ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರನ್ನ ಕೂಡಾ ಸೈಡ್ ಲೈನ್ ಮಾಡಿದ ರಿಷಬ್ ಶೆಟ್ಟಿ ಅವರು

ಟಾಲಿವುಡ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನ ಕೂಡಾ ಸೈಡ್ ಲೈನ್ ಮಾಡಿದ ರಿಷಬ್ ಶೆಟ್ಟಿ! ಹೌದು ಈ ವಿಚಾರ ಕೇಳಿದಾಕ್ಷಣ ಎಂತವರಿಗಾದರೂ ಒಂದು ಕ್ಷಣ ಅಚ್ಚರಿ ಆಗುತ್ತೆ. ಅರೇ ಇದೇನಪ್ಪಾ ಕಾಂತಾರ ಅನ್ನೋ ಒಂದೇ ಒಂದು ಕ್ಲಾಸಿಕ್ ಸಿನಿಮಾ ಪ್ಯಾನ್ ಇಂಡಿಯಾ ಸೂಪರ್ ಹಿಟ್ ಆಗಿದ್ದೇ ತಡ ರಿಷಬ್ ಶೆಟ್ಟಿ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರನ್ನೇ ಹಿಂದಿಕ್ಕಿದ್ರಾ ಅನ್ನೋ ಮಾತು ಕೇಳಿ ಬರ್ತಿದೆ. ಅಸಲಿ ವಿಚಾರ ಏನಪ್ಪಾ ಅಂದರೆ ನಮ್ಮ ಕನ್ನಡದ ಅದ್ಭುತ ಪ್ರತಿಭೆ ನಟ ರಿಷಬ್ ಶೆಟ್ಟಿ ಅವರು ನಟಿಸಿ ನಿರ್ದೇಶನ ಮಾಡಿದ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ದಾಖಲೆ ಸೃಷ್ಟಿಸಿದೆ. ಕೇವಲ 12 ರಿಂದ 15 ಕೋಟಿಯಲ್ಲಿ ತಯಾರಾದ ಕಾಂತಾರ ಸಿನಿಮಾ ಇಂದು ನೂರಾರು ಕೋಟಿ ಬಾಚಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

ಕಾಂತಾರ ಸಿನಿಮಾ ಕೇವಲ ಕನ್ನಡ ಸಿನಿ ಪ್ರೇಕ್ಷಕರು ಮಾತ್ರ ಅಷ್ಟೇ ಅಲ್ಲ ಪರಭಾಷೆಯ ಪ್ರೇಕ್ಷಕರಿಗೂ ಕೂಡ ಇಷ್ಟವಾಗಿ ಅಲ್ಲಿನ ಪರರಾಜ್ಯಗಳ ಸಿನಿ ಪ್ರಿಯರು ಸಹ ಕಾಂತಾರ ಸಿನಿಮಾವನ್ನ ತಮ್ಮ ಭಾಷೆಯಲ್ಲಿಯೂ ಡಬ್ ಮಾಡುವಂತೆ ಮನವಿ ಮಾಡ್ತಾರೆ. ಅದಾದ ನಂತರ ಕಾಂತಾರ ಸಿನಿಮಾ ಕನ್ನಡ ಭಾಷೆಯಲ್ಲಿ ಸೂಪರ್ ಹಿಟ್ ಖುಷಿಯಲ್ಲಿ ತೆಲುಗು, ತಮಿಳು, ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ ರಿಲೀಸ್ ಆಯಿತು. ಸಿನಿಮಾ ನೋಡಿದ ಬೇರೆ ಬೇರೆ ಭಾಷೆಯ ಸಿನಿಪ್ರಿಯರು ಕನ್ನಡ ಮಣ್ಣಿನ ಸೊಗಡಿನ ಕಾಂತಾರ ಸಿನಿಮಾ ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ರಿಷಬ್ ಶೆಟ್ಟಿ ಅವರ ನಟನೆಗೆ ಫಿಧಾ ಆದ್ರು. ಈ ಮೂಲಕ ಕಾಂತಾರ ಸಿನಿಮಾ ಯಾರೂ ಕೂಡ ಊಹೆ ಮಾಡದಂತೆ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ ಮುನ್ನೂರು ಕೋಟಿಗೂ ಅಧಿಕ ಗಳಿಕೆ ಮಾಡಿ ಇಡೀ ಭಾರತೀಯ ಚಿತ್ರರಂಗ ಮತ್ತೊಮ್ಮೆ ನಿಬ್ಬೆರಗಾಗಿ ಕನ್ನಡ ಚಿತ್ರರಂಗದತ್ತ ನೋಡುವಂತೆ ಆಯಿತು. ಜೊತೆಗೆ ರಿಷಬ್ ಶೆಟ್ಟಿ ಅವರು ಈ ಕಾಂತಾರ ಚಿತ್ರದ ಮೂಲಕ ವರ್ಲ್ಡ್ ವೈಡ್ ಫೇಮಸ್ ಆಗಿ ಅಪಾರ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ.

ಇದೆಲ್ಲದರ ಜೊತೆಗೆ ಅಚ್ಚರಿಯ ಬೆಳವಣಿಗೆಯೊಂದು ಆಗೋಗಿದೆ. ಹೌದು ಸುಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ಚಿತ್ರ ಮಾಡಿದ ಕಲೆಕ್ಷನ್ ಅನ್ನ ನಮ್ಮ ಕನ್ನಡದ ಕಾಂತಾರ ಸಿನಿಮಾ ಬ್ರೇಕ್ ಮಾಡಿದೆ. ಹೌದು ಪುಷ್ಪಾ ಭಾಗ-1 ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 365 ಮುನ್ನೂರ ಅರವತ್ತೈದು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿತ್ತು. ಇದೀಗ ನಮ್ಮ ಕನ್ನಡದ ಕಾಂತಾರ ಸಿನಿಮಾ 375 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ 400 ಕೋಟಿಯ ಗಡಿ ತಲುಪಿದೆ. ಈ ಮೂಲಕ ಅಲ್ಲು ಅರ್ಜುನ್ ಅವರ ಪುಷ್ಪಾ ಸಿನಿಮಾದ ದಾಖಲೆಯನ್ನ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಸೈಡ್ ಲೈನ್ ಮಾಡಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಾಣ ಮಾಡಿದ ಕಾಂತಾರ ಸಿನಿಮಾ ಇತ್ತೀಚೆಗಷ್ಟೆ ಯಶಸ್ವಿಯಾಗಿ ಐವತ್ತು ದಿನಗಳನ್ನ ಪೂರೈಸಿಕೊಂಡು ಎಲ್ಲಾ ಸೆಂಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.

Leave a Reply

%d bloggers like this: