಿ, ನಿರೂಪಕಿ ಕೂಡಾ ಹೌದು. ಅವರು ಒಂದಷ್ಟು ಖಾಸಗಿ ವಾಹಿನಿಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಅದೇ ರೀತಿ ಸಿನಿಮಾವೊಂದರ ಪ್ರಚಾರ ಸಂದರ್ಶನದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಅತಿರೇಕ ವರ್ತನೆಯಿಂದ ರೋಸಿಹೋಗಿ ನಿರೂಪಕಿಯಾಗಿದ್ದ ಅಶುರೆಡ್ಡಿ ಅವರ ಕಪಾಳಕ್ಕೆ ಹೊಡೆದಿದ್ದರು. ಇದು ಅಂದಿನ ದಿನಗಳಲ್ಲಿ ಭಾರಿ ವೈರಲ್ ಆಗಿತ್ತು. ಆದ್ರೆ ಇದೆಲ್ಲವೂ ಪೂರ್ವ ನಿಯೋಜಿತ ಎಂದು ತಿಳಿದು ಬಂದಿತ್ತು.

ಈ ಮೂಲಕ ನಟಿ ಅಶುರೆಡ್ಡಿ ಕೊಂಚ ನೇಮು ಫೇಮು ಗಿಟ್ಟಿಸಿಕೊಂಡರು. ಅದಲ್ಲದೇ ಬಿಗ್ ಬಾಸ್ ರಿಯಾಲಿಟಿ ಶೋಗೂ ಕೂಡ ಹೋಗಿ ಬಂದ್ರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಆಂಕರ್ , ಮಾಡೆಲ್ ಕಮ್ ನಟಿ ಅಶುರೆಡ್ಡಿ ಅವರಿಗೆ ಇದೇ ಸೆಪ್ಟೆಂಬರ್ 15ರಂದು ಜನ್ಮದಿನದ ಸಂಭ್ರಮ. ಈ ಸಂಭ್ರಮ ಮತ್ತಷ್ಟು ಮೆರಗು ನೀಡಿದ್ದು ಅವರ ತಂದೆ ನೀಡಿದ ಭರ್ಜರಿ ಗಿಫ್ಟ್ ಅಂತ ಹೇಳ್ಬೋದು. ಹೌದು ಅಶು ರೆಡ್ಡಿ ಅವರಿಗೆ ಅವರ ಜನ್ಮ ದಿನದ ಪ್ರಯುಕ್ತ ಅವರ ತಂದೆ ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಈ ಮರ್ಸಿಡಿಸ್ ಬೆಂಝ್ ಕಾರು ಜರ್ಮನ್ ಬ್ರಾಂಡ್ ಆಗಿದ್ದು, ಇದರ ಬೆಲೆ ಬರೋಬ್ಬರಿ 70 ಲಕ್ಷ ಎಂದು ತಿಳಿದು ಬಂದಿದೆ. ಬಿಳಿ ಬಣ್ಣದ ಈ ಮರ್ಸಿಡಿಸ್ ಬೆಂಝ್ ಕಾರಿನ ಮುಂದೆ ನಿಂತು ಗಿಫ್ಟ್ ನೀಡಿದ ತಂದೆಗೆ ಸ್ವೀಟ್ ತಿನ್ನಿಸುತ್ತಿರೋ ಫೋಟೋವನ್ನ ಆಶುರೆಡ್ಡಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಶುರೆಡ್ಡಿ ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬರೋಬ್ಬರಿ ಹದಿನೇಳು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

Leave a Reply

%d bloggers like this: